ಐಪಿಎಲ್‌ 2020: ನಿಧಾನಗತಿಯಲ್ಲಿ ಬೌಲಿಂಗ್‌ ಮಾಡಿದ್ದಕ್ಕಾಗಿ ಕೊಹ್ಲಿಗೆ 12 ಲಕ್ಷ ರೂ ದಂಡ

ಕಿಂಗ್ಸ್ ಇಲೆವೆನ್‌ ಪಂಜಾಬ್ ವಿರುದ್ಧ ಪಂದ್ಯದ ಸೋಲಿನ ಬೇಸರದಲ್ಲಿದ್ದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್‌ ಕೊಹ್ಲಿಗೆ ಮತ್ತೊಂದು ಆಘಾತ ಉಂಟಾಯಿತು. ದುಬೈನಲ್ಲಿ ನಡೆದಿದ್ದ 13ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ನಿಂದಾಗಿ ಕೊಹ್ಲಿಗೆ ದಂಡ ವಿಧಿಸಲಾಗಿದೆ.

Published: 25th September 2020 10:05 AM  |   Last Updated: 25th September 2020 01:43 PM   |  A+A-


Virat Kohli with teammates during the clash against KXIP

ಪಂದ್ಯದ ವೇಳೆ ತಂಡದೊಂದಿರುವ ವಿರಾಟ್ ಕೊಹ್ಲಿ

Posted By : Manjula VN
Source : UNI

ನವದೆಹಲಿ: ಕಿಂಗ್ಸ್ ಇಲೆವೆನ್‌ ಪಂಜಾಬ್ ವಿರುದ್ಧ ಪಂದ್ಯದ ಸೋಲಿನ ಬೇಸರದಲ್ಲಿದ್ದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್‌ ಕೊಹ್ಲಿಗೆ ಮತ್ತೊಂದು ಆಘಾತ ಉಂಟಾಯಿತು. ದುಬೈನಲ್ಲಿ ನಡೆದಿದ್ದ 13ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ನಿಂದಾಗಿ ಕೊಹ್ಲಿಗೆ ದಂಡ ವಿಧಿಸಲಾಗಿದೆ.

ಟಾಸ್‌ ಗೆಲುವಿನ ಹೊರತಾಗಿಯೂ ವಿರಾಟ್‌ ಕೊಹ್ಲಿ ನಾಯುಕತ್ವದ ಆರ್‌ಸಿಬಿ 97 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿತು. ಮೊದಲನೇ ಅವಧಿಯಲ್ಲಿ ಅವರು ಕೆ.ಎಲ್‌ ರಾಹುಲ್‌ ಅವರ ಎರಡು ಕ್ಯಾಚ್‌ಗಳನ್ನು ಕೈ ಚೆಲ್ಲಿದರು. ಇದನ್ನು ಸದುಪಯೋಗ ಪಡಿಸಿಕೊಂಡ ಪಂಜಾಬ್‌ ನಾಯಕ, 69 ಎಸೆತಗಳಲ್ಲಿ 132 ರನ್‌ಗಳನ್ನು ಸಿಡಿಸಿದರು.

ಎರಡು ಜೀವದಾನ ಪಡೆದ ಕನ್ನಡಿಗ ಕೆ.ಎಲ್ ರಾಹುಲ್‌ ಕೊನೆಯ 9 ಎಸೆತಗಳಲ್ಲಿ 42 ರನ್‌ಗಳನ್ನು ಚಚ್ಚಿದ್ದರು. ಇದರ ಫಲವಾಗಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ನಿಗದಿತ 20 ಓವರ್‌ಗಳಲ್ಲಿ 206 ರನ್‌ಗಳನ್ನು ದಾಖಲಿಸಿತ್ತು. ರಾಹುಲ್‌ ಇನಿಂಗ್ಸ್‌ನಲ್ಲಿ ಏಳು ಅದ್ಭುತ ಸಿಕ್ಸರ್‌ಗಳು ಹಾಗೂ 14 ಬೌಂಡರಿಗಳು ಒಳಗೊಂಡಿವೆ.

ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ನಲ್ಲಿಯೂ ವಿಫಲರಾದರು. ಆರ್‌ಸಿಬಿ ಕ್ಯಾಪ್ಟನ್‌ ಕೇವಲ ಒಂದೇ ಒಂದು ರನ್‌ ಗಳಿಸಿ ಔಟ್‌ ಆದರು. ಶೆಲ್ಡನ್‌ ಕಾಟ್ರೆಲ್‌ಗೆ ಎಸೆತದಲ್ಲಿ ಬೌಂಡರಿ ಹೊಡೆಯಲು ಪ್ರಯತ್ನಿಸಿದ ವಿರಾಟ್‌, ರವಿ ಬಿಷ್ಣೋಯ್‌ಗೆ ಕ್ಯಾಚ್‌ ನೀಡಿದರು. ಇದರ ನಡುವೆ ಆರ್‌ಸಿಬಿ 17ನೇ ಓವರ್‌ನಲ್ಲಿ 109 ರನ್‌ಗಳಿಗೆ ಆಲೌಟ್‌ ಆಯಿತು. 30 ರನ್‌ಗಳನ್ನು ಗಳಿಸಿದ ವಾಷಿಂಗ್ಟನ್‌ ಸುಂದರ್‌ ಆರ್‌ಸಿಬಿ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

ಪಂದ್ಯ ಸೋಲಿನ ನಡುವೆ ನಾಯಕ ವಿರಾಟ್‌ ಕೊಹ್ಲಿಗೆ ನಿಧಾನಗತಿಯ ಬೌಲಿಂಗ್‌ ಮಾಡಿದ್ದರಿಂದ ದಂಡ ವಿಧಿಸಲಾಯಿತು. ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ವಿರಾಟ್‌, ಡೇಲ್‌ ಸ್ಟೇಯ್ನ್‌, ಉಮೇಶ್‌ ಯಾದವ್‌ ಹಾಗೂ ನವದೀಪ್‌ ಸೈನಿ ಒಟ್ಟು ಮೂವರು ವೇಗಿಗಳನ್ನು ಆಡಿಸಿದರು. ಆದ್ದರಿಂದ ಮೊದಲ ಇನಿಂಗ್ಸ್ ಪೂರ್ಣಗೊಳಿಸಲು ಒಂದು ಗಂಟೆ 51 ನಿಮಿಷಗಳನ್ನು ಪಡೆಯಬೇಕಾಯಿತು.

ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಪ್ರಸಕ್ತ ಆವೃತ್ತಿಯಲ್ಲಿ ಇದು ಆರ್‌ಸಿಬಿಯ ಮೊದಲ ಅಫೆನ್ಸ್ ಆಗಿದೆ. ಆದ್ದರಿಂದ ನಾಯಕ ವಿರಾಟ್‌ ಕೊಹ್ಲಿ 12 ಲಕ್ಷಗಳನ್ನು ದಂಡ ವಿಧಿಸಲಾಗಿದೆ. ಚೊಚ್ಚಲ ಐಪಿಎಲ್‌ ಟ್ರೋಫಿ ಗೆಲುವಿನ ಕನಸು ಕಂಡಿರುವ ವಿರಾಟ್‌ ಕೊಹ್ಲಿ ತಪ್ಪುಗಳನ್ನು ತಿದ್ದಿಕೊಂಡು ಮುಂದುವರಿಯುವುದಾಗಿ ತಿಳಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp