ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿ ಕೊಲೆ: ಮೂವರ ಬಂಧನ

ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿಯ ಕೊಲೆ ಪ್ರಕರಣ ಬೇಧಿಸಿರುವ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.. ಮೂವರು ದರೋಡೆಕೋರರು, ಅಂತರರಾಜ್ಯ ಗ್ಯಾಂಗ್‌ನ  ಸದಸ್ಯರೆಂದು ತಿಳಿದುಬಂದಿದ್ದು ಇತರೆ 11 ಮಂದಿ ಆರೋಪಿಗಳನ್ನು ಇನ್ನೂ ಬಂಧಿಸಬೇಕಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.

Published: 16th September 2020 01:13 PM  |   Last Updated: 16th September 2020 01:13 PM   |  A+A-


ಸುರೇಶ್ ರೈನಾ

Posted By : Raghavendra Adiga
Source : PTI

ಅಮೃತಸರ್: ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿಯ ಕೊಲೆ ಪ್ರಕರಣ ಬೇಧಿಸಿರುವ ಪೋಲೀಸರು ಮೂವರನ್ನು ಬಂಧಿಸಿದ್ದಾರೆ. ಮೂವರು ದರೋಡೆಕೋರರು, ಅಂತರರಾಜ್ಯ ಗ್ಯಾಂಗ್‌ನ  ಸದಸ್ಯರೆಂದು ತಿಳಿದುಬಂದಿದ್ದು ಇತರೆ 11 ಮಂದಿ ಆರೋಪಿಗಳನ್ನು ಇನ್ನೂ ಬಂಧಿಸಬೇಕಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.

ಆಗಸ್ಟ್ 19 ರಂದು ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ತರಿಯಾಲ್ ಗ್ರಾಮದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಸಂಬಂಧಿಯನ್ನು  ಕೊಂದ ಗ್ಯಾಂಗ್ ಅದೇ ದಿನ ರಾತ್ರಿ ಅಕ್ಕಪಕ್ಕದ ಇನ್ನೆರಡು ಸ್ಥಳಗಳಲ್ಲಿ ಸಹ ದರೋಡೆ ಕೃತ್ಯ ಎಸಗಿತ್ತು. ಆದರೆ ಆ ಪ್ರಕರಣದಲ್ಲಿ ಕಳುವಾದ ವಸ್ತುಗಳ ಮೌಲ್ಯ ಇನ್ನೂ ಪತ್ತೆಯಾಗಬೇಕಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಉನ್ನತ ಪೋಲೀಸ್ ಅಧಿಕಾರಿ ವಿಶೇಷ ತನಿಖಾ ತಂಡವು, ರೈನಾದ ಚಿಕ್ಕಪ್ಪ ಅಶೋಕ್ ಕುಮಾರ್ ಅವರ ಮನೆಗೆ ನುಗ್ಗುವ ಮೊದಲು ದರೋಡೆಕೋರರು ಮೊದಲು ಹಳ್ಳಿಯ ಗೋಡೌನ್, ನಂತರ ಹತ್ತಿರದ ಖಾಲಿ ಮನೆ ಪ್ರವೇಶಿಸಿದ್ದಾರೆ ಎಂದು ಪತ್ತೆ ಮಾಡಿದೆ. 

ಅಂದು ನಡೆದ ಘಟನೆಯಲ್ಲಿ ರೈನಾ ಅವರ ಚಿಕ್ಕಪ್ಪ ಅಶೋಕ್ ಕುಮಾರ್, ಗುತ್ತಿಗೆದಾರ ಸ್ಥಳದಲ್ಲೇ ಮೃತಪಟ್ಟರೆ ಅವರ ಮಗ ಕೌಶಲ್ ಕುಮಾರ್ ಆಗಸ್ಟ್ 31 ರಂದು  ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇನ್ನು ಅಶೋಕ್ ಅವರ ಪತ್ನಿ ಆಶಾ ರಾಣಿ ಗಂಭೀರ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ್ದಾರೆ.  ದಾಳಿಯಲ್ಲಿ ಗಾಯಗೊಂಡ ಇತರ ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ

Stay up to date on all the latest ಕ್ರಿಕೆಟ್ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp