ಕೊನೆಯಲ್ಲಿ ಬಂದು ಸಿಕ್ಸ್ ಹೊಡೆದರೆ ಪ್ರಯೋಜನವಿಲ್ಲ: ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಬಗ್ಗೆ ಗಂಭೀರ್ ಟೀಕೆ

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್‌ ಧೋನಿ ಆಯ್ಕೆ ಮಾಡಿಕೊಂಡ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಟೀಮ್‌ ಇಂಡಿಯಾ ಮಾಜಿ ಆರಂಭಿಕ ಗೌತಮ್‌ ಗಂಭೀರ್‌ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. 
ಧೋನಿ
ಧೋನಿ

ನವದೆಹಲಿ: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್‌ ಧೋನಿ ಆಯ್ಕೆ ಮಾಡಿಕೊಂಡ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಟೀಮ್‌ ಇಂಡಿಯಾ ಮಾಜಿ ಆರಂಭಿಕ ಗೌತಮ್‌ ಗಂಭೀರ್‌ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. 

217 ರನ್‌ಗಳ ಬೃಹತ್‌ ಮೊತ್ತದ ಗುರಿ ಹಿಂಬಾಲಿಸಿದ ವೇಳೆ ಎಂಎಸ್‌ ಧೋನಿ ತಮ್ಮ ಸ್ಥಾನದಲ್ಲಿ ಮತ್ತೊಮ್ಮೆ ಸ್ಯಾಮ್‌ ಕರನ್‌ ಅವರನ್ನು ಕಳುಹಿಸಿದರು. ಪಾಫ್‌ ಡುಪ್ಲೆಸಿಸ್‌ ಚೆನ್ನೈ ಪರ ಅತಿ ಹೆಚ್ಚು ವೈಯಕ್ತಿಕ ರನ್‌ಗಳನ್ನು ಗಳಿಸಿದರೂ ಅವರು ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.  ಆದರೆ, ಕೊನೆಯ ಹಂತದಲ್ಲಿ ನಾಯಕ ಎಂಎಸ್‌ ಧೋನಿ ಸಿಂಗಲ್‌ ರನ್‌ ಗಳಿಸುವ ಮೂಲಕ ಡುಪ್ಲೆಸಿಸ್‌ಗೆ ಸ್ಟ್ರೈಕ್‌ ನೀಡುತ್ತಿದ್ದರು.

ಬೃಹತ್‌ ಮೊತ್ತದ ಗುರಿ ಹಿಂಬಾಲಿಸುವಾಗ ಎಂಎಸ್‌ ಧೋನಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರ ಬಗ್ಗೆ ಯಾವುದೇ ಅರ್ಥವಿಲ್ಲ ಎಂದು ಗೌತಮ್‌ ಗಂಭೀರ್‌ ಟೀಕಿಸಿದರು. ಫಾಫ್‌ ಟುಪ್ಲೆಸಿಸ್‌ ಒಬ್ಬರು ಮಾತ್ರ ಚೆನ್ನೈ ಪರ  ಏಕಾಂಗಿಯಾಗಿ ಹೋರಾಡಿದರು ಎಂಬ ಬಗ್ಗೆ ಇದೇ ವೇಳೆ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಮಾಜಿ ನಾಯಕ ಹೇಳಿದರು.

ಇಎಸ್‌ಪಿಎನ್‌ ಕ್ರಿಕ್‌ಇನ್ಫೊದ ಟೈಮ್‌ ಔಟ್‌ನಲ್ಲಿ ಮಾತನಾಡಿದ ಗೌತಮ್‌ ಗಂಭೀರ್‌, "ನಿಜ ಹೇಳಬೇಕೆಂದರೆ ನನಗೆ ಅಚ್ಚರಿಯಾಯಿತು ಎಂದು ಹೇಳಿದರು.

"ಎಂಎಸ್‌ ಧೋನಿ ಬ್ಯಾಟಿಂಗ್‌ ನಂ. 7? ಹಾಗೂ ತಮ್ಮ ಸ್ಥಾನದಲ್ಲಿ ಋತುರಾಜ್‌ ಗಾಯಕ್ವಾಡ್‌ ಹಾಗೂ ಸ್ಯಾಮ್‌ ಕರನ್‌ ಅವರನ್ನು ಕಳುಹಿಸಿದರು. ತಂಡವನ್ನು ನೀವು ಮುನ್ನಡೆಸುತ್ತಿದ್ದೀರಿ ಹಾಗೂ ಇದು ಮುಂದೆ ನಿಂತು ತಂಡವನ್ನು ಮುನ್ನಡೆಸುವ ರೀತಿಯಲ್ಲ. 213 (217) ರನ್‌ಗಳನ್ನು ಗುರಿ ಚೇಸ್‌ ಮಾಡುತ್ತಿರುವಾಗ ನೀವು ಈ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಯಾವುದೇ ಅರ್ಥವಿಲ್ಲ. ಏಕಾಂಗಿ ಹೋರಾಟ ನಡೆಸಿದ್ದು ಡುಪ್ಲೆಸಿಸ್‌ ಒಬ್ಬರು ಮಾತ್ರ ಎಂದು ಗಂಭೀರ್‌ ತಿಳಿಸಿದರು.

"ಎಂಎಸ್‌ ಧೋನಿ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್‌ ಸಿಡಿಸಿದ ಬಗ್ಗೆ ಮಾತನಾಡಬಹುದು, ಆದರೆ ಈ ಬಗ್ಗೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಯಾವುದೇ ಅರ್ಥವಿಲ್ಲ. ಇದು ಅವರ ವೈಯಕ್ತಿಕ ರನ್‌ಗಳಷ್ಟೆ. ನೀವು ಬೇಗ ಕ್ರೀಸ್‌ಗೆ ಬಂದು ಔಟ್ ಆಗಿದ್ದರೆ, ಇದು ತಪ್ಪಾಗುತ್ತಿರಲಿಲ್ಲ. ಕಿನಿಷ್ಠ ಪಕ್ಷ ಮುಂದೆಯಿಂದ ತಂಡವನ್ನು ಮುನ್ನಡೆಸಬೇಕು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com