ಮಾರ್ಷ್ ಬದಲಿಗೆ ಸನ್ ರೈಸರ್ಸ್ ತಂಡ ಸೇರಿದ ರಾಯ್
ಎರಡು ತಿಂಗಳಿಗೂ ಹೆಚ್ಚು ಕಾಲ ಬಯೋ ಬಬಲ್ ನಲ್ಲಿ ಉಳಿಯಬೇಕಾಗುತ್ತದೆ ಎಂಬ ಚಿಂತೆಯಿಂದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಹಿಂದೆ ಸರಿಯಲು ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ನಿರ್ಧರಿಸಿದ್ದಾರೆ.
Published: 01st April 2021 12:29 AM | Last Updated: 01st April 2021 12:24 PM | A+A A-

ಮಿಚೆಲ್ ಮಾರ್ಷ್
ನವದೆಹಲಿ: ಎರಡು ತಿಂಗಳಿಗೂ ಹೆಚ್ಚು ಕಾಲ ಬಯೋ ಬಬಲ್ ನಲ್ಲಿ ಉಳಿಯಬೇಕಾಗುತ್ತದೆ ಎಂಬ ಚಿಂತೆಯಿಂದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಹಿಂದೆ ಸರಿಯಲು ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ನಿರ್ಧರಿಸಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡ ಇವರ ಬದಲಿಗೆ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೇಸನ್ ರಾಯ್ ಅವರಿಗೆ ಅವಕಾಶ ನೀಡಿದೆ.
ಜೇಸನ್ ರಾಯ್ ಅವರನ್ನು ಅವರ ಮೂಲ ಬೆಲೆಗೆ ಸನ್ ತಂಡ ಖರೀದಿಸಿದೆ. 2010 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಮಾರ್ಷ್ ಇದುವರೆಗೆ ಒಟ್ಟು 21 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 2017 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ರಾಯ್ ಒಟ್ಟು ಎಂಟು ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.