ನಿವೃತ್ತಿ ವಾಪಸ್‌ ಪಡೆಯಲು ಯುವರಾಜ್‌ ಸಿಂಗ್‌ ನಿರ್ಧಾರ, ಬಿಸಿಸಿಐಗೆ ಪತ್ರ 

ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ಈಗ ನಿವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದು, ಪಂಜಾಬ್‌ ತಂಡದ ಪರ ದೇಶಿ ಕ್ರಿಕೆಟ್‌ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ಯುವರಾಜ್ ಸಿಂಗ್
ಯುವರಾಜ್ ಸಿಂಗ್

ನವದೆಹಲಿ: ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ಈಗ ನಿವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದು, ಪಂಜಾಬ್‌ ತಂಡದ ಪರ ದೇಶಿ ಕ್ರಿಕೆಟ್‌ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ.

ಒಂದು ವರ್ಷ ಜೂನ್ ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್‌ ಸಿಂಗ್‌ ಅವರು ಈಗ ಮತ್ತೆ ದೇಶಿ ಕ್ರಿಕೆಟ್ ಆಡಲು ಅನುಮತಿ ಕೋರಿ ಬಿಸಿಸಿಐಗೆ ಪತ್ರ ಬರೆದಿದ್ದಾರೆ.

ನಾನು ಈಗಾಗಲೇ ದೇಶಿ ಕ್ರಿಕೆಟ್‌ ಆಡಿದ್ದೇನೆ. ಈಗ ಬಿಸಿಸಿಐ ನನಗೆ ಮತ್ತೆ ಅನುಮತಿ ನೀಡಿದರೆ, ಪಂಜಾಬ್‌ ಪರ ಆಡುತ್ತೇನೆ. ಇದರ ನಡುವೆ ಮಿಸ್ಟರ್‌ ಬಾಲಿ ಅವರ ಮನವಿಯನ್ನು ಮರೆಯುವುದಿಲ್ಲ. ಕಳೆದ ಮೂರು ಅಥವಾ ನಾಲ್ಕು ವಾರಗಳಿಂದ ನನ್ನ ಮನಸ್ಸಿನಲ್ಲಿರುವ ವಿಷಯಗಳನ್ನು ತಿಳಿಸಿದ್ದೇನೆ ಎಂದು ಯುವರಾಜ್ ಸಿಂಗ್ ಕ್ರಿಕ್ ಬಜ್ ಗೆ ತಿಳಿಸಿದ್ದಾರೆ.

ಪಂಜಾಬ್ ಕ್ರಿಕೆಟ್ ಸಂಸ್ಥೆ(ಪಿಸಿಎ) ಕಾರ್ಯದರ್ಶಿ ಪುನೀತ್ ಬಾಲಿ ಅವರು 38 ವರ್ಷದ ಯುವರಾಜ್ ಸಿಂಗ್ ಅವರನ್ನು ಭೇಟಿ ಮಾಡಿ, ಪಂಜಾಬ್ ತಂಡಕ್ಕಾಗಿ ನಿವೃತ್ತಿಯನ್ನು ಹಿಂಪಡೆಯುವಂತಿ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com