ಐಪಿಎಲ್: ಗೇಲ್ ಅಬ್ಬರದ ಆಟ ವ್ಯರ್ಥ, ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಭರ್ಜರಿ ಜಯ

13ನೇ ಆವೃತ್ತಿ ಐಪಿಎಲ್ ನ 50ನೇ ಪಂದ್ಯದಲ್ಲಿ  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಗಳ ಜಯ ಸಾಧಿಸಿದೆ.
ಐಪಿಎಲ್: ಗೇಲ್ ಅಬ್ಬರದ ಆಟ ವ್ಯರ್ಥ, ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಭರ್ಜರಿ ಜಯ

ಅಬುದಾಬಿ:  13ನೇ ಆವೃತ್ತಿ ಐಪಿಎಲ್ ನ 50ನೇ ಪಂದ್ಯದಲ್ಲಿ  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಗಳ ಜಯ ಸಾಧಿಸಿದೆ.

ಪಂಜಾಬ್ ನೀಡಿದ್ದ ಸವಾಲಿನ ಮೊತ್ತದ ಗಿರಿ ಬೆನ್ನತ್ತಿದ ರಾಜಸ್ಥಾನ ಪರ ಬೆನ್ ಸ್ಟೋಕ್ಸ್  ಅರ್ಧಶತಕ(50  ರನ್ 26  ಎಸೆತ), ಸಂಜು ಸ್ಯಾಮ್ಸನ್ (48) ಮತ್ತು ಸ್ಟೀವನ್ ಸ್ಮಿತ್ (31* )ನೆರವಿನಿಂದ ಜಯ ಗಳಿಸಿದೆ.

ಟಾಸ್ ಸೋತ ಪಂಜಾಬ್ ತಂಡ ಮೊದಲು ಬ್ಯಾಟ್ ಮಾಡಿದ್ದು ಕ್ರಿಸ್ ಗೇಲ್ ಅವರ ಅಬ್ಬರದ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡಕ್ಕೆ 189 ರನ್ ಗಳ ಗುರಿಯನ್ನು ನೀಡಿತ್ತು. ಪಂಜಾಬ್ 20 ಓವರ್ ಗಳಲ್ಲಿ 4 ವಿಕೆಟ್ ಗೆ 185 ರನ್  ಗಳಿಸಿತ್ತು. 

ಪಂಜಾಬ್ ಪರ ಗೇಲ್  99 , ಕೆ.ಎಲ್.ರಾಹುಲ್ 46,  ಪೂರನ್ 22 ರನ್ ಗಳಿಸಿದ್ದರು. 

ಇಂದಿನ ಗೆಲುವಿನೊಂದಿಗೆ ರಾಜಸ್ಥಾನ ಪ್ಲೇಆಫ್‌ಗಾಗಿ 13 ಪಂದ್ಯಗಳಿಂದ 12 ಅಂಕಗಳೊಂದಿಗೆ ಆರನೇ ಜಯ ಸಾಧಿಸಿದರೆ, ಪಂಜಾಬ್ ಇನ್ನೂ 4 ನೇ ಸ್ಥಾನದಲ್ಲಿದೆ ಮತ್ತು ಅಗ್ರ ಎರಡು ಸ್ಥಾನಗಳಲ್ಲಿ ಅವಕಾಶ ಪಡೆಯುವ ಸಾಧ್ಯತೆ ಮಂಕಾಗಿದೆ.

ಈಗ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಪೈಕಿ ಒಂದು ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲಿದೆ.

ಗೇಲ್ ಹೊಸ ದಾಖಲೆ

ಕ್ರಿಸ್ ಗೇಲ್ ಈ ಪಂದ್ಯದ ಮೂಲಕ  ಟಿ-20ಯಲ್ಲಿ ಮೊದಲ ಬಾರಿಗೆ 1 ಸಾವಿರ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ.  ಇಂದು ಅವರು ಒಟ್ಟೂ ಎಂಟು ಸಿಕ್ಸರ್ ಸಿಡಿಸಿದ್ದರು. ಗೇಲ್  63 ಎಸೆತದಲ್ಲಿ ಆರು ಬೌಂಡರಿ ಮತ್ತು ಎಂಟು  ಸಿಕ್ಸರ್ ಸೇರಿ 99 ರನ್ ಗಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com