ವಾಯುಪಡೆಗೆ ರಫೇಲ್ ವಿಮಾನಗಳ ಸೇರ್ಪಡೆ: ಐಎಎಫ್ ಗೆ ಶುಭಕೋರಿದ ಎಂಎಸ್ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಫೇಲ್ ಫೈಟರ್ ಜೆಟ್‌ಗಳನ್ನು ಭಾರತೀಯ ವಾಯುಪಡೆ ಸೇರ್ಪಡೆಯ ಬಗ್ಗೆ ಟ್ವೀಟ್ ಮಾಡಿದ್ದು  'ಐಎಎಫ್ ಪೈಲಟ್‌ಗಳು  ‘ವಿಶ್ವದ ಅತ್ಯುತ್ತಮ ಫೈಟರ್ ಪೈಲಟ್‌ಗಳು’ ಎಂದು ಪ್ರಶಂಸಿಸಿದ್ದಾರೆ.
ವಾಯುಪಡೆಗೆ ರಫೇಲ್ ವಿಮಾನಗಳ ಸೇರ್ಪಡೆ: ಐಎಎಫ್ ಗೆ ಶುಭಕೋರಿದ ಎಂಎಸ್ ಧೋನಿ

ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಫೇಲ್ ಫೈಟರ್ ಜೆಟ್‌ಗಳನ್ನು ಭಾರತೀಯ ವಾಯುಪಡೆ ಸೇರ್ಪಡೆಯ ಬಗ್ಗೆ ಟ್ವೀಟ್ ಮಾಡಿದ್ದು . ಐಎಎಫ್ ಪೈಲಟ್‌ಗಳು  ‘ವಿಶ್ವದ ಅತ್ಯುತ್ತಮ ಫೈಟರ್ ಪೈಲಟ್‌ಗಳು’ ಎಂದು ಪ್ರಶಂಸಿಸಿದ್ದಾರೆ.

"ಗ್ಲೋರಿಯಸ್ 17 ಸ್ಕ್ವಾಡ್ರನ್ (ಗೋಲ್ಡನ್ ಆರೋಸ್) ಗೆ ಶುಭಾಶಯಗಳು. ನಾವೆಲ್ಲರೂ  ರಫೇಲ್ ಮಿರಾಜ್ 2000 ರ ಸೇವಾ ದಾಖಲೆಯನ್ನು ಮುರಿಯಲಿದೆ ಎಂದು ಭಾವಿಸುತ್ತೇವೆ. ಆದರೆ ಸು 30 ಎಂಕೆಐ ನನ್ನ ಪರವಾಗಿದೆ. ಹುಡುಗರು ಡಾಗ್ ಫೈಟ್ ಗೆ ಹೊಸ ಗುರಿಯನ್ನು ಪಡೆಯಲಿದ್ದಾರೆ. ಅವರು  ಬಿವಿಆರ್  ಎಂಗೇಜ್ ಮೆಂಟ್ ಗಾಗಿ ನಿರೀಕ್ಷಿಸುತ್ತಾರೆ. ಸೂಪರ್ ಸುಖೋಯ ಅನ್ನು ಅಪ್‌ಗ್ರೇಡ್ ಮಾಡಿ ”ಎಂದು ಧೋನಿ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಎಂಎಸ್ ಧೋನಿ ಆಗಸ್ಟ್ 15, 2020 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

ಜುಲೈ 27 ರಂದು ಅಂಬಾಲಾ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿದ ಐದು ರಾಫೆಲ್ ವಿಮಾನಗಳನ್ನು ಗುರುವಾರ ಭಾರತೀಯ ವಾಯುಪಡೆಯ 17 ಸ್ಕ್ವಾಡ್ರನ್ ‘ಗೋಲ್ಡನ್ ಆರೋಸ್" ಗೆ ಸೇರ್ಪಡೆ ಮಾಡಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ವಾಯುಸೇನೆಯ ‘ಗೋಲ್ಡನ್  ಆರೋಸ್’ನ  17 ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಹರ್ಕೀರತ್ ಸಿಂಗ್ ಅವರಿಗೆ ಇಂಡಕ್ಷನ್ ಸ್ಕ್ರಾಲ್ ಅನ್ನು ಹಸ್ತಾಂತರಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com