ಐಪಿಎಲ್ 2021: ಆರ್ ಸಿಬಿ ತಂಡ ಸೇರಲು ಚೆನ್ನೈ ತಲುಪಿದ ಕೊಹ್ಲಿ, ಏಳು ದಿನಗಳ ಕ್ವಾರಂಟೈನ್!

ಟೀಂ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತನ್ನ ಐಪಿಎಲ್ ತಂಡವನ್ನು ಸೇರಲು ಗುರುವಾರ ಇಲ್ಲಿಗೆ ಆಗಮಿಸಿದ್ದಾರೆ. ಐಪಿಎಲ್  ಆರಂಭಕ್ಕೂ ಮುನ್ನ ಏಳು ದಿನ ಕ್ವಾರಂಟೈನ್ ನಲ್ಲಿ ಅವರು ಇರಬೇಕಾಗುತ್ತದೆ.

Published: 01st April 2021 04:01 PM  |   Last Updated: 01st April 2021 04:30 PM   |  A+A-


Virat_Kohli1

ವಿರಾಟ್ ಕೊಹ್ಲಿ

Posted By : Nagaraja AB
Source : The New Indian Express

ಚೆನ್ನೈ: ಟೀಂ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತನ್ನ ಐಪಿಎಲ್ ತಂಡವನ್ನು ಸೇರಲು ಗುರುವಾರ ಇಲ್ಲಿಗೆ ಆಗಮಿಸಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಏಳು ದಿನ ಕ್ವಾರಂಟೈನ್ ನಲ್ಲಿ ಅವರು ಇರಬೇಕಾಗುತ್ತದೆ.

ಏಪ್ರಿಲ್ 9ರಿಂದ ಆರಂಭವಾಗಲಿರುವ ಮುಂಬರುವ ಆವೃತ್ತಿಗಾಗಿ ಮಂಗಳವಾರ ತಂಡ ಈಗಾಗಲೇ ತರಬೇತಿ ಕ್ಯಾಂಪ್ ನ್ನು ಆರಂಭಿಸಿದೆ. ಕೊಹ್ಲಿ ಚೆನ್ನೈಗೆ ಆಗಮಿಸಿರುವುದನ್ನು ವಿರಾಟ್ ಕೊಹ್ಲಿ ಮಾಸ್ಕ್ ಧರಿಸಿರುವ ಫೋಟೋದೊಂದಿಗೆ ಆರ್ ಸಿಬಿ ಟ್ವೀಟ್ ಮಾಡಿದೆ.

ಏಪ್ರಿಲ್ 9 ರಂದು ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ ಸಿಬಿ ಸೆಣಸಲಿದೆ.ಐಪಿಎಲ್ ಆರಂಭವಾದಾಗಿನಿಂದಲೂ  ಆರ್ ಸಿಬಿ ತಂಡದಲ್ಲಿರುವ ಕೊಹ್ಲಿ, ಇಂಗ್ಲೆಂಡ್ ವಿರುದ್ಧ ಭಾರತ ಏಕದಿನ ಸರಣಿ ಗೆದ್ದ ನಂತರ ಸೋಮವಾರ ಪುಣೆಯ ಜೈವಿಕ ಗುಳ್ಳೆಯನ್ನು ತೋರೆದಿದ್ದರು.

ಇಂಗ್ಲೆಂಡ್ ವಿರುದ್ಧದ ಸರಣಿ ಹಿನ್ನೆಲೆಯಲ್ಲಿ ಜನವರಿ ಮಾಸಾಂತ್ಯದಿಂದಲೂ ಕೊಹ್ಲಿ ಜೈವಿಕ ಸುರಕ್ಷಿತ ವಲಯದಲ್ಲಿದ್ದರು. ಮತ್ತೊಬ್ಬ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್ ಗುರುವಾರ ಆರ್ ಸಿಬಿ ಜೈವಿಕ ಗುಳ್ಳೆಯನ್ನು ಸೇರಿದ್ದಾರೆ. 37  ವರ್ಷದ ಕೊಹ್ಲಿ, ಆರ್ ಸಿಬಿಯ ಪ್ರಮುಖ ಬ್ಯಾಟಿಂಗ್ ಆಟಗಾರರಾಗಿದ್ದಾರೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp