2011ರ ವಿಶ್ವಕಪ್ ವಿಜಯಕ್ಕೆ ದಶಕದ ಸಂಭ್ರಮ: ಸಂತಸದ ಕ್ಷಣಗಳ ಮೆಲುಕು ಹಾಕಿದ ಬಿಸಿಸಿಐ

ಭಾರತದ 2011 ರ ವಿಶ್ವಕಪ್ ಗೆದ್ದು ಇಂದಿಗೆ ಸರಿಯಾಗಿ ಒಂದು ದಶಕ ಕಳೆದಿದೆ.ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ "ಒಂದು ದಶಕದ ನಂತರ, ನಮ್ಮ ಮನಸ್ಸಿನಲ್ಲಿ ಇನ್ನೂ ಆ ನೆನಪುಗಳು ತಾಜಾವಾಗಿದೆ"ಎಂದು ಹೇಳಿದೆ

Published: 02nd April 2021 11:36 AM  |   Last Updated: 02nd April 2021 12:55 PM   |  A+A-


2011 ವಿಶ್ವಕಪ್ ಚಾಂಪಿಯನ್ನರು

Posted By : Raghavendra Adiga
Source : ANI

ನವದೆಹಲಿ: ಭಾರತದ 2011 ರ ವಿಶ್ವಕಪ್ ಗೆದ್ದು ಇಂದಿಗೆ ಸರಿಯಾಗಿ ಒಂದು ದಶಕ ಕಳೆದಿದೆ.ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ "ಒಂದು ದಶಕದ ನಂತರ, ನಮ್ಮ ಮನಸ್ಸಿನಲ್ಲಿ ಇನ್ನೂ ಆ ನೆನಪುಗಳು ತಾಜಾವಾಗಿದೆ"ಎಂದು ಹೇಳಿದೆ

ಟ್ವಿಟ್ಟರ್ ನಲ್ಲಿ ಈ ಸಂಬಂಧ ಬಿಸಿಸಿಐ ಬರೆದದ್ದು, "ಒಂದು ದಶಕದ ನಂತರ, ನಮ್ಮ ಮನಸ್ಸಿನಲ್ಲಿ ಇನ್ನೂ ಆ ನೆನಪುಗಳು ತಾಜಾವಾಗಿದೆ." ಎಂದಿರುವ ಸಂಸ್ಥೆ 2011 ರ ವಿಶ್ವಕಪ್ ಬಗ್ಗೆ ತಮ್ಮ ನೆಚ್ಚಿನ ಸ್ಮರಣೆಗಳನ್ನು ದಾಖಲಿಸಲು ಕ್ರಿಕೆಟ್ ಅಭಿಮಾನಿಗಳಿಗೆ ಕೇಳಿದೆ. "ನಿಮ್ಮ ನೆಚ್ಚಿನ 2011 ವಿಶ್ವಕಪ್ ನ ಅತ್ಯುತ್ತಮ ಕ್ಷಣ ಯಾವುದು?

"ಧೋನಿ ತಮ್ಮ ಸ್ಟೈಲ್ ನಲ್ಲಿ ಪಂದ್ಯ ಮುಗಿಸಿದ್ದಾರೆ, ಭಾರತ 28 ವರ್ಷಗಳ ನಂತರ ವಿಶ್ವಕಪ್ ಗೆದ್ದಿದೆ!" ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2011 ರ ಐಸಿಸಿ ವಿಶ್ವಕಪ್  ನಲ್ಲಿ ಶ್ರೀಲಂಕಾ ವೇಗಿ ನುವಾನ್ ಕುಲಶೇಖರ ವಿರುದ್ಧ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಧೋನಿ ಸಿಕ್ಸರ್ ಬಾರಿಸಿದ ನಂತರ ರವಿಶಾಸ್ತ್ರಿ ಅವರ ಈ ಮಾತುಗಳು ಇಂದಿಗೂ ಪ್ರತಿ ಭಾರತೀಯ ನಾಗರಿಕರ ಕಿವಿಯಲ್ಲಿ ಪ್ರತಿಧ್ವನಿಸುತ್ತವೆ. ಕುಲಶೇಖರ ಎಸೆದ ಬಾಲ್ ಗೆ ಧೋನಿಯ ಸಿಕ್ಸರ್ ಲಕ್ಷಾಂತರ ಭಾರತೀಯರಿಗೆ ತಮ್ಮ ಜೀವನದುದ್ದಕ್ಕೂ ಸ್ಮರಣೀಯವಾಗಿದೆ. ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಬಹುಕಾಲದ ಕನಸನ್ನು ಈಡೇರಿಸಿದ ಈ ವಿಶ್ವಕಪ್ ಅವರ ವೃತ್ತಿ ಬದುಕಿನ ಮಹತ್ವದ ಘಟ್ಟ. 'ಗಾಡ್ ಆಫ್ ಕ್ರಿಕೆಟ್' ಎಂದು ಕರೆಯಲ್ಪಡುವ ತೆಂಡೂಲ್ಕರ್ ಟ್ರೋಫಿಯನ್ನು ಎತ್ತುವ ಸಲುವಾಗಿ 22 ವರ್ಷ ಕಾಯುತ್ತಿದ್ದರು ಮತ್ತು ಏಪ್ರಿಲ್ 2, 2011 ರಂದು ಅವರ ಕನಸು ಕಡೆಗೂ ನನಸಾಗಿತ್ತು. ಅದೂ ಸಹ ಅವರ ತವರೂರಿನ ಮೈದಾನದಲ್ಲೇ ಈ ಮಹತ್ವದ ವಿಜಯ ಸಾಧ್ಯ ಆಗಿತ್ತು.1983 ರಲ್ಲಿ ಕಪಿಲ್ ದೇವ್ ಅವರ ನೇತೃತ್ವದಲ್ಲಿ ಭಾರತ ತನ್ನ ಮೊದಲ ವಿಶ್ವಕಪ್ ಗೆದ್ದಿತ್ತು ಮತ್ತು 2011 ರವರೆಗೆ ಮತ್ತೆ ಈ ಮಹತ್ವದ ಸಾಧನೆ ಮಾದಲು ಸಾಧ್ಯವಾಗಿರಲಿಲ್ಲ.

ಧೋನಿ ಪಂದ್ಯಶ್ರೇಷ್ಠ ಎಂದು ಆಯ್ಕೆಯಾದರೆ, ಸ್ಟೈಲಿಶ್ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಟೂರ್ನಿ ಅತ್ಯುತ್ತಮ ಆಟಗಾರ(ಸರಣಿ ಶ್ರೇಷ್ಠ) ಎಂದು ಗೌರವಿಸಲಾಯಿತು. . ಇಡೀ ತಂಡವು ಸಚಿನ್ ಅವರನ್ನು  ಹೆಗಲ ಮೇಲೆ ಹೊತ್ತುಕೊಂಡು ಕ್ರೀಡಾಂಗಣದ ಸುತ್ತಲೂ ವಿಜಯದ ಕೇಕೆ ಮೊಳಗಿಸಿತ್ತು. ಈ ಮಹತ್ವದ ಗೆಲುವಿನ ಬಳಿಕ  ಇಡೀ ದೇಶವು ಬೀದಿಗಿಳಿಯಿತು, ತ್ರಿವರ್ಣ ಧ್ವಜವನ್ನು ಬೀಸುತ್ತಾ ರಾಷ್ಟ್ರಗೀತೆಯನ್ನು ಹಾಡಿ ಸಂಭ್ರಮಿಸಿತು.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp