ಮುಂದಿನ ವರ್ಷ ಭಾರತದಲ್ಲಿಯೇ ಇಂಗ್ಲೆಂಡ್ ವಿರುದ್ಧದ ಸರಣಿ ಆಯೋಜನೆ ಸಾಧ್ಯತೆ: ಗಂಗೂಲಿ

ಭಾರತದಲ್ಲಿಯೇ ಇಂಗ್ಲೆಂಡ್‌ನೊಂದಿಗಿನ ಸರಣಿ ನಡೆಸುವುದು  ಮೊದಲ ಆದ್ಯತೆಯಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ನವದೆಹಲಿ: ಭಾರತದಲ್ಲಿಯೇ ಇಂಗ್ಲೆಂಡ್‌ನೊಂದಿಗಿನ ಸರಣಿ ನಡೆಸುವುದು  ಮೊದಲ ಆದ್ಯತೆಯಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಕೊರೋನಾ ವೈರಸ್ ಹರಡಿದ ಹೊರತಾಗಿಯೂ, ಮುಂದಿನ ವರ್ಷ ಜನವರಿ ಮತ್ತು ಮಾರ್ಚ್ ನಲ್ಲಿ ಇಂಗ್ಲೆಂಡ್ ಸರಣಿ ಆಯೋಜಿಸಲು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸುತ್ತೇವೆ ಎಂದು ಗಂಗೂಲಿ ನುಡಿದಿದ್ದಾರೆ.

61 ಲಕ್ಷ ಕೊರೋನಾವೈರಸ್ ಪ್ರಕರಣಗಳು ದಾಖಲಾಗುವುದರೊಂದಿಗೆ ಭಾರತ ವಿಶ್ವದಲ್ಲಿಯೇ ನಂಬರ್ 2 ಸ್ಥಾನದಲ್ಲಿದ್ದು, ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿರುವಂತೆಯೇ, ಮುಂದಿನ ವರ್ಷದ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ದೇಶದಲ್ಲಿಯೇ ಆಯೋಜಿಸಲು ಯೋಜಿಸುತ್ತಿರುವುದಾಗಿ ಗಂಗೂಲಿ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಶ್ರೀಲಂಕಾ ಅಥವಾ ಯುಎಇಗೆ ಬಿಸಿಸಿಐ ಸ್ಥಳಾಂತರ ಮಾಡಲಿದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ದೇಶದಲ್ಲಿಯೇ ಸರಣಿ ಆಯೋಜನೆ ಮೊದಲ ಆದ್ಯತೆಯಾಗಿರುತ್ತದೆ ಎಂಬುದನ್ನು ಬಿಸಿಸಿಐ ಅಧ್ಯಕ್ಷರು ಸ್ಪಷ್ಪಪಡಿಸಿದ್ದಾರೆ.

ಭಾರತದ ಕ್ರೀಡಾಂಗಣದಲ್ಲೇ ಈ ಸರಣಿಯನ್ನು ಆಯೋಜಿಸಲು ನಾವು ಪ್ರಯತ್ನಿಸಲಿದ್ದೇವೆ. ಆದರೆ ಯುಎಇನಲ್ಲಿ ಆಯೋಜನೆ ಮಾಡುವ ಲಾಭವೇನೆಂದರೆ ಇಲ್ಲಿ ಮೂರು ಕ್ರೀಡಾಂಗಣಗಳಿವೆ' ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. 

ಕೊರೋನಾವೈರಸ್ ಕಾರಣದಿಂದ ಐಪಿಎಲ್ ಮೇಲೂ ತೀವ್ರ ರೀತಿಯ ಪರಿಣಾಮ ಉಂಟಾಗಿದೆ. ಭಾರತದಲ್ಲಿಯೇ ಸರಣಿ ಆಯೋಜನೆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಸೌರವ್ ಗಂಗೂಲಿ ತಿಳಿಸಿದರು.

ಮುಂದಿನ ವರ್ಷದ ಜನವರಿ ಮತ್ತು ಮಾರ್ಚ್ ನಡುವಣ ನಡೆಯಲಿರುವ ಸರಣಿಯಲ್ಲಿ ಐದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಭಾರತ ವಿರುದ್ಧ ಇಂಗ್ಲೆಂಡ್ ಆಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com