ಲಂಕಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಟೀಂ ಇಂಡಿಯಾ ಮಾಜಿ ವೇಗಿ ಮುನಾಫ್ ಪಟೇಲ್

ಐಪಿಎಲ್ ಮಾದರಿಯಲ್ಲಿ ಶ್ರೀಲಂಕಾದಲ್ಲಿ ಪ್ರಾರಂಭವಾಗುತ್ತಿರುವ ಶ್ರೀಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್)ನಲ್ಲಿ ಭಾರತದ ಮಾಜಿ ವೇಗಿ ಮುನಾಫ್ ಪಟೇಲ್ ಮತ್ತು ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹರಾಜು ಪ್ರವೇಶಿಸಲಿದೆ.
ಮುನಾಫ್ ಪಟೇಲ್
ಮುನಾಫ್ ಪಟೇಲ್

ಕೊಲಂಬೊ: ಐಪಿಎಲ್ ಮಾದರಿಯಲ್ಲಿ ಶ್ರೀಲಂಕಾದಲ್ಲಿ ಪ್ರಾರಂಭವಾಗುತ್ತಿರುವ ಶ್ರೀಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್)ನಲ್ಲಿ ಭಾರತದ ಮಾಜಿ ವೇಗಿ ಮುನಾಫ್ ಪಟೇಲ್ ಮತ್ತು ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹರಾಜು ಪ್ರವೇಶಿಸಲಿದೆ.

ಅಕ್ಟೋಬರ್ 1 ರಂದು ಎಲ್‌ಪಿಎಲ್‌ನ ಆಟಗಾರರ ಹರಾಜು ನಡೆಯಲಿದ್ದು, ಇದರಲ್ಲಿ ಎಲ್ಲಾ ಐದು ತಂಡಗಳು ಸುಮಾರು 150 ಆಟಗಾರರಿಗೆ ಬಿಡ್ ನೀಡಲಿವೆ. 

ಪಟೇಲ್ ಮತ್ತು ಗೇಲ್ ಅವರಲ್ಲದೆ, ವೆಸ್ಟ್ ಇಂಡೀಸ್‌ನ ಡೇರೆನ್ ಸಾಮಿ, ಡ್ಯಾರೆನ್ ಬ್ರಾವೋ, ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಇಂಗ್ಲೆಂಡ್‌ನ ರವಿ ಬೋಪಾರ, ನ್ಯೂಜಿಲೆಂಡ್‌ನ ಕಾಲಿನ್ ಮುನ್ರೊ ಮತ್ತು ದಕ್ಷಿಣ ಆಫ್ರಿಕಾದ ವೆರ್ನಾನ್ ಫಿಲಾಂಡರ್ ಮುಂತಾದ ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ.

ಟೀಂ ಇಂಡಿಯಾ ಮಾಜಿ ವೇಗಿ ಮುನಾಫ್ ಪಟೇಲ್ ಅವರು 2018ರಲ್ಲಿ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದರು. 37 ವರ್ಷದ ಮುನಾಫ್ ಪಟೇಲ್ ಅವರು ಟೀಂ ಇಂಡಿಯಾ ಪರ 13 ಟೆಸ್ಟ್, 70 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com