ಪಂದ್ಯದ ದಿಕ್ಕನ್ನೇ ಬದಲಿಸಿದ ಮ್ಯಾಕ್ಸ್ ವೆಲ್, ಅಲೆಕ್ಸ್ ಕರಿ ಶತಕ, ಇಂಗ್ಲೆಂಡ್ ವಿರುದ್ಧ 2-1 ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ

ಆರಂಭಿಕ ಆಘಾತದ ನಡುವೆಯೂ ಮ್ಯಾಕ್ಸ್ ವೆಲ್, ಅಲೆಕ್ಸ್ ಕರಿ ಸಿಡಿಸಿದ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನ ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

Published: 17th September 2020 02:54 PM  |   Last Updated: 17th September 2020 03:06 PM   |  A+A-


Australia clinch ODI series

ಮ್ಯಾಕ್ಸ್ ವೆಲ್-ಅಲೆಕ್ಸ್ ಕರಿ ಜೋಡಿ

Posted By : Srinivasamurthy VN
Source : PTI

ಓಲ್ಡ್ ಟ್ರಾಫರ್ಡ್: ಆರಂಭಿಕ ಆಘಾತದ ನಡುವೆಯೂ ಮ್ಯಾಕ್ಸ್ ವೆಲ್, ಅಲೆಕ್ಸ್ ಕರಿ ಸಿಡಿಸಿದ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನ ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

ಓಲ್ಡ್ ಟ್ರಾಫರ್ಡ್‌ನಲ್ಲಿ ಬುಧವಾರ ರಾತ್ರಿ ಮುಕ್ತಾಯಗೊಂಡ ರಾಯಲ್‌ ಇಂಗ್ಲೆಂಡ್‌ ಏಕದಿನ ಸರಣಿಯ ರೋಚಕ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೂರು ವಿಕೆಟ್‌ಗಳಿಂದ ಜಯ ಗಳಿಸಿ ಸರಣಿ ತನ್ನದಾಗಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ಗೆ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಎರಡು  ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಪಂದ್ಯದ ಆರಂಭದಲ್ಲಿಯೇ ಎರಡು  ಉರುಳಿಸಿದ ವೇಗಿ ಮಿಷೆಲ್ ಸ್ಟಾರ್ಕ್ ಆಸಿಸ್ ಪಡೆಗೆ ಮರ್ಮಾಘಾತ ನೀಡಿದರು. ಆರಂಭಿಕ ಆಟಗಾರ ಬ್ಯಾಟ್ಸ್‌ಮನ್ ಜಾನಿ ಬೇರ್ ಸ್ಟೊ (126 ಎಸೆತಗಳಲ್ಲಿ 112 ರನ್) ನಾಯಕ ಇಯಾನ್ ಮಾರ್ಗನ್ ಮತ್ತು ಆರನೇ  ಕ್ರಮಾಂಕದ ಆಟಗಾರ ಸ್ಯಾಮ್ ಬಿಲಿಂಗ್ಸ್ ಅವರೊಂದಿಗೆ ಉತ್ತಮ ಜೊತೆಯಾಟ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು. ಇನ್ನಿಂಗ್ಸ್ ನ ಅಂತಿಮ ಹಂತದಲ್ಲಿ ಬೇರ್ ಸ್ಟೋ ಜೊತೆಗೂಡಿದ ಬಿಲಿಂಗ್ಸ್ 57 ರನ್ ಗಳಿಸಿ ಇಂಗ್ಲೆಂಡ್ ತಂಡದ ರನ್ ವೇಗವನ್ನು ಹೆಚ್ಚಿಸಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ ನಿಗಧಿತ 50  ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 302ರನ್ ಪೇರಿಸಿತು.

303 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆಸಿಸ್ ತಂಡಕ್ಕೆ ಇಂಗ್ಲೆಂಡ್ ಬೌಲರ್ ಗಳು ಆಘಾತ ನೀಡಿದ್ದರು. ಕೇವಲ 73 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಗೂಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಅಲೆಕ್ಸ್‌ ಕೆರಿ ಜೋಡಿ ಪಂದ್ಯದ ದಿಕ್ಕನ್ನೇ ಬದಲಿಸಿತು.  ನಿಧಾನಗತಿಯಲ್ಲೇ ರನ್ ವೇಗ ಹೆಚ್ಚಿಸಿಕೊಂಡ ಈ ಜೋಡಿ, ಕ್ರಮೇಣ ರನ್ ವೇಗ ಹೆಚ್ಚಿಸಿಕೊಂಡು ನೋಡ ನೋಡುತ್ತಲೇ ಅರ್ಧಶತಕ ಮತ್ತು ಶತಕ ಪೂರ್ಣಗೊಳಿಸಿದರು. ಒತ್ತಡದಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ 90 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 4 ಬೌಂಡರಿಯೊಂದಿಗೆ 108 ರನ್‌ಗಳನ್ನು  ಸಿಡಿಸಿದರೆ, ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್‌ ನೀಡುತ್ತಿದ್ದ ಅಲೆಕ್ಸ್‌ ಕ್ಯಾರಿ 114 ಎಸೆತಗಳಲ್ಲಿ ಎರಡು ಸಿಕ್ಸರ್‌ 7 ಬೌಂಡರಿಗಳೊಂದಿಗೆ 196 ರನ್‌ಗಳನ್ನು ಗಳಿಸಿದರು. ಆ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು. ಆರನೇ ವಿಕೆಟ್‌ಗೆ 212 ರನ್‌ಗಳ ದಾಖಲೆಯ ಜತೆಯಾಟವಾಡಿದ ಈ  ಜೋಡಿ ಆಸ್ಟ್ರೇಲಿಯಾ ತಂಡಕ್ಕೆ ಮೂರು ವಿಕೆಟ್‌ಗಳ ಜಯ ತಂದುಕೊಟ್ಟರು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾಗೆ 2-1 ಅಂತರದಲ್ಲಿ ಸರಣಿ ಗೆಲುವಿಗೆ ಕಾರಣರಾದರು.

ಇನ್ನು ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 19 ರನ್‌ಗಳಿಂದ ಜಯ ಗಳಿಸಿದ್ದರೆ, ಎರಡನೇ ಪಂದ್ಯವನ್ನು ಇಂಗ್ಲೆಂಡ್ 24 ರನ್‌ಗಳಿಂದ ಗೆದ್ದುಕೊಂಡಿತ್ತು. 
 

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp