ಐಪಿಎಲ್ 2020: ಶುಭಮ್ ಗಿಲ್ ಅದ್ಭುತ ಬ್ಯಾಟಿಂಗ್, ಸನ್‌ರೈಸರ್ಸ್‌ ವಿರುದ್ಧ ಕೆಕೆಆರ್ ಗೆ 7ವಿಕೆಟ್ ಜಯ

ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೆಡಿಯಂ ನಲ್ಲಿ ನಡೆದ ಐಪಿಎಲ್ ಟೂರ್ನಿಯ ಎಂಟನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.

Published: 26th September 2020 11:33 PM  |   Last Updated: 26th September 2020 11:36 PM   |  A+A-


Posted By : Raghavendra Adiga
Source : Online Desk

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೆಡಿಯಂ ನಲ್ಲಿ ನಡೆದ ಐಪಿಎಲ್ ಟೂರ್ನಿಯ ಎಂಟನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟುಂಗ್ ನಡೆಸಿದ್ದ ಹೈದರಾಬಾದ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 142 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಕೆಕೆಆರ್ 18 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗುರಿ ತಲುಪಿದೆ. 

ಹೈದರಾಬಾದ್ ನ ಡೇವಿಡ್ ವಾರ್ನರ್ (36), ಮನೀಶ್ ಪಾಂಡೆ (51) ಹಾಗೂ ವೃದ್ದಿಮಾನ್ ಸಹಾ (30) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೆ ಕೆಕೆಆರ್ ಪರ ಶುಭಮ್ ಗಿಲ್ (70) ಮಾರ್ಗನ್ (42) ಹಾಗೂ ನಿತೀಶ್ ರಾಣಾ (26) ರನ್ ಗಳಿಸಿ ಗಮನ ಸೆಳೆದಿದ್ದರು.

ಕೆಕೆಆರ್ ನ ಪ್ಯಾಟ್ ಕಮ್ಮನ್ಸ್, ವರುಣ್ ಚಕ್ರವರ್ತಿ ಹಾಗೂ ಆಂಡ್ರೆ ರೆಸೆಲ್ ತಲಾ ಒಂದು ವಿಕೆಟ್ ಕಬಳಿಸಿದ್ದರೆ ಹೈದರಾಬಾದ್ ಪರ ಖಲೀಲ್ ಅಹಮದ್, ಟಿ. ನಟರಾಜನ್ ಹಾಗೂ ರಶೀದ್ ಕಾನ್ ತಲಾ ಒಂದು ವಿಕೆಟ್ ಕಿತ್ತಿದ್ದರು.

ಎರಡೂ ತಂಡಗಳು ಈ ಮುನ್ನ ನಡೆದ ಪಂದ್ಯಗಳಲ್ಲಿ ಸೋಲು ಕಂಡಿದ್ದು ಇಂದಿನ ಗೆಲುವು ಕೋಲ್ಕತ್ತಾಗೆ ಈ ಸರಣಿಯಲ್ಲಿ ದಕ್ಕಿದ ಮೊದಲ ಗೆಲುವಾಗಿದೆ. 
 

Stay up to date on all the latest ಕ್ರಿಕೆಟ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp