ಏಕದಿನ ಕ್ರಿಕೆಟ್: ಭಾನುವಾರ ದಾಖಲೆ ಸೃಷ್ಟಿಸಲಿರುವ ಅಂಪೈರ್ ಅಲಿಮ್ ದಾರ್
ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಅಲಿಮ್ ದಾರ್ ಅವರು ಅಂಪೈರ್ ಆಗಿ ಮೈದಾನಕ್ಕೆ ಇಳಿಯುತ್ತಿದ್ದಂತೆ ರೂಡಿ ಕೊರ್ಟ್‌ಜೆನ್‌ರ ಹೆಚ್ಚಿನ ಏಕದಿನ ಪಂದ್ಯಗಳ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.
Published: 31st October 2020 07:27 PM | Last Updated: 31st October 2020 07:27 PM | A+A A-

ಅಲಿಮ್ ದಾರ್
ಲಾಹೋರ್: ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಅಲಿಮ್ ದಾರ್ ಅವರು ಅಂಪೈರ್ ಆಗಿ ಮೈದಾನಕ್ಕೆ ಇಳಿಯುತ್ತಿದ್ದಂತೆ ರೂಡಿ ಕೊರ್ಟ್‌ಜೆನ್‌ರ ಹೆಚ್ಚಿನ ಏಕದಿನ ಪಂದ್ಯಗಳ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.
ಅಲಿಮ್ ಅವರಿಗೆ ಇದು 210ನೇ ಏಕದಿನ ಪಂದ್ಯ. ಅಂಪೈರಿಂಗ್ ಆಗುವ ಮೊದಲು ಆಲ್ರೌಂಡರ್ ಆಗಿ ಒಂದು ದಶಕಕ್ಕೂ ಹೆಚ್ಚು ಕಾಲ ಪಾಕಿಸ್ತಾನದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ.
52 ವರ್ಷದ ಅವರು ತವರಿನಲ್ಲಿ ಶ್ರೀಲಂಕಾ ವಿರುದ್ಧ ಫೆಬ್ರವರಿ 2000ರಲ್ಲಿ ಗುಜ್ರಾನ್ವಾಲಾ ಪಂದ್ಯವೊಂದರಲ್ಲಿ ಅಂಪೈರ್ ಆಗಿ ಕೆಲಸ ಆರಂಭಿಸಿದರು.
ಮಾಜಿ ಅಂತಾರಾಷ್ಟ್ರೀಯ ಅಂಪೈರ್ ಆಗಿರುವ ದಕ್ಷಿಣ ಆಫ್ರಿಕಾದ ರೂಡಲ್ಫ್ ಎರಿಕ್ ಕೊರ್ಟ್ಜೆನ್ 209 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದರು.