ಆರ್'ಸಿಬಿ ಥೀಮ್ ಸಾಂಗ್ ರಿಲೀಸ್: ಕನ್ನಡ ಸಾಹಿತ್ಯ ಬದಲು ಹಿಂದಿ, ಇಂಗ್ಲೀಷ್ ಹೆಚ್ಚು ಬಳಕೆ; ಅಭಿಮಾನಿಗಳು ಗರಂ!

ಐಪಿಎಲ್ ಆರಂಭಕ್ಕೆ ಇನ್ನು ಒಂದೇ ದಿನ ಬಾಕಿ ಉಳಿದಿದ್ದು, ಈ ನಡುವಲ್ಲೇ ಆರ್'ಸಿಬಿ ತಂಡ ಈ ಬಾರಿಯ ತನ್ನ ಅಧಿಕೃತ ಥೀಮ್ ಸಾಂಗ್'ನ್ನು ಬಿಡುಗಡೆ ಮಾಡಿದೆ. ಆದರೆ, ಈ ಬಾರಿಯ ಹಾಡು ಅಭಿಮಾನಿಗಳಲ್ಲಿ ಕೊಂಚ ನಿರಾಶೆಯನ್ನು ಮೂಡಿಸಿದೆ.
ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)

ನವದೆಹಲಿ: ಐಪಿಎಲ್ ಆರಂಭಕ್ಕೆ ಇನ್ನು ಒಂದೇ ದಿನ ಬಾಕಿ ಉಳಿದಿದ್ದು, ಈ ನಡುವಲ್ಲೇ ಆರ್'ಸಿಬಿ ತಂಡ ಈ ಬಾರಿಯ ತನ್ನ ಅಧಿಕೃತ ಥೀಮ್ ಸಾಂಗ್'ನ್ನು ಬಿಡುಗಡೆ ಮಾಡಿದೆ. ಆದರೆ, ಈ ಬಾರಿಯ ಹಾಡು ಅಭಿಮಾನಿಗಳಲ್ಲಿ ಕೊಂಚ ನಿರಾಶೆಯನ್ನು ಮೂಡಿಸಿದೆ. 

ಆರ್'ಸಿಬಿ ಇಂದು ಬಿಡುಗಡೆ ಮಾಡಿರುವ ಥೀಮ್ ಸಾಂಗ್ 1 ನಿಮಿಷ 47 ಸೆಕೆಂಡ್ ಗಳಿದ್ದು, ಹಾಡಿನಲ್ಲಿ ಆರ್ ಸಿಬಿ ತಂಡದ ಆಟಗಾರರ ಅಭ್ಯಾಸದ ದೃಶಾವಳಿಗಳು, ಅಭಿಮಾನಿಗಳ ಉತ್ಸಾಹಭರಿತ ಕ್ಷಣಗಳನ್ನು ತೋರಿಸಲಾಗಿದೆ.

ಹಾಡಿನಲ್ಲಿ ಕನ್ನಡವನ್ನು ಅಲ್ಪ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದ್ದು, ಹಿಂದಿ ಹಾಗೂ ಇಂಗ್ಲೀಷ್ ಸಾಹಿತ್ಯವೇ ಹೆಚ್ಚಾಗಿ ಬಳಕೆ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ಕನ್ನಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. 

ಭಾರತದ ಮಾಜಿ ವೇಗಿ ದೊಡ್ಡ ಗಣೇಶ್ ಟ್ವೀಟ್ ಮಾಡಿ ಹಾಡು ಚೆನ್ನಾಗಿದೆ, ಹಿಂದಿಯ ಬದಲು ಕನ್ನಡದ ಸಾಹಿತ್ಯ ಬಳಕೆಯಾಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಿದ್ದಾರೆ. ಇನ್ನು ಕೆಲವರು ಹಿಂದಿ ಹೇರಿಕೆಯ ವಿರುದ್ಧ ಹೇಳಿ ಹಾಡಿನಲ್ಲಿ ಕನ್ನಡ ಸಾಹಿತ್ಯ ಇರಬೇಕಿತ್ತು ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೇಗೆ ತಮ್ಮ ತಂಡದ  ಥೀಮ್ ಸಾಂಗ್ ನಲ್ಲಿ ಸ್ಥಳೀಯ ಭಾಷೆಯನ್ನು ಬಳಿಸಿದ್ದಾರೆಯೋ ಹಾಗೆ ಆರ್ ಸಿಬಿ ತಂಡವೂ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕಿತ್ತು ಎಂದು ಕೆಲ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಶನಿವಾರದಿಂದ ಐಪಿಎಲ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಣಕ್ಕಿಳಿಯುತ್ತಿದೆ. ಆರ್‌ಸಿಬಿ ತಂಡದ ಮೊದಲ ಪಂದ್ಯ ಸೋಮವಾರ ನಡೆಯಲಿದ್ದು, ಸನ್ ರೈಸರ್ಸ್ ಹೈದರಾಬಾದ್ ಆರ್‌ಸಿಬಿ ಮುಖಾಮುಖಿಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com