ನನ್ನ ಚಿಕ್ಕಪ್ಪನನ್ನು ಹತ್ಯೆ ಮಾಡಲಾಗಿದೆ: ಸುರೇಶ್ ರೈನಾ

ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಐಪಿಎಲ್‌ನಿಂದ ಹಿಂದೆ ಸರಿದ ಕ್ರಿಕೆಟಿಗ ಸುರೇಶ್ ರೈನಾ, ಪಂಜಾಬ್‌ನಲ್ಲಿರುವ ತನ್ನ ಚಿಕ್ಕಮ್ಮನ ಕುಟುಂಬದ ಮೇಲೆ ನಡೆದ ಹಿಂಸಾತ್ಮಕ ದಾಳಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಸುರೇಶ್ ರೈನಾ
ಸುರೇಶ್ ರೈನಾ

ನವದೆಹಲಿ: ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಐಪಿಎಲ್‌ನಿಂದ ಹಿಂದೆ ಸರಿದ ಕ್ರಿಕೆಟಿಗ ಸುರೇಶ್ ರೈನಾ, ಪಂಜಾಬ್‌ನಲ್ಲಿರುವ ತನ್ನ ಚಿಕ್ಕಮ್ಮನ ಕುಟುಂಬದ ಮೇಲೆ ನಡೆದ ಹಿಂಸಾತ್ಮಕ ದಾಳಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ನನ್ನ ಚಿಕ್ಕಪ್ಪನನ್ನು ಕೊಲೆ ಮಾಡಲಾಗಿದೆ. ನಂತರ ಗಂಭೀರವಾಗಿ ಗಾಯಗೊಂಡಿದ್ದ ನನ್ನ ಸೋದರಸಂಬಂಧಿ ಸಹ ಸಾವನ್ನಪ್ಪಿದ್ದಾರೆ ಎಂದು ಸುರೇಶ್ ರೈನಾ ಬಹಿರಂಗಪಡಿಸಿದ್ದಾರೆ.

ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ಹೊರಗುಳಿದಿರುವ 33 ವರ್ಷ ರೈನಾ, ಕಳೆದ ವಾರ ದುಬೈನಿಂದ ದೇಶಕ್ಕೆ ವಾಪಸ್ ಆಗಿದ್ದಾರೆ.

ಆದಾಗ್ಯೂ, ಸುರೈಶ್ ರೈನಾ ಅವರು ದುಬೈನಿಂದ ಭಾರತಕ್ಕೆ ಹಿಂತಿರುಗಲು ಪಠಾಣ್‌ಕೋಟ್‌ನಲ್ಲಿ ನಡೆದ ದರೋಡೆ ಪ್ರಕರಣ ಕಾರಣ ಎಂದು ಹೇಳಿಲ್ಲ.

"ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ನನ್ನ ಕುಟುಂಬದ ಮೇಲೆ ನಡೆದ ದಾಳಿ ಭಯಾನಕವಾಗಿದೆ. ನನ್ನ ಚಿಕ್ಕಪ್ಪನನ್ನು ಹತ್ಯೆ ಮಾಡಲಾಯಿತು, ನನ್ನ ಆಂಟಿ ಮತ್ತು ನನ್ನ ಸೋದರಸಂಬಂಧಿಗಳಿಗೆ ತೀವ್ರವಾದ ಗಾಯಗಳಾಗಿವೆ. ದುರದೃಷ್ಟವಶಾತ್ ನನ್ನ ಸೋದರಸಂಬಂಧಿ ಸಹ ಕಳೆದ ರಾತ್ರಿ ಜೀವನ್ಮರಣದ ಹೋರಾಡಿದ ನಂತರ ನಿಧನರಾದರು. ನನ್ನ ಬುವಾ (ಚಿಕ್ಕಮ್ಮ) ಸ್ಥಿತಿ ಇನ್ನೂ ಗಂಭೀರವಾಗಿದೆ"ಎಂದು ಸುರೈಶ್ ರೈನಾ ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 19 ಮತ್ತು 20ರ ಮಧ್ಯರಾತ್ರಿ ಪಂಜಾಬ್ ನ ಪಠಾಣ್ ಕೋಟ್ ಜಿಲ್ಲೆಯ ಥಾರಿಯಲ್ ಹಳ್ಳಿಯ ರೈನಾ ಅವರ ಚಿಕ್ಕಪ್ಪನ ಮನೆ ಮೇಲೆ ದಾಳಿ ಮಾಡಿದ ದರೋಡೆಕೊರರು 58 ವರ್ಷದ ಚಿಕ್ಕಪ್ಪ ಅಶೋಕ್ ಕುಮಾರ್ ಅವರನ್ನು ಕೊಲೆ ಮಾಡಿ, ಮನೆ ಲೂಟಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com