ಐಪಿಎಲ್ 2020: ರಾಜಸ್ಥಾನಕ್ಕೆ ಮೊದಲ ಸೋಲು, ಕೆಕೆಆರ್ ಗೆ 37 ರನ್ ಜಯ

ದುಬೈನಲ್ಲಿ ನಡೆಯುತ್ತಿರುವ  13 ನೇ ಆವೃತ್ತಿಯ ಐಪಿಎಲ್​ನಲ್ ಪಂದ್ಯಾವಳಿಯ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ 37 ರನ್ ಗಳಿಂದ ಜಯ ಸಾಧಿಸಿದೆ. ಈ ಮುಖೇನ ಟೂರ್ನಿಯಲ್ಲಿ ರಾಜಸ್ಥಾನ ಮೊದಲ ಬಾರಿ ಸೋಲಿನ ಆಘಾತ ಅನುಭವುಸುದೆ.
ಐಪಿಎಲ್ 2020: ರಾಜಸ್ಥಾನಕ್ಕೆ ಮೊದಲ ಸೋಲು, ಕೆಕೆಆರ್ ಗೆ 37 ರನ್ ಜಯ

ದುಬೈ: ದುಬೈನಲ್ಲಿ ನಡೆಯುತ್ತಿರುವ  13 ನೇ ಆವೃತ್ತಿಯ ಐಪಿಎಲ್​ನಲ್ ಪಂದ್ಯಾವಳಿಯ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ 37 ರನ್ ಗಳಿಂದ ಜಯ ಸಾಧಿಸಿದೆ. ಈ ಮುಖೇನ ಟೂರ್ನಿಯಲ್ಲಿ ರಾಜಸ್ಥಾನ ಮೊದಲ ಬಾರಿ ಸೋಲಿನ ಆಘಾತ ಅನುಭವುಸುದೆ.

ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿದ್ದ ಕಾರಣ ಮೊದಲು ಬ್ಯಾಟಿಂಗ್ ಗೆ ಇಳಿದ ಕೊಲ್ಕತ್ತಾ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 174 ರನ್ ಗಳಿಸಿತ್ತು. ಕೊಲ್ಕತ್ತಾ ಪರ ಶುಭಮ್ ಗಿಲ್(47), ಇಯಾಮ್ ಮಾರ್ಗನ್ (34), ಆಂಡ್ರೆ ರಸ್ಸೈಲ್(24) ಹಾಗೂ ನಿತೀಶ್ ರಾಣ(22) ರನ್ ಗಳಿಸಿದ್ದರು/

ಗೆಲುವಿಗಾಗಿ 175 ರನ್ ಗುರಿ ಪಡೆದ ರಾಜಸ್ಥಾನ ಪರ ತಾಮ್ ಕುರ್ರನ್ ಏಕಾಂಗಿ ಹೋರಾಟ ನಡೆಸಿದ್ದು ಅವರು 54ರನ್ (36 ಎಸೆತ) ಗಳಿಸಿ ಔಟಾಗದೆ ಉಳಿದರು.  ಆದರೆ ಅಂತಿಮವಾಗಿ ರಾಜಸ್ಥಾನ ನಿಗದಿತ ಓವರ್ ನಲ್ಲಿ9 ಇಕೆಟ್ ನಷ್ಟಕ್ಕೆ 137ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು.

ಕೊಲ್ಕತ್ತಾ ಪರ ಶಿವಮ್ ಮಾವಿ, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರೆ ರಾಜಸ್ಥಾನ ಪರ ಜೋಫ್ರಾ ಅರ್ಚರ್ ಎರಡು ವಿಕೆಟ್ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com