ಕೊಹ್ಲಿಯನ್ನು ಔಟ್‌ ಮಾಡಲು ತುದಿಗಾಲಲ್ಲಿ ನಿಂತು ಕಾಯುತ್ತಿರುವೆ: ಕೆಸ್ರಿಕ್‌ ವಿಲಿಯಮ್ಸನ್‌

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ  ವೆಸ್ಟ್ ಇಂಡೀಸ್ ವೇಗದ ಬೌಲರ್ ಕೆಸ್ರಿಕ್ ವಿಲಿಯಮ್ಸ್ ಅವರ ನಡುವೆ ಈ ಹಿಂದೆ  ಹಲವು ಆಸಕ್ತದಾಯಕ ಸಂಗತಿಗಳು ಉಂಟಾಗಿದ್ದವು. 2017ರಲ್ಲಿ ಕೊಹ್ಲಿಯನ್ನು ಔಟ್ ಮಾಡಿದ ಬಳಿಕ ವಿಲಿಯಮ್ಸ್, 'ನೋಟ್ ಬುಕ್ ರೀತಿ ಸಂಭ್ರಮ' ಪಟ್ಟಿದ್ದರು. 
ಕೊಹ್ಲಿ-ಕೆಸ್ರಿಕ್
ಕೊಹ್ಲಿ-ಕೆಸ್ರಿಕ್

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ  ವೆಸ್ಟ್ ಇಂಡೀಸ್ ವೇಗದ ಬೌಲರ್ ಕೆಸ್ರಿಕ್ ವಿಲಿಯಮ್ಸ್ ಅವರ ನಡುವೆ ಈ ಹಿಂದೆ  ಹಲವು ಆಸಕ್ತದಾಯಕ ಸಂಗತಿಗಳು ಉಂಟಾಗಿದ್ದವು. 2017ರಲ್ಲಿ ಕೊಹ್ಲಿಯನ್ನು ಔಟ್ ಮಾಡಿದ ಬಳಿಕ ವಿಲಿಯಮ್ಸ್, 'ನೋಟ್ ಬುಕ್ ರೀತಿ ಸಂಭ್ರಮ' ಪಟ್ಟಿದ್ದರು. 

ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ತವರು ಸರಣಿಯಲ್ಲಿ ವಿರಾಟ್ ಕೊಹ್ಲಿ, ವಿಲಿಯಮ್ಸನ್ ಅವರ ವಿರುದ್ಧ ಮುಯ್ಯಿ ತೀರಿಸಿಕೊಂಡಿದ್ದರು. ಈ ವೇಳೆ ಕೆಸ್ರಿಕ್ ವಿಲಿಯಮ್ಸನ್ ಎಸೆತದಲ್ಲಿ ಸಿಕ್ಸರ್ ಬಾರಿಸಿದ ವಿರಾಟ್ ಕೊಹ್ಲಿ, ನೋಟ್ ಬುಕ್ ಹರಿದು ಹಾಕುವ ರೀತಿ ತಮ್ಮದೇ ಆದ ಶೈಲಿಯಲ್ಲಿ ಸಂಭ್ರಮಿಸಿದ್ದರು. 

ಕೆಸ್ರಿಕ್ ವಿಲಿಯಮ್ಸನ್ 2020ರ ಐಪಿಎಲ್ ಹರಾಜಿನಲ್ಲಿ ಅಲ್ ಸೋಲ್ಡ್ ಆಗಿದ್ದರು. ಹಾಗಾಗಿ, ವಿರಾಟ್ ಕೊಹ್ಲಿಗೆ ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಬಗ್ಗೆ ತಿಳಿದುಕೊಳ್ಳಲು ಭಾರತ ವಿರುದ್ಧದ ಸರಣಿಯವರೆಗೂ ಕಾಯಬೇಕಾಗುತ್ತದೆ. ಸರಣಿ ಯಾವಾಗ ಆರಂಭವಾದರೂ ಟೀಂ ಇಂಡಿಯಾ ನಾಯಕನನ್ನು ಔಟ್ ಮಾಡಲು ವಿಲಿಯಮ್ಸನ್ ಕಾತುರದಿಂದ ಕಾಯುತ್ತಿದ್ದಾರೆ.

ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದು ಕಷ್ಟವೇ? ಇಲ್ಲ, ಇದು ಕಷ್ಟವಲ್ಲ. ಅವರು ಪ್ರತಿಭಾವಂತ ಹಾಗೂ ಅದ್ಭುತ ಆಟಗಾರ. ಆದರೆ ಈ ಬಗ್ಗೆ ನಾನು ಹೆಚ್ಚು ತಲೆ ಕೆಡಸಿಕೊಳ್ಳುವುದಿಲ್ಲ. 'ಓ ಇದು ವಿರಾಟ್ ಕೊಹ್ಲಿ'! ಎನ್ನುತ್ತಾ ಮಲಗಲು ಹಾಸಿಗೆಯ ಮೇಲೆ ಹೋಗುವ ಆಟಗಾರ ನಾನಲ್ಲ ಎಂದು ಫಸ್ಟ್ ಪೋಸ್ಟ್ ಸಂದರ್ಶನದಲ್ಲಿ ಅವರು ತಿಳಿಸಿದರು.

ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಲು ನೀವು ಸಿದ್ದರಾಗಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತಾ ಹೌದು, ನಾನು ಮತ್ತೊಮ್ಮೆ ಅಂತಹ ಸಂದರ್ಭಕ್ಕಾಗಿ ಕಾಯುತ್ತಿದ್ದೇನೆ. ಯಾವಾಗ ಅವರು ನನ್ನನ್ನು ನೋಡುತ್ತಾರೆ, ಆಗ ಅವರನ್ನು ಔಟ್ ಮಾಡಲು ನನಗೆ ಹೆಚ್ಚು ಉತ್ತೇಜನನಾಗುತ್ತೇನೆ. ಆದರೆ ದಿನದ ಮುಕ್ತಾಯಕ್ಕೆ ಕ್ರಿಕೆಟ್ ಅಂದರೆ ಕ್ರಿಕೆಟ್ ಆಗೆಯೇ ಉಳಿದಿರುತ್ತದೆ. ಅವರನ್ನು ಔಟ್ ಮಾಡಲು ಒಂದೇ ಎಸೆತವಷ್ಟೇ. ಮತ್ತೊಮ್ಮೆ ಆ ಎಸೆತವನ್ನು ಪಡೆಯುತ್ತೇನೆ ಎಂದು ವಿಲಿಯಮ್ಸನ್ ಹೇಳಿದರು. 

ವಿರಾಟ್ ಕೊಹ್ಲಿ ಅವರನ್ನು ಮತ್ತೊಮ್ಮೆ ಔಟ್ ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಹೊಸ ಶೈಲಿಯಲ್ಲಿ ಸಂಭ್ರಮಿಸುತ್ತೇನೆಂಬುದನ್ನು ವಿಲಿಯಮ್ಸನ್ ಖಚಿತಪಡಿಸಿದರು. ದೊಡ್ಡ ಮಟ್ಟದ ಸ್ಪರ್ಧೆ ಎದುರಿಸುವುದಾದರೆ ವಿರಾಟ್ ಕೊಹ್ಲಿಗಿಂತ ಆಕ್ರಮಣಕಾರಿ ಆಟಗಾರ ಇನ್ನೊಬ್ಬರಿಲ್ಲ. ಭಾರತ ತಂಡದ ನಾಯಕ ಬೌಲರ್ ಗಳಲ್ಲಿರುವ ಉತ್ತಮವಾದ ಪ್ರತಿಭೆಯನ್ನು ಹೊರ ತೆಗೆಯುತ್ತಾರೆ ಎನ್ನುವದು ವಿಂಡೀಸ್ ವೇಗಿಯ ಅಭಿಪ್ರಾಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com