ಐಪಿಎಲ್ ಪ್ರೀತಿಸುತ್ತೇನೆ, ಭಾರತ ನನಗೆ ಸಾಕಷ್ಟನ್ನು ಕೊಟ್ಟಿದೆ: ಕೆವಿನ್ ಪೀಟರ್ಸನ್

ಐಪಿಎಲ್ ಟೂರ್ನಿ ಪ್ರಾರಂಭವಾಗುತ್ತಿದ್ದು, ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಈ ಬಾರಿಯ ಐಪಿಎಲ್ ಹೇಗೆ ಕೋವಿಡ್-19 ಕಾರಣದಿಂದಾಗಿ ಎಂದಿಗಿಂತ ಭಿನ್ನವಾಗಿರಲಿದೆ ಎಂಬ ಬಗ್ಗೆ ಮಾತನಾಡಿದ್ದಾರೆ. 
ಕೆವಿನ್ ಪೀಟರ್ಸನ್
ಕೆವಿನ್ ಪೀಟರ್ಸನ್

ನವದೆಹಲಿ: ಐಪಿಎಲ್ ಟೂರ್ನಿ ಪ್ರಾರಂಭವಾಗುತ್ತಿದ್ದು, ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಈ ಬಾರಿಯ ಐಪಿಎಲ್ ಹೇಗೆ ಕೋವಿಡ್-19 ಕಾರಣದಿಂದಾಗಿ ಎಂದಿಗಿಂತ ಭಿನ್ನವಾಗಿರಲಿದೆ ಎಂಬ ಬಗ್ಗೆ ಮಾತನಾಡಿದ್ದಾರೆ. 

"ಅಭಿಮಾನಿಗಳಿರುವುದಿಲ್ಲ, ಏನೂ ಇರುವುದಿಲ್ಲ. ಬಾಹ್ಯ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಂಡು ಆಟವಾಡುತ್ತಿರುತ್ತಾರೆ. ಇದು ಎಲ್ಲರಿಗೂ ಹೊಸ ಅನುಭವಾಗಿದೆ ಎಂದು ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ. 

ಕ್ರಿಕೆಟ್ ಜಗತ್ತಿನಲ್ಲಿ ಕೆಪಿ ಎಂದೇ ಪ್ರಸಿದ್ಧಿ ಗಳಿಸಿರುವ ಕೆವಿನ್ ಪೀಟರ್ಸನ್ ಐಪಿಎಲ್ 2020 ಯ ಕಾಮೆಂಟರಿ ವಿಭಾಗದಲ್ಲಿದ್ದು ಸೆ.19 ರಿಂದ ಯುಎಇಯಲ್ಲಿ ಐಪಿಎಲ್ ಪ್ರಾರಂಭವಾಗುತ್ತಿದೆ. 

ಐಪಿಎಲ್ ನಲ್ಲಿ ಕೆವಿನ್ ಆಡುತ್ತಿದ್ದಾಗ ಡೆಲ್ಲಿ ಡೇರ್ ಡೆವಿಲ್ಸ್ (ಇಂದಿನ ಡೆಲ್ಲಿ ಕ್ಯಾಪಿಟಲ್ಸ್) ರಾಯಲ್ ಚಾಲೆಂಜರ್ಸ್ ಬೆಂಗಳೂರು, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡನ್ನು ಪ್ರತಿನಿಧಿಸಿದ್ದರು. ಟ್ರೋಫಿ ಗೆಲ್ಲುವ ವಿಷಯದಲ್ಲಿ ಈಗಲೂ ಕೆವಿನ್ ದಿಲ್ಲಿ ತಂಡಕ್ಕೇ ತಮ್ಮ ಬೆಂಬಲ ಎನ್ನುತ್ತಿದ್ದಾರೆ. 

"ಯಾವ ತಂಡ ಟ್ರೋಫಿ ಗೆಲ್ಲಲಿದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ, ಆದರೆ ನನ್ನ ಬೆಂಬಲ ಡೆಲ್ಲಿ ಕ್ಯಾಪಿಟಲ್ಸ್ ಗೆ ಏಕೆಂದರೆ ಆ ತಂಡವೆಂದರೆ ನನಗೆ ಇಷ್ಟ. ಒಟ್ಟಾರೆಯಾಗಿ ಇದು ಅತ್ಯಂತ ವಿಭಿನ್ನ ಸೀಸನ್ ಆಗಿರುವುದರಿಂದ ಒಂದೆರಡು ವಾರಗಳ ಕಾಲ ಪಂದ್ಯಗಳನ್ನು ಗಮನಿಸಿ ವಿಶ್ಲೇಷಿಸಿದ ನಂತರವಷ್ಟೇ ಯಾವ ತಂಡ ಗೆಲ್ಲಲಿದೆ ಎಂದು ಹೇಳುವುದಕ್ಕೆ ಸಾಧ್ಯವಾಗಲಿದೆ" ಎಂದು ಕೆವಿನ್ ಹೇಳಿದ್ದಾರೆ. ನನಗೆ ಯುವ ಆಟಗಾರರೆಂದರೆ ಇಷ್ಟ, ರಿಸ್ಕ್ ತೆಗೆದುಕೊಂಡು ಆಡುವ ಆಟಗಾರರೆಂದರೆ ಇಷ್ಟ ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ. 

ತಮ್ಮ ಐಪಿಎಲ್ ಜರ್ನಿಯನ್ನು ನೆನಪಿಸಿಕೊಂಡಿರುವ ಕೆವಿನ್ ಭಾರತಕ್ಕೆ ಋಣಿಯಾಗಿದ್ದೇನೆ, ಭಾರತ, ಐಪಿಎಲ್ ನಿಂದ ಭಾವನಾತ್ಮಕವಾಗಿ ಸಾಕಷ್ಟು ಪಡೆದಿದ್ದೇನೆ. ಭಾರತದ ಸಂಸ್ಕೃತಿ, ಸ್ನೇಹದ ಅನುಭವ ಪಡೆಯುವುದಕ್ಕೆ ನಾನು ಅದೃಷ್ಟ ಮಾಡಿದ್ದೆ. ಭಾರತಕ್ಕೆ ನಾನು ಸಾಕಷ್ಟು ಋಣಿಯಾಗಿದ್ದೇನೆ ಎಂದು ಹೇಳಿರುವ ಕೆವಿನ್, ನ್ಯಾಷನಲ್ ಜಿಯಾಗ್ರಫಿಕ್ ನ ಸೇವ್ ದಿಸ್ ರೈನೋ ಎಂಬ ಡಾಕ್ಯುಮೆಂಟರಿಯನ್ನು ಪ್ರೊಮೋಟ್ ಮಾಡಿದ್ದು, ಇದನ್ನು ಭಾರತಕ್ಕೆ ತಮ್ಮ ಗಿಫ್ಟ್ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com