ಐಪಿಎಲ್ 2020: ಕೋವಿಡ್ ಕ್ವಾರಂಟೈನ್ ಅವಧಿ ಕಡಿತಗೊಳಿಸುವಂತೆ ಬಿಸಿಸಿಐಗೆ ಆಸೀಸ್-ಇಂಗ್ಲೆಂಡ್ ಕ್ರಿಕೆಟಿಗರ ಮನವಿ!

ಐಪಿಎಲ್ ಟೂರ್ನಿಯಲ್ಲಿ ಆಡಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರು ಕೋವಿಡ್ ಕ್ವಾರಂಟೈನ್ ಅವಧಿಯನ್ನು ಆರು ದಿನದ ಬದಲಿಗೆ ಮೂರು ದಿನಕ್ಕೆ ಇಳಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ. 

Published: 15th September 2020 07:01 PM  |   Last Updated: 15th September 2020 07:03 PM   |  A+A-


IPL

ಐಪಿಎಲ್

Posted By : Vishwanath S
Source : PTI

ನವದೆಹಲಿ: ಐಪಿಎಲ್ ಟೂರ್ನಿಯಲ್ಲಿ ಆಡಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರು ಕೋವಿಡ್ ಕ್ವಾರಂಟೈನ್ ಅವಧಿಯನ್ನು ಆರು ದಿನದ ಬದಲಿಗೆ ಮೂರು ದಿನಕ್ಕೆ ಇಳಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ. 

ಯುಎಇಗೆ ಬಂದ ನಂತರ ಆರು ದಿನಗಳ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ನಾವು ಆರು ದಿನ ಮುಂಚಿತವಾಗಿ ಬರಬೇಕಾಗುತ್ತದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಆರಂಭಿಕ ಪಂದ್ಯಗಳಲ್ಲಿ ಅಲಭ್ಯರಾಗಲಿದ್ದು ಹೀಗಾಗಿ ಆರು ದಿನಗಳ ಅವಧಿಯನ್ನು ಮೂರು ದಿನಗಳಿಗೆ ಇಳಿಸುವಂತೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಪ್ರಸ್ತುತ ಇಂಗ್ಲೆಂಡ್-ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಸುಮಾರು 21 ಆಟಗಾರರು ಸೆಪ್ಟೆಂಬರ್ 17ರಂದು ಮ್ಯಾಂಚೆಸ್ಟರ್‌ನಿಂದ ದುಬೈಗೆ ಚಾರ್ಟರ್ಡ್ ಫ್ಲೈಟ್ ಹತ್ತಲಿದ್ದಾರೆ. ಹೀಗಾಗಿ ಆರು ದಿನ ಕ್ವಾರಂಟೈನ್ ನಲ್ಲಿ ಇದ್ದರೆ ಆಗ ಸೆಪ್ಟೆಂಬರ್ 23ರಿಂದ ಮಾತ್ರ ಅವರು ಲಭ್ಯರಾಗಲಿದ್ದು ಸೆಪ್ಟೆಂಬರ್ 19ರಿಂದಲೇ ಪಂದ್ಯಾವಳಿ ನಡೆಯುಲಿದೆ. 

ಒಂದೇ ಒಂದು ಪಂದ್ಯವನ್ನು ತಪ್ಪಿಸಿಕೊಳ್ಳಲು ನಾವು ಸಿದ್ದರಿಲ್ಲ ಹೀಗಾಗಿ ಎರಡೂ ದೇಶಗಳ ಆಟಗಾರರ ಪರವಾಗಿ, ಸಂಪರ್ಕತಡೆಯನ್ನು ಮೂರು ದಿನಗಳವರೆಗೆ ಕಡಿಮೆ ಮಾಡುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನುಕೋರಿದ್ದಾರೆ.

Stay up to date on all the latest ಕ್ರಿಕೆಟ್ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp