ರಾಷ್ಟ್ರೀಯ ತಂಡದಲ್ಲಿ ಆಡಲು ಅಫ್ರಿದಿ, ಅನಿಲ್‌ ಕುಂಬ್ಳೆ ಪ್ರೇರಣೆ: ರಶೀದ್‌ ಖಾನ್‌

ಅಫಘಾನಿಸ್ತಾನ ತಂಡದ ಪ್ರೀಮಿಯರ್ ಆಲ್ ರೌಂಡರ್ ರಶೀದ್ ಖಾನ್ ರಾಷ್ಟ್ರೀಯ ತಂಡದಲ್ಲಿ ಹಾಗೂ ವಿಶ್ವದಾದ್ಯಂತ ಟಿ20 ಲೀಗ್ ಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ.

Published: 18th September 2020 02:00 AM  |   Last Updated: 18th September 2020 02:00 AM   |  A+A-


Shahid Afridi, Anil Kumble Motivated Me To Represent My Country: Rashid Khan

ರಾಷ್ಟ್ರೀಯ ತಂಡದಲ್ಲಿ ಆಡಲು ಅಫ್ರಿದಿ, ಅನಿಲ್‌ ಕುಂಬ್ಳೆ ಪ್ರೇರಣೆ: ರಶೀದ್‌ ಖಾನ್‌

Posted By : Srinivas Rao BV
Source : UNI

ನವದೆಹಲಿ: ಅಫಘಾನಿಸ್ತಾನ ತಂಡದ ಪ್ರೀಮಿಯರ್ ಆಲ್ ರೌಂಡರ್ ರಶೀದ್ ಖಾನ್ ರಾಷ್ಟ್ರೀಯ ತಂಡದಲ್ಲಿ ಹಾಗೂ ವಿಶ್ವದಾದ್ಯಂತ ಟಿ20 ಲೀಗ್ ಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಇದೀಗ ಅವರು ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಫಘಾನಿಸ್ತಾನದಿಂದ ಬಂದ ರಶೀದ್ ಖಾನ್ ಬೆಳೆಯುತ್ತಿರುವಾಗಲೇ ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿದ್ದಾರೆ. ಒಮ್ಮೆ ಅವರು ಆಲ್ ರೌಂಡರ್ ವಿಭಾಗದ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದರು. ಕ್ರಿಕೆಟ್ ಜೀವನದಲ್ಲಿ ಯಶಸ್ವಿಯಾಗಲು ಹಾಗೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಭಾರತದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಹಾಗೂ ಪಾಕಿಸ್ತಾನದ ಶಾಹೀದ್ ಅಫ್ರಿದಿಯೇ ಸ್ಪೂರ್ತಿ ಎಂದು ಹೇಳಿದ್ದಾರೆ.

"ಒಂದು ದಿನ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತೇನೆಂದು ಇವರು ನನಗೆ ಪ್ರೇರಣೆ ಹಾಗೂ ಶಕ್ತಿಯನ್ನು ತುಂಬಿದ್ದರು" ಎಂದು 2020ರ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ರಶೀದ್ ಖಾನ್ ಹೇಳಿದರು. 

ಅಫ್ಘಾನಿಸ್ತಾನಕ್ಕೆ ಅತಿದೊಡ್ಡ ಸಾಧನೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಇದೀಗ, ತಂಡವು ಯಾವುದಕ್ಕೆ ಹಾತೊರೆಯುತ್ತಿದೆ, ದೇಶವು ಏನನ್ನು ನಿರೀಕ್ಷಿಸುತ್ತಿದೆ ಎಂದರೆ ಟಿ 20 ವಿಶ್ವಕಪ್ ಗೆಲ್ಲುವುದು ಎಂದು ಅವರು ಹೇಳಿದರು.

ಅಫಘಾನಿಸ್ತಾನ ತಂಡವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬೆಳೆಯುತ್ತಿರುವ ತಂಡವಾಗಿದೆ. ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿಯಂತಹ ಪ್ರತಿಭಾವಂತ ಕ್ರಿಕೆಟಿಗರು ತಂಡದ ಆಧಾರ ಸ್ಥಂಭವಾಗಿದ್ದಾರೆ. ರಶೀದ್ ಖಾನ್ ವಿಶ್ವದಾದ್ಯಂತ ಫ್ರ್ಯಾಂಚೈಸಿ ಲೀಗ್ ಗಳಲ್ಲಿ ತಮ್ಮ ಸ್ಪಿನ್ ಬೌಲಿಂಗ್ ಪರಾಕ್ರಮವನ್ನು ಸಾಬೀತುಪಡಿಸಿದ್ದಾರೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಐಸಿಸಿ ಟಿ20 ಕ್ರಿಕೆಟ್ ವಿಶ್ವ ರ್ಯಾಂ ಕಿಂಗ್ ನ ನಂ.1 ಬೌಲರ್ 21 ವರ್ಷದ ರಶೀದ್ ಖಾನ್ ಟಿ20 ಕ್ರಿಕೆಟ್ ವಿಶ್ವಕಪ್ ಗೆಲ್ಲುವುದೇ ತಮ್ಮ ಬಹುದೊಡ್ಡ ಗುರಿ ಎಂದಿದ್ದಾರೆ. ಇದಕ್ಕಾಗಿ ಅಂತಾರಾಷ್ಟ್ರೀಯ ತಂಡಗಳ ವಿರುದ್ಧ ಹೆಚ್ಚು ಪಂದ್ಯಗಳನ್ನಾಡಿ ಅನುಭವ ಪಡೆದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.

ವಿಶ್ವದಾದ್ಯಂತ ಫ್ರಾಂಚೈಸಿ ಲೀಗ್ ಗಳಾಡಿರುವ ಅನುಭವವು ಪರಿಪಕ್ವ ಆಟಗಾರನಾಗಲು ರಶೀದ್ ಖಾನ್ ಗೆ ಸಹಾಯವಾಗುತ್ತಿದೆ. ಸೀಮಿತ ಓವರ್ ಗಳ ಸ್ವರೂಪದಲ್ಲಿ ಅತ್ಯುತ್ತಮ ಸ್ಪಿನ್ನರ್ ಗಳಲ್ಲಿ ಒಬ್ಬರಾಗಿದ್ದಾರೆ. ಬೌಲಿಂಗ್ ಜೆತೆಗ ಬ್ಯಾಟಿಂಗ್ ನಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲರು.

211 ಟಿ20 ಪಂದ್ಯಗಳಾಡಿರುವ ರಶೀದ್ ಖಾನ್ 296 ವಿಕೆಟ್ ಗಳನ್ನು ಕಬಳಿಸಿದ್ದಾರೆ. ರಾಷ್ಟ್ರೀಯ ತಂಡದಲ್ಲಿ 23 ಟೆಸ್ಟ್ ವಿಕೆಟ್ ಗಳು ಹಾಗೂ 133 ಓಡಿಐ ವಿಕೆಟ್ ಗಳನ್ನು ಪಡೆದಿದ್ದಾರೆ ಹಾಗೂ ಚುಟುಕು ಕ್ರಿಕೆಟ್ ನಲ್ಲಿ 89 ವಿಕೆಟ್ ಗಳನ್ನು ತನ್ನ ಖಾತೆಯಲ್ಲಿ ಇರಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp