ಐಸಿಸಿ ಕೇಂದ್ರ ಕಚೇರಿಗೂ ಒಕ್ಕರಿಸಿದ ಕೊರೋನಾ ವೈರಸ್, ಕಚೇರಿ ತಾತ್ಕಾಲಿಕ ಬಂದ್

ಜಗತ್ತಿನ 213 ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಕೇಂದ್ರ ಕಚೇರಿಗೂ ಒಕ್ಕರಿಸಿದ್ದು, ಕಚೇರಿಯ ಸಿಬ್ಬಂದಿಗಳಲ್ಲಿ ಕೊವಿಡ್ ಸೋಂಕು ಕಂಡುಬಂದಿದೆ.

Published: 27th September 2020 09:53 AM  |   Last Updated: 27th September 2020 09:53 AM   |  A+A-


ICC1

ಐಸಿಸಿ

Posted By : Srinivasamurthy VN
Source : PTI

ನವದೆಹಲಿ: ಜಗತ್ತಿನ 213 ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಕೇಂದ್ರ ಕಚೇರಿಗೂ ಒಕ್ಕರಿಸಿದ್ದು, ಕಚೇರಿಯ ಸಿಬ್ಬಂದಿಗಳಲ್ಲಿ ಕೊವಿಡ್ ಸೋಂಕು ಕಂಡುಬಂದಿದೆ.

ದುಬೈನಲ್ಲಿರುವ ಐಸಿಸಿ ಕೇಂದ್ರ ಕಚೇರಿಯಲ್ಲಿ ಕೆಲ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇದೇ ಕಾರಣಕ್ಕೆ ಐಸಿಸಿ ಕೇಂದ್ರ ಕಚೇರಿಯನ್ನು ಮುಂದಿನ ಕೆಲ ದಿನಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ. ಅಲ್ಲದೆ ಕಚೇರಿಯನ್ನು ಸ್ಯಾನಿಟೈಸ್ ಮಾಡಲು ನಿರ್ಧರಿಸಲಾಗಿದೆ.

ಐಪಿಎಲ್ ಮೇಲೆ ಕರಿನೆರಳು
ಇನ್ನು ದುಬೈ ಐಸಿಸಿ ಕೇಂದ್ರ ಕಚೇರಿಯಲ್ಲಿನ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ದೃಢವಾಗುತ್ತಿದ್ದಂತೆಯೇ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಮೇಲೂ ಕರಿಛಾಯೆ ಮೂಡಿದೆ. ಆದರೆ ಯುಎಇ ಕ್ರಿಕೆಟ್ ಆಡಳಿತ ಮಂಡಳಿ ಮತ್ತು ಯುಎಇ ಸರ್ಕಾರ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಇದರಿಂದ ಐಪಿಎಲ್ ತಂಡಗಳು ಸುರಕ್ಷಿಕ ಪರಿಸರದಲ್ಲಿ ಆಟವಾಡುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಪಿಎಲ್ ತಂಡಗಳು ಉಳಿದುಕೊಂಡಿರುವ ಹೊಟೆಲ್ ಗಳು, ಮೈದಾನಗಳು ಮತ್ತು ಪ್ರಾಕ್ಟಿಸ್ ನೆಟ್ ಜಾಗಗಳೆಲ್ಲವೂ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಆಗಿಂದಾಗ್ಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು  ಹೇಳಿದ್ದಾರೆ. ಪ್ರಸ್ತುತ ಸ್ಥಳೀಯ ಮುಂಜಾಗ್ರತಾ ನಿಯಮಗಳ ಅನ್ವಯ ಸೋಂಕಿಗೆ ತುತ್ತಾಗಿರುವ ಐಸಿಸಿ ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Stay up to date on all the latest ಕ್ರಿಕೆಟ್ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp