ಐಪಿಎಲ್ ಎಫೆಕ್ಟ್: ಬಿಸಿಸಿಐ, ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆಯೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಒಪ್ಪಂದ 

ಯುಎಇಯಲ್ಲಿ ಐಪಿಎಲ್ ಟೂರ್ನಿಯ ನಡೆಯುತ್ತಿರುವ ಸಂದರ್ಭದಲ್ಲೇ ಬಿಸಿಸಿಐ ಮತ್ತು ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆ ಮಹತ್ವದ ಕ್ರಿಕೆಟ್ ಒಪ್ಪಂದಗಳಿಗೆ ಸಹಿ ಹಾಕಿವೆ.
ಬಿಸಿಸಿಐ, ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆ ಒಪ್ಪಂದ
ಬಿಸಿಸಿಐ, ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆ ಒಪ್ಪಂದ

ದುಬೈ: ಯುಎಇಯಲ್ಲಿ ಐಪಿಎಲ್ ಟೂರ್ನಿಯ ನಡೆಯುತ್ತಿರುವ ಸಂದರ್ಭದಲ್ಲೇ ಬಿಸಿಸಿಐ ಮತ್ತು ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆ ಮಹತ್ವದ ಕ್ರಿಕೆಟ್ ಒಪ್ಪಂದಗಳಿಗೆ ಸಹಿ ಹಾಕಿವೆ.

ಹೌದು.. ಹಾಲಿ ಐಪಿಎಲ್ ಟೂರ್ನಿ ನಡುವೆಯೇ ಭಾರತ ಮತ್ತು ಯುಎಇ ಉಭಯ ದೇಶಗಳ ನಡುವಿನ ಕ್ರಿಕೆಟ್ ಬಾಂಧವ್ಯವನ್ನು ಹೆಚ್ಚಿಸಲು ಬಿಸಿಸಿಐ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಶನಿವಾರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಎಮಿರೇಟ್ಸ್ ಕ್ರಿಕೆಟ್  ಮಂಡಳಿ ಅಧ್ಯಕ್ಷ ಖಲೀದ್ ಅಲ್ ಝರೂನಿ ಅವರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ. ಸಹಿ ಕಾರ್ಯಕ್ರಮದ ವೇಳೆ ಸೌರವ್ ಗಂಗೂಲಿ ಅವರೊಂದಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಖಚಾಂಚಿ ಅರುಣ್ ಧುಮಾಲ್ ಅವರು ಕೂಡ ಇದ್ದರು. 

ಕೊರೋನಾ ವೈರಸ್ ಉಲ್ಪಣಿಸಿದ ಹಿನ್ನಲೆಯಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ 13 ಆವೃತ್ತಿಯ ಟೂರ್ನಿಯನ್ನು ಯುಎಇಯಲ್ಲಿ ನಡೆಸಲಾಗುತ್ತಿದೆ. ಯುಎಇಯ ಮೂರು ಕ್ರೀಡಾಂಗಣಗಳಲ್ಲಿ ಅಂದರೆ ದುಬೈ, ಅಬುದಾಬಿ ಮತ್ತು ಶಾರ್ಜಾದಲ್ಲಿ ಟೂರ್ನಿಯ ಪಂದ್ಯಗಳು ನಡೆಯುತ್ತಿವೆ. ದುಬೈನಲ್ಲಿ ಒಟ್ಟು 24  ಪಂದ್ಯಗಳನ್ನು ಆಯೋಜಿಸಲಾಗಿದ್ದು, ಅಬುದಾಬಿಯಲ್ಲಿ 20 ಪಂದ್ಯಗಳು ಮತ್ತು ಶಾರ್ಜಾದಲ್ಲಿ 12 ಪಂದ್ಯಗಳು ನಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com