ಐಪಿಎಲ್ 2020: ಜಡೇಜಾ ಆರ್ಭಟ, ಕೋಲ್ಕತ್ತಾ ವಿರುದ್ಧ ಚೆನ್ನೈಗೆ  6 ವಿಕೆಟ್​ ಗೆಲುವು

ಐಪಿಎಲ್​ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದೆ.
ಐಪಿಎಲ್ 2020: ಜಡೇಜಾ ಆರ್ಭಟ, ಕೋಲ್ಕತ್ತಾ ವಿರುದ್ಧ ಚೆನ್ನೈಗೆ  6 ವಿಕೆಟ್​ ಗೆಲುವು

ದುಬೈ: ಐಪಿಎಲ್​ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದೆ.

ಗೆಲ್ಲಲು 173 ರನ್​ಗಳ ಗುರಿ ಪಡೆದಿದ್ದ ಚೆನ್ನೈ  20 ಓವರ್​​ನಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಜಯಭೇರಿ ಬಾರಿಸಿದೆ.

ಚೆನ್ನೈ ಪರ ರುತುರಾಜ್ 72, ಅಂಬಟಿ ರಾಯಡು 38, ಜಡೇಜಾ ಅಜೇಯ 31 ರನ್ ಗಳಿಸಿದ್ದರು. ಇನ್ನು ಎಂಎಸ್ ಧೋನಿ ಕೇವಲ 1 ರನ್ ಗಳಿಸಿದ್ದರೆ ಸ್ಯಾಮ್ ಕರನ್ 13,  ಶೇನ್ ವಾಟ್ಸನ್ 14 ರನ್ ಕಲೆಹಾಕಿದ್ದರು.

ಕೋಲ್ಕತ್ತಾ ಪರ ಪಾಟ್ ಕಮ್ಮಿಸ್, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದುಕೊಂಡರು,

ಇದಕ್ಕೆ ಮುನ್ನ ಬ್ಯಾಟಿಂಗ್ ನಡೆಸಿದ್ದ ಕೋಲ್ಕತ್ತಾ 20 ಓವರ್​ ಗಳಲ್ಲಿ ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತ್ತು. ಕೋಲ್ಕತ್ತಾ ಪರವಾಗಿ ಶುಭ್ ಮನ್ ಗಿಲ್  26, ನಿತೀಶ್ ರಾಣ  87, ಸುನಿಲ್ ನರೈನ್ 7, ರಿಂಕು ಸಿಂಗ್ 11, ಮಾರ್ಗನ್ 15, ದಿನೇಶ್ ಕಾರ್ತಿಕ್ 21 ರನ್ ಗಳೀಸಿದ್ದರು.

ಇದೇ ವೇಳೆ ಈ ಪಂದ್ಯವನ್ನು ಗೆದ್ದು ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಳ್ಳುವ ಕನಸಿನಲ್ಲಿದ್ದ ಕೆಕೆಆರ್ ತಂಡಕ್ಕೆ, ಸೂಪರ್ ಕಿಂಗ್ಸ್ ಪೆಟ್ಟು ನೀಡಿದ್ದರ ಜತೆಗೆ ಟೂರ್ನಿಯಲ್ಲಿ ಐದನೇ ಜಯ ದಾಖಲಿಸಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com