ಎಂಎಸ್‌ ಧೋನಿ ಹೆಸರಲ್ಲಿದ್ದ ವಿಶ್ವ ದಾಖಲೆ ಮುರಿದ ಕ್ರಿಕೆಟ್ ಆಟಗಾರ್ತಿ ಅಲಿಸಾ ಹೇಯ್ಲೀ!

ಆಧುನಿಕ ಕ್ರಿಕೆಟ್‌ನ ಸರ್ವಶ್ರೇಷ್ಠ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ಗಳ ಪೈಕಿ ಟೀಮ್‌ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿ ಕೂಡ ಒಬ್ಬರು. ಕ್ಯಾಪ್ಟನ್‌ ಕೂಲ್‌ ಎಂದೇ ಖ್ಯಾತಿ ಪಡೆದಿದ್ದ ಭಾರತ ತಂಡದ ಮಾಜಿ ನಾಯಕ ಆಗಸ್ಟ್‌ 15ರಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದರು.
ಅಲಿಸಾ ಹೇಯ್ಲಿ-ಎಂಎಸ್ ಧೋನಿ
ಅಲಿಸಾ ಹೇಯ್ಲಿ-ಎಂಎಸ್ ಧೋನಿ

ನವದೆಹಲಿ: ಆಧುನಿಕ ಕ್ರಿಕೆಟ್‌ನ ಸರ್ವಶ್ರೇಷ್ಠ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ಗಳ ಪೈಕಿ ಟೀಮ್‌ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿ ಕೂಡ ಒಬ್ಬರು. ಕ್ಯಾಪ್ಟನ್‌ ಕೂಲ್‌ ಎಂದೇ ಖ್ಯಾತಿ ಪಡೆದಿದ್ದ ಭಾರತ ತಂಡದ ಮಾಜಿ ನಾಯಕ ಆಗಸ್ಟ್‌ 15ರಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದರು.

ಇನ್ನು ಕೆಳ ಕ್ರಮಾಂಕದಲ್ಲಿ ಹೆಚ್ಚು ಬ್ಯಾಟ್‌ ಮಾಡಿ ವಿಶ್ವಕಂಡ ಶ್ರೇಷ್ಠ ಫಿನಿಷರ್‌ ಎಂದೇ ಗುರುತಿಸಿಕೊಂಡಿರುವ ಧೋನಿ, ವಿಕೆಟ್‌ಕೀಪಿಂಗ್‌ ವಿಚಾರದಲ್ಲೂ ಎತ್ತಿದ ಕೈ. ತಮ್ಮ ಅದ್ಭುತ ಕೀಪಿಂಗ್‌ ಜೊತೆಗೆ ಮಿಂಚಿನ ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಧೋನಿ ಒಟ್ಟಾರೆ 91 ಡಿಸ್ಮಿಸಲ್‌ (57 ಕ್ಯಾಚ್ + 34 ಸ್ಟಂಪಿಗ್ಸ್‌) ಮಾಡಿರುವುದು ಪುರುಷರ ಕ್ರಿಕೆಟ್‌ನಲ್ಲಿ ದಾಖಲೆ ಆಗಿದೆ.

ಆದರೆ ಅವರ ಈ ದಾಖಲೆಯನ್ನು ಮಹಿಳಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ತಾರೆ ಅಲಿಸಾ ಹೇಯ್ಲೀ ಮುರಿದಿದ್ದಾರೆ. ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ನಡೆಯುತ್ತಿರುವ ದ್ವಿಪಕ್ಷೀಯ ಟಿ20 ಕ್ರಿಕೆಟ್‌ ಸರಣಿಯಲ್ಲಿ ಅಲಿಸಾ ಹೇಯ್ಲೀ ಈ ಸಾಧನೆ ಮಾಡಿದ್ದಾರೆ.

ಬ್ರಿಸ್ಬೇನ್‌ನ ಆಲನ್‌ ಬಾರ್ಡರ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎದುರಾಳಿ ತಂಡದ ಏಮಿ ಸ್ಯಾಟರ್ತ್‌ವೇಟ್‌ ಅವರನ್ನು ಸ್ಟಂಪಿಂಗ್‌ ಮಾಡುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಡಿಸ್ಮಿಸಲ್‌ಗಳನ್ನು ಪಡೆದ ವಿಕೆಟ್‌ಕೀಪರ್‌ ಎನಿಸಿಕೊಂಡು ಧೋನಿಗೆ ಸಡ್ಡುಹೊಡೆದಿದ್ದಾರೆ. ಹೇಯ್ಲೀ 114 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com