ವಿಶಿಷ್ಠ ದಾಖಲೆಯ ಸನಿಹದಲ್ಲಿ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಮವಾರ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಮೊದಲನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. 

Published: 21st September 2020 08:24 PM  |   Last Updated: 21st September 2020 08:24 PM   |  A+A-


Virat kohli (file photo)

ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)

Posted By : Srinivas Rao BV
Source : UNI

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಮವಾರ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಮೊದಲನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. 

ನೆರೆ ಹೊರೆಯ ಫ್ರಾಂಚೈಸಿ ವಿರುದ್ಧ ಗೆಲುವಿಗಾಗಿ ತಂಡವನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸುವ ಗುರಿಯನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. 

ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಾಯಿಂಟ್ಸ್ ಟೇಬಲ್ ನಲ್ಲಿ ಕೊನೆಯ ಸ್ಥಾನವನ್ನು ಪಡೆದಿತ್ತು. ಇದರಿಂದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆದರೆ, ಈ ಬಾರಿ ತಂಡವನ್ನು ಗೆಲ್ಲಿಸಿ ಟೀಕೆಗಳಿಂದ ಮುಕ್ತಿ ಪಡೆಯುವ ಯೋಚನೆಯಲ್ಲಿ ಕೊಹ್ಲಿ ಇದ್ದಾರೆ.

ಆದಾಗ್ಯೂ, ಈ ಒಂದೇ ಒಂದು ಕಾರಣದಿಂದ ಟೂರ್ನಿಯ ಮೊದಲನೇ ಪಂದ್ಯ ಗೆಲ್ಲುವುದು ವಿರಾಟ್ ಕೊಹ್ಲಿಗೆ ತುಂಬಾ ಮುಖ್ಯವಾಗಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಆರ್ ಸಿಬಿ ಮಣಿಸಿದ್ದೇ ಆದಲ್ಲಿ, ಬೆಂಗಳೂರು ಫ್ರಾಂಚೈಸಿಯ ನಾಯಕನಾಗಿ 50ನೇ ಪಂದ್ಯ ಗೆದ್ದ ಕೀರ್ತಿಗೆ ವಿರಾಟ್ ಭಾಜನವಾಗಲಿದ್ದಾರೆ.

ಇಂದಿನ (ಸೆ.21) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಮೈಲುಗಲ್ಲು ಸ್ಥಾಪಿಸಿದ್ದೇ ಆದಲ್ಲಿ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ನಾಲ್ಕನೇ ನಾಯಕ ಎಂಬ ಸಾಧನೆಗೆ  ಕೊಹ್ಲಿ ಒಳಗಾಗಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ(101) ಅಗ್ರ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ (71) ಎರಡನೇ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ(60) ಮೂರನೇ ಸ್ಥಾನದಲ್ಲಿದ್ದಾರೆ. 

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿರುವ ಶೇನ್ ವ್ಯಾಟ್ಸನ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಇನ್ನೂ 20 ರನ್ ಗಳು ಮಾತ್ರ ಅಗತ್ಯವಿದೆ ಹಾಗೂ ಐಪಿಎಲ್ 200 ಸಿಕ್ಸರ್ ಗಳನ್ನು ದಾಖಲಿಸಲು ಇನ್ನೂ 10 ಸಿಕ್ಸ್ ಗಳ ಅವಶ್ಯಕತೆ ಇದೆ. ಈ ದಾಖಲೆ ಮಾಡಿದ್ದೇ ಆದಲ್ಲಿ ವಿರಾಟ್ ಕೊಹ್ಲಿ ಒಟ್ಟಾರೆ, ನಾಲ್ಕನೇ ಬ್ಯಾಟ್ಸ್ ಮನ್ ಆಗಲಿದ್ದಾರೆ. ಕ್ರಿಸ್ ಗೇಲ್(326), ಎಬಿ ಡಿವಿಲಿಯರ್ಸ್(212) ಹಾಗೂ ಎಂಎಸ್ ಧೋನಿ(209) ಅತಿ ಹೆಚ್ಚು ಸಿಕ್ಸರ್ ಗಳನ್ನು ಬಾರಿಸಿದ ಪಟ್ಟಿಯಲ್ಲಿ ಕ್ರಮವಾಗಿ ಅಗ್ರ ಸ್ಥಾನದಲ್ಲಿದ್ದಾರೆ.

ಗಮನಿಸಬೇಕಾದ ಒಂದು ಕುತೂಹಲಕಾರಿ ಸಂಗತಿಯೆಂದರೆ, ಐಪಿಎಲ್ ನಲ್ಲಿ ಆರ್ ಸಿಬಿಗೆ ಋತುವಿನ ಆರಂಭಿಕ ಪಂದ್ಯದಲ್ಲಿ ವಿರಾಟ್ ನ ಸ್ಟ್ರೈಕ್ ರೇಟ್ 113.53 ಆಗಿದೆ. ಪ್ರತಿ ವರ್ಷಗಳಲ್ಲಿ ಋತುವಿನ ಆರ್ ಸಿಬಿಯ ಆರಂಭಿಕ ಪಂದ್ಯದಲ್ಲಿ ಕೊಹ್ಲಿ 11 ಇನ್ನಿಂಗ್ಸ್ ಗಳಲ್ಲಿ 235 ರನ್ ಗಳಿಸಿದ್ದಾರೆ. ಹಾಗಾಗಿ, ಸನ್ ರೈಸರ್ಸ್ ಹೈದರಾಬಾದ್ ಎಚ್ಚರದಿಂದ ಇರಬೇಕಾದ ಅಗತ್ಯವಿದೆ.

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp