ನಿಮ್ಮ ಮಾತು ಅಸಹ್ಯಕರವಾಗಿದೆ: ಸುನೀಲ್ ಗವಾಸ್ಕರ್ ಸೆಕ್ಸಿ ಹೇಳಿಕೆಗೆ ಅನುಷ್ಕಾ ಶರ್ಮಾ ಆಕ್ರೋಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಟೀಕಿಸುವ ಭರದಲ್ಲಿ ಅವರ ಪತ್ನಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ನಿರೂಪಕ ಸುನಿಲ್ ಗವಾಸ್ಕರ್ ಅವರ ವಿರುದ್ಧ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published: 25th September 2020 03:23 PM  |   Last Updated: 25th September 2020 03:26 PM   |  A+A-


anushka1

ವಿರಾಟ್ - ಅನುಷ್ಕಾ

Posted By : Lingaraj Badiger
Source : The New Indian Express

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಟೀಕಿಸುವ ಭರದಲ್ಲಿ ಅವರ ಪತ್ನಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ನಿರೂಪಕ ಸುನಿಲ್ ಗವಾಸ್ಕರ್ ಅವರ ವಿರುದ್ಧ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುನಿಲ್ ಗವಾಸ್ಕರ್ ಹೇಳಿಕೆ ಬಗ್ಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟಿ, ಅದು, ಶ್ರೀ ಗವಾಸ್ಕರ್ ಅವರೆ, ನಿಮ್ಮ ಮಾತು ಅಸಹ್ಯಕರವಾಗಿದೆ. ಪತಿಯ ಆಟಕ್ಕೆ ಪತ್ನಿಯನ್ನು ಏಕೆ ಎಳೆದುತರುತ್ತೀರಾ? ನನ್ನ ಬಗ್ಗೆ ನೀವು ಹೇಳಿಕೆ ನೀಡಲು ಏಕೆ ಯೋಚಿಸಿದ್ದೀರಿ ಎಂಬುದನ್ನು ವಿವರಿಸಿ. ಇದು 2020. ಆದರೆ ನನಗೆ ಸಂಬಂಧಿಸಿದ ವಿಚಾರಗಳು ಇನ್ನೂ ಬದಲಾಗಿಲ್ಲ. ಕ್ರಿಕೆಟ್‌ ವಿಚಾರಕ್ಕೆ ನನ್ನನ್ನು ಎಳೆದು ತರುವುದನ್ನು ಮೊದಲು ನಿಲ್ಲಿಸಿ ಎಂದು ಎಂದಿದ್ದಾರೆ.

ಕಿಂಗ್ಸ್‌ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಒಂದಿಷ್ಟು ತಪ್ಪುಗಳನ್ನು ಮಾಡಿದ್ದರು. ಮುಖ್ಯವಾಗಿ ಪಂಜಾಬ್‌ ಅಪಾಯಕಾರಿ ಆಟಗಾರ, ನಾಯಕ ಕೆಎಲ್ ರಾಹುಲ್ ಅವರ ಕ್ಯಾಚ್ ಅನ್ನು ಎರಡೆರಡು ಬಾರಿ ಕೈಚೆಲ್ಲಿದ್ದರು. ಇದೇ ಬೆಂಗಳೂರಿ ಗೆಲುವಿಗೆ ಮುಳುವಾಯಿತು. ಬಳಿಕ ಬ್ಯಾಟಿಂಗ್ ವೇಳೆ ಕ್ರೀಸ್ ಗೆ ಬಂದ ಕೊಹ್ಲಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದರು. ವಿರಾಟ್ ಕೊಹ್ಲಿ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. 

ಕೊಹ್ಲಿಯಿಂದ ಎರಡೆರಡು ಬಾರಿ ಜೀವದಾನ ಪಡೆದ ಕನ್ನಡಿಗ, ಮೂಲತಃ ಮಂಗಳೂರಿನವರಾದ ರಾಹುಲ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು. 69 ಎಸೆತಗಳಲ್ಲಿ 14 ಫೋರ್ಸ್, 7 ಸಿಕ್ಸರ್ ಸೇರಿ 132 ರನ್ ಚಚ್ಚಿದರು. ಹೀಗಾಗಿ ಪಂಜಾಬ್ 206 ರನ್ ಕಲೆ ಹಾಕಿತ್ತು. ಈ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿ ನೀರಸ ಬ್ಯಾಟಿಂಗ್‌ನೊಂದಿಗೆ 109 ರನ್‌ ಸೇರಿಸಿ 97 ರನ್‌ನಿಂದ ಸೋತಿತು.

ಆಗ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗವಾಸ್ಕರ್ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ಅನುಷ್ಕಾ ಕುರಿತು ಮಾತನಾಡಿದ್ದರು. 'Inhone lockdown me to bas Anushka ki gendon ki practice ki hai' (ಲಾಕ್‌ ಟೈಮ್ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳೊಂದಿಗೆ ಅಭ್ಯಾಸ ಮಾಡಿದ್ದಾರೆ) ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.

ಗವಾಸ್ಕರ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳ ಆಕ್ರೋಶ
ಗವಾಸ್ಕರ್ ಹೇಳಿಕೆ ಸಂಬಂಧ ಕ್ರಿಕೆಟ್ ಅಭಿಮಾನಿಗಳು ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದಲೇ ತೆಗೆದು ಹಾಕಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp