ಆರ್‌ಸಿಬಿ ಹಿನ್ನಡೆಗೆ ಕೊಹ್ಲಿ ತಪ್ಪು ಆಟಗಾರರನ್ನು ಬೆಂಬಲಿಸಿದ್ದೇ ಕಾರಣವಾಯ್ತಾ: ಆರ್‌ಸಿಬಿ ಮಾಜಿ ಕೋಚ್‌ ಹೇಳಿದ್ದೇನು?

ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಅವರು ಬ್ಯಾಟಿಂಗ್‌ ಮೂಲಕ ಅತ್ಯುತ್ತಮ ಅಂತಾರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದಾರೆ. ಅದೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಬಂದಾಗ, ಅವರು ವೈಯಕ್ತಿಕ ದಾಖಲೆಗಳನ್ನು ಹೊಂದಿದ್ದರೂ ಅವರು ನಾಯಕತ್ವದಲ್ಲಿ ವಿಫಲರಾಗಿದ್ದಾರೆ.
ಡಿವಿಲಿಯರ್ಸ್-ಕೊಹ್ಲಿ
ಡಿವಿಲಿಯರ್ಸ್-ಕೊಹ್ಲಿ

ನವದೆಹಲಿ: ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಅವರು ಬ್ಯಾಟಿಂಗ್‌ ಮೂಲಕ ಅತ್ಯುತ್ತಮ ಅಂತಾರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದಾರೆ. ಅದೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಬಂದಾಗ, ಅವರು ವೈಯಕ್ತಿಕ ದಾಖಲೆಗಳನ್ನು ಹೊಂದಿದ್ದರೂ ಅವರು ನಾಯಕತ್ವದಲ್ಲಿ ವಿಫಲರಾಗಿದ್ದಾರೆ.

2013ರಲ್ಲಿ ಡೇನಿಯಲ್‌ ವೆಟ್ಟೋರಿಯಿಂದ ನಾಯಕತ್ವವನ್ನು ಪಡೆದ ಬಳಿಕ ವಿರಾಟ್‌ ಕೊಹ್ಲಿ, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಶಸ್ವಿಯಾಗಿಲ್ಲ. ನಾಯಕತ್ವದ ಆರಂಭಿಕ ದಿನಗಳಲ್ಲಿ ವಿರಾಟ್‌ ಕೊಹ್ಲಿಯ ಮಾನಸಿಕ ಸಾಮರ್ಥ್ಯ ಹೇಗಿತ್ತು ಎಂಬ ಬಗ್ಗೆ ಬೆಂಗಳೂರು ಫ್ರಾಂಚೈಸಿಯ ಮಾಜಿ ಕೋಚ್‌ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿ ನಾಯಕತ್ವ ವಹಿಸಿಕೊಂಡ 2016ರಲ್ಲಿ ಫೈನಲ್‌ ತಲುಪಿತ್ತು. ಇದಾದ ಬಳಿಕ ಆರನೇ ಸ್ಥಾನಕ್ಕಿಂತ ಮೇಲಕ್ಕೇರಿರಲಿಲ್ಲ. 2017 ಮತ್ತು 2019ರ ಆವೃತ್ತಿಯ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಬೆಂಗಳೂರು ಫ್ರಾಂಚೈಸಿಯಲ್ಲಿ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದ್ದರೂ, ಬೌಲಿಂಗ್‌ ವಿಭಾಗದಲ್ಲಿ ಡೆತ್‌ ಓವರ್‌ಗಳ ಕಳಪೆ ನಿರ್ವಹಣೆಯಿಂದ ವಿಫಲವಾಗುತ್ತಿದೆ.

2009ರಿಂದ 2014ರವರೆಗೆ ಆರ್‌ಸಿಬಿ ತಂಡದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದ ರೇ ಜೆನ್ನಿಂಗ್ಸ್‌, ತಮ್ಮ ಅವಧಿಯಲ್ಲಿ 25 ರಿಂದ 30 ಆಟಗಾರರನ್ನು ನಿರ್ವಹಿಸಿದ್ದರು. ವಿರಾಟ್‌ ಕೊಹ್ಲಿ ನಾಯಕತ್ವದ ಆರಂಭಿಕ ದಿನಗಳಲ್ಲಿ ಏಕಾಂಗಿಯಾಗಿದ್ದು, ಸರಿಯಾಗಿಲ್ಲದ ಆಟಗಾರರಿಗೆ ಬೆಂಬಲಿಸಿದ್ದರು. ಅದೇ ಸಮಯದಲ್ಲಿ ಅವರು ತಮ್ಮ ನಿರ್ಧಾರಗಳು ಹಾಗೂ ಅಭಿಪ್ರಾಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು ಎಂದು ಮಾಜಿ ಕೋಚ್‌ ತಿಳಿಸಿದ್ದರು.

ಐಪಿಎಲ್‌ ಕೋಚ್‌ ಆಗಿದ್ದ ನನ್ನ ಹಿಂದಿನ ದಿನಗಳನ್ನು ನೋಡುವುದಾದರೆ, 25 ರಿಂದ 30 ಆಟಗಾರರು ತಂಡದಲ್ಲಿ ಇರುತ್ತಿದ್ದರು ಹಾಗೂ ಕೋಚ್‌ ಆಗಿ ಎಲ್ಲಾ ಆಟಗಾರರ ಕಡೆ ಗಮನ ಹರಿಸುವುದು ನನ್ನ ಕರ್ತವ್ಯವಾಗಿತ್ತು. ಕೆಲವೊಮ್ಮೆ ಅವರು ತಂಡದಲ್ಲಿ ಏಕಾಂಗಿಯಾಗಿ ಕಾಣುತ್ತಿದ್ದರು ಹಾಗೂ ಕೆಲವೊಮ್ಮೆ ಅವರು ತಪ್ಪು ಆಟಗಾರರನ್ನು ಆಯ್ಕೆ ಮಾಡುತ್ತಿದ್ದರು. ಆದರೆ, ಈ ಬಗ್ಗೆ ಅವರನ್ನು ಆಕ್ಷೇಪಿಸಬಾರದು. ವಿವಿಧ ಸನ್ನವೇಶ/ಪರಿಸ್ಥತಿಗಳಿಗೆ ವಿಭಿನ್ನ ಆಟಗಾರರು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಮಾಡಿಸುವುದು ನನ್ನ ಗುರಿಯಾಗಿತ್ತು. ಆದರೆ ಅವರು ವಿಭಿನ್ನ ಯೋಜನೆಯನ್ನು ಹೊಂದಿದ್ದರು ಎಂದು ಜೆನ್ನಿಂಗ್ಸ್ ಖಾಸಗಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com