ಐಪಿಎಲ್ 2020: ಸೂಪರ್ ಒವರ್ ನಲ್ಲಿ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್ 

ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ 2020 ಪಂದ್ಯದಲ್ಲಿ ತೀವ್ರ ಪೈಪೋಟಿಯಿಂದ ಕೂಡಿದ ಸೂಪರ್ ಒವರ್ ಪಂದ್ಯದಲ್ಲಿ  ಡೆಲ್ಲಿ ಕ್ಯಾಪಿಟಲ್ಸ್ , ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆದ್ದು ಬೀಗಿದೆ.
ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್

ದುಬೈ: ರೋಚಕತೆ ಹುಟ್ಟಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್  ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವಣ 13ನೇ ಆವೃತ್ತಿಯ ಎರಡನೇ ಪಂದ್ಯವನ್ನು ಶ್ರೇಯಸ್ ಅಯ್ಯರ್ ಪಡೆ ಗೆದ್ದು ಬೀಗಿದೆ.

ಸೂಪರ್ ಓವರ್ ನಲ್ಲಿ ಮೊದಲ ಎಸೆತದಲ್ಲಿ ಎರಡು ರನ್ ಗಳಿಸಿದ ಪಂಜಾಬ್, ನಂತರದ ಎರಡು ಎಸೆತಗಳಲ್ಲಿ ಸತತ ಎರಡು ವಿಕೆಟ್ ಕಳೆದುಕೊಂಡಿತು. ಮೂರು ರನ್ ಗಳ ಗುರಿಯನ್ನು ಕೇವಲ ಎರಡು ಎಸೆತಗಳಲ್ಲಿ ತಲುಪಿದ ಡೆಲ್ಲಿ ಜಯದ ನಗೆ ಬೀರಿತು.

ಇದಕ್ಕೂ ಮುನ್ನ  ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್  ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಪಿಪಿ ಷಾ 5 ರನ್ ಗಳಿಸಿ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಜೋರ್ಡನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಶಿಖರ್ ಧವನ್ ಶೂನ್ಯ ರನ್ ಗಳಿಗೆ ರನ್ ಔಟ್ ಆದರು.ಹ್ಯಾಟ್ ಮೈರ್ 7, ಶ್ರೇಯಸ್ ಅಯ್ಯರ್ 39, ಆರ್ ಆರ್ ಪಂತ್ 31, ಸ್ಟೋನಿಸ್ 53, ಎಆರ್ ಪಟೇಲ್ 6, ಆರ್ ಅಶ್ವಿನ್ 4 ರನ್ ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಸವಾಲಿನ 157 ರನ್ ಗಳ ಗುರಿ ಬೆನ್ನತ್ತಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಆಟಗಾರ ಕೆಎಲ್ ರಾಹುಲ್ 21, ಮಯಾಂಕ್ ಅಗರ್ ವಾಲ್ ಆಕರ್ಷಕ 89, ಕೆಕೆ ನಾಯ್ಯರ್ 1, ಎನ್ ಪೂರಾನ್ 0, ಎಸ್ ಎನ್ ಖಾನ್ 12, ಕೆ. ಗೌತಮ್ 20 ಜೋರ್ಡನ್ 5 ರನ್ ಗಳ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು.

ಮಾಕ್ರಸ್ ಸ್ಟೊಯಿನಿಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com