ಆಸ್ಟ್ರೇಲಿಯಾ ಪ್ರವಾಸಕ್ಕೆ ಅಲಭ್ಯ: ರೋಹಿತ್ ಶರ್ಮಾ ಗಾಯದ ಬಗ್ಗೆ ಪಾರದರ್ಶಕತೆಗೆ ಗವಾಸ್ಕರ್ ಕರೆ

ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಪ್ರಕಟಿಸಲಾಗಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಆರಂಭಿಕ ಸ್ಟಾರ್ ಆಟಗಾರ ರೋಹಿತ್ ಶರ್ಮಾರ ಫಿಟ್ನೆಸ್ ಸಂಬಂಧ ಪಾರದರ್ಶಕತೆಗೆ ಬ್ಯಾಟಿಂಗ್ ಲೆಜೆಂಡ್ ಸುನೀಲ್ ಗವಾಸ್ಕರ್ ಕರೆ ನೀಡಿದ್ದಾರೆ.
ಸುನೀಲ್ ಗವಾಸ್ಕರ್
ಸುನೀಲ್ ಗವಾಸ್ಕರ್

ಶಾರ್ಜಾ: ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಪ್ರಕಟಿಸಲಾಗಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಆರಂಭಿಕ ಸ್ಟಾರ್ ಆಟಗಾರ ರೋಹಿತ್ ಶರ್ಮಾರ ಫಿಟ್ನೆಸ್ ಸಂಬಂಧ ಪಾರದರ್ಶಕತೆಗೆ ಬ್ಯಾಟಿಂಗ್ ಲೆಜೆಂಡ್ ಸುನೀಲ್ ಗವಾಸ್ಕರ್ ಕರೆ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳಿಗಾಗಿ ಟೀಂ ಇಂಡಿಯಾ ಆಟಗಾರರ ಹೆಸರನ್ನು ಬಿಸಿಸಿಐ ಸೋಮವಾರ ಸಂಜೆ ಪ್ರಕಟಿಸಿದ್ದು, ಅದರಲ್ಲಿ ಮಂಡಿಯ ಗಾಯದ ಕಾರಣ ಕಳೆದ ಎರಡು ಐಪಿಎಲ್ ಪಂದ್ಯಗಳಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಅವರ ಹೆಸರನ್ನು ಕೈ ಬಿಡಲಾಗಿದೆ.

ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಅವರ  ಫಿಟ್ನೆಸ್ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ನಿರಂತರವಾಗಿ ನಿಗಾ ವಹಿಸಲಿದೆ ಎಂದು  ಕಾರ್ಯದರ್ಶಿ ಜಯ್ ಶಾ ಹೇಳಿರುವ ಹೇಳಿಕೆಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ಆದಾಗ್ಯೂ, ಹೆಸರು ಪ್ರಕಟಿಸಿದ ಕೂಡಲೇ ಮುಂಬೈ ಇಂಡಿಯನ್ಸ್ ಎರಡು ಫೋಟೋಗಳು ಹಾಗೂ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಅದರಲ್ಲಿ ರೋಹಿತ್ ಶರ್ಮಾ ನೆಟ್ ಪ್ರಾಕ್ಟೀಸ್  ಮಾಡುತ್ತಿರುವುದು ಕಂಡುಬಂದಿದೆ.

ರೋಹಿತ್ ಶರ್ಮಾ ಗಾಯದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಒಂದು ವೇಳೆ ಅವರ ಗಾಯ ಗಂಭೀರವಾಗಿದ್ದರೆ, ಅವರು ಆಡುವ ಅಗತ್ಯವಿಲ್ಲ. ಆದ್ದರಿಂದ ಡಿಸೆಂಬರ್ ನಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯಗಳ ಬಗ್ಗೆ ನಾವು ಮಾತಾಡುವುದಾಗಿ ಗವಾಸ್ಕರ್ ಕೆಕೆಆರ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಣ ಪಂದ್ಯ ಮುಗಿದ ನಂತರ ಸ್ಟಾರ್ ಸ್ಪೋರ್ಟ್ ಗೆ ಹೇಳಿದರು.

ಕಳೆದ ಎರಡು ಐಪಿಎಲ್ ಪಂದ್ಯಗಳಲ್ಲಿ ಆಡದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಮಾಯಾಂಕ್ ಅಗರ್ ವಾಲ್ ಅವರ ಹೆಸರು ಆಸ್ಪ್ರೇಲಿಯಾ ಪ್ರವಾಸದಲ್ಲಿರುವ ಪಟ್ಟಿಯಲ್ಲಿರುವುದನ್ನು ಉಲ್ಲೇಖಿಸಿದ ಗವಾಸ್ಕರ್, ಫ್ರಾಂಚೈಸಿಗಳು ಕೈ ಬಿಡಲು ಬಯಸುವುದಿಲ್ಲ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ,  ಪಂದ್ಯವನ್ನು ಗೆಲ್ಲಲು  ಅವರು ಇಲ್ಲಿದ್ದಾರೆ. ವಿರೋಧಗಳಿಗೆ ಯಾವುದೇ ಮಾನಸಿಕ ಪ್ರಯೋಜನವನ್ನು ನೀಡಲು ಅವರು ಬಯಸುವುದಿಲ್ಲ ಎಂದರು. 

ಆದರೆ, ಟೀಂ ಇಂಡಿಯಾ ಬಗ್ಗೆ ಮಾತನಾಡುವಾಗ, ಮಾಯಾಂಕ್ ಅಗರ್ ವಾಲ್ ಕೂಡಾ ಆಡದಿದ್ದರೇ, ಕ್ರಿಕೆಟ್ ಪ್ರೇಮಿಗಳು, ಪ್ರಮುಖ ಇಬ್ಬರು ಆಟಗಾರರಿಗೆ ಏನಾಗಿದೆ ಎಂಬುದನ್ನು ತಿಳಿಯಬೇಕಾಗುತ್ತದೆ ಎಂದು ಗವಾಸ್ಕರ್ ಹೇಳಿದರು.ನವೆಂಬರ್ 10 ರಂದು ಐಪಿಎಲ್ ಪಂದ್ಯ ಮುಗಿದ ಕೂಡಲೇ ಆಟಗಾರರು ಯುಎಇನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com