ಐಪಿಎಲ್-2020: ಹೈದರಾಬಾದ್ ಗೆ ಮರ್ಮಾಘಾತ; ಪ್ರಮುಖ ಆಟಗಾರ ವಿಜಯ್‌ ಶಂಕರ್‌ ಟೂರ್ನಿಯಿಂದಲೇ ಔಟ್

ಐಪಿಎಲ್ 2020 ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿರುವಂತೆಯೇ ಇತ್ತ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮರ್ಮಾಘಾತ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ ವಿಜಯ್‌ ಶಂಕರ್‌ ಟೂರ್ನಿಯ ಬಾಕಿ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ.

Published: 31st October 2020 03:52 PM  |   Last Updated: 31st October 2020 03:52 PM   |  A+A-


Vijay Shankar

ವಿಜಯ್ ಶಂಕರ್

Posted By : Srinivasamurthy VN
Source : UNI

ಶಾರ್ಜಾ: ಐಪಿಎಲ್ 2020 ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿರುವಂತೆಯೇ ಇತ್ತ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮರ್ಮಾಘಾತ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ ವಿಜಯ್‌ ಶಂಕರ್‌ ಟೂರ್ನಿಯ ಬಾಕಿ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ.

ಹೌದು.. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಮುನ್ನವೇ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಹಿನ್ನಡೆಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಗಾಯಕ್ಕೆ ಒಳಗಾಗಿದ್ದ ಆಲ್‌ರೌಂಡರ್‌ ವಿಜಯ್‌ ಶಂಕರ್ ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೊದಲ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ವಿಜಯ್‌ ಶಂಕರ್ ಔಟ್ ಮಾಡಿದ್ದರು. ನಂತರ ಎರಡನೇ ಓವರ್‌ನಲ್ಲಿ ಐದು ಎಸೆತಗಳ ಬಳಿಕ ಗಾಯಕ್ಕೆ ತುತ್ತಾಗಿದ್ದರು. ನಂತರ, ಇನ್ನುಳಿದ ಒಂದು ಎಸೆತವನ್ನು ನಾಯಕ ಡೇವಿಡ್‌ ವಾರ್ನರ್‌ ಬೌಲಿಂಗ್‌ ಮಾಡಿದ್ದರು. ಸ್ನಾಯು  ಸೆಳೆತದ ಗಾಯದಿಂದಾಗಿ ವಿಜಯ್ ಶಂಕರ್ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಆವೃತ್ತಿಯಲ್ಲಿ ವಿಜಯ್ ಶಂಕರ್ ಆಡಿದ ಏಳು ಪಂದ್ಯಗಳಿಂದ 97 ರನ್‌ಗಳನ್ನು ಗಳಿಸಿದ್ದಾರೆ ಹಾಗೂ ನಾಲ್ಕು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ  ಅರ್ಧಶತಕ ಬಾರಿಸಿದ್ದ ವಿಜಯ್ ಶಂಕರ್, ಪಂದ್ಯದ ಗೆಲುವಿನಲ್ಲಿ ಮನೀಶ್ ಪಾಂಡೆ ಅವರೊಂದಿಗೆ ಮಹತ್ತರ ಪಾತ್ರವನ್ನು ವಹಿಸಿದ್ದರು.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಓಪನರ್ ಆಗಿ ಅಖಾಡಕ್ಕೆ ಬಂದ ವೃದ್ಧಿಮಾನ್ ಸಹಾ ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿದ್ದರು. ಪಂದ್ಯದಲ್ಲಿ ಸಹಾ ಬದಲಿಗೆ ಶ್ರೀವಾಸ್ತವ ಗೋಸ್ವಾಮಿ ವಿಕೆಟ್‌ ಕೀಪಿಂಗ್‌ ಮಾಡಿದ್ದರು. ಆದರೆ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು ವಿರುದ್ಧದ  ಇಂದಿನ ಪಂದ್ಯದಲ್ಲಿ ಅವರು ಅಖಾಡಕ್ಕೆ ಇಳಿಯುತ್ತಾರೆ ಎಂದು ಸನ್‌ರೈಸರ್ಸ್ ಹೈದರಾಬಾದ್‌ ಟ್ವೀಟ್ ಮಾಡಿದೆ. ಈ ಋತುವಿನಲ್ಲಿ ಆರ್‌ಸಿಬಿ ವಿರುದ್ಧದ ಸನ್‌ರೈಸರ್ಸ್‌ನ ಮೊದಲ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಗಾಯಕ್ಕೆ ತುತ್ತಾಗಿ ನಂತರ ಟೂರ್ನಿಯಿಂದ ಹೊರ ನಡೆದಿದ್ದರು. ಇದಾದ 11 ದಿನಗಳಲ್ಲಿ ಭುವನೇಶ್ವರ್‌  ಕುಮಾರ್‌ ಕೂಡ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು ಹಾಗೂ ಪ್ರಸಕ್ತ ಋತುವಿನಿಂದ ನಿರ್ಗಮಿಸಿದ್ದರು. ಈ ಇಬ್ಬರ ಸ್ಥಾನಕ್ಕೆ ನೆಟ್ಸ್ ಬೌಲರ್ ಆಗಿದ್ದ ಪೃಥ್ವಿರಾಜ್ ಯರ್ರಾ ಹಾಗೂ ಜೇಸನ್‌ ಹೋಲ್ಡರ್ ಅವರನ್ನು ಆಯ್ಕೆ ಮಾಡಲಾಗಿತ್ತು.

Stay up to date on all the latest ಕ್ರಿಕೆಟ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp