ಕೊನೆಗೂ ಹಶೀಂ ಆಮ್ಲಾ, ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಜಂ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಗಳನ್ನು ಹಿಂಬಾಲಿಸುತ್ತಿದ್ದ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಕೊನೆಗೂ ಕೊಹ್ಲಿ ದಾಖಲೆಯೊಂದನ್ನು ಮುರಿಯುವುದರಲ್ಲಿ ಯಶಸ್ವಿಯಾಗಿದ್ದಾರೆ.

Published: 03rd April 2021 01:12 PM  |   Last Updated: 03rd April 2021 05:29 PM   |  A+A-


Babar Azam

ಬಾಬರ್ ಅಜಂ

Posted By : Srinivasamurthy VN
Source : PTI

ಸೆಂಚೂರಿಯನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಗಳನ್ನು ಹಿಂಬಾಲಿಸುತ್ತಿದ್ದ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಕೊನೆಗೂ ಕೊಹ್ಲಿ ದಾಖಲೆಯೊಂದನ್ನು ಮುರಿಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಹೌದು.. ನಿನ್ನೆ ಸೆಂಚೂರಿಯನ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಭಾರಿಸಿ ತಂಡದ ಗೆಲುವಿಗೆ ಕಾರಣರಾದ ಬಾಬರ್ ಅಜಂ, ಕೊಹ್ಲಿ ದಾಖಲೆಯನ್ನೂ ಹಿಂದಿಕ್ಕಿದ್ದಾರೆ. ಬಾಬರ್ ಅಜಂ 104 ಎಸೆತಗಳಲ್ಲಿ 103 ರನ್ ಸಿಡಿಸಿದರು. ಆ ಮೂಲಕ ತಮ್ಮ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ 13ನೇ ಶತಕ  ಸಿಡಿಸಿದರು. ಆ ಮೂಲಕ ವೇಗವಾಗಿ 13 ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಬಾಬರ್ ಅಜಂಗೆ ಇದು 78ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿದ್ದು, ಬಾಬರ್ ಅಜಂ ಕೇವಲ 76 ಇನ್ನಿಂಗ್ಸ್ ಗಳಲ್ಲಿ 13 ಶತಕ ಸಿಡಿಸಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ ಮತ್ತು ಭಾರತದ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.ಹಶೀಂ ಆಮ್ಲಾ 13 ಶತಕ ಸಿಡಿಸಲು 83 ಇನ್ನಿಂಗ್ಸ್  ತೆಗೆದುಕೊಂಡಿದ್ದರೆ, ಕೊಹ್ಲಿ 86 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

ಕೊಹ್ಲಿ-ಆಮ್ಲಾ ರನ್ನೂ ಹಿಂದಿಕ್ಕಿದ ಆಸಿಸ್ ನಾಯಕಿ
ಇನ್ನು ಮಹಿಳಾ ಕ್ರಿಕೆಟ್ ವಿಭಾಗದಲ್ಲೂ ವೇಗದ ಶತಕಗಳು ದಾಖಲಾಗಿದ್ದು, ಈ ಪೈಕಿ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಕೇವಲ 76 ಇನ್ನಿಂಗ್ಸ್ ಗಳಲ್ಲಿ 13 ಶತಕ ಸಿಡಿಸಿ ಪುರುಷ ಕ್ರಿಕೆಟಿಗರಿಗೆ ಸವಾಲೆಸೆದಿದ್ದಾರೆ.

ಕೊನೆಯ ಎಸೆತದವರೆಗೂ ಕುತೂಹಲ ಮೂಡಿಸಿದ್ದ ಪಂದ್ಯ
ಇನ್ನು ಶುಕ್ರವಾರ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡದ ಪಂದ್ಯ ಕೊನೆಯ ಎಸೆತದವರೆಗೂ ಕುತೂಹಲ ಮೂಡಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡವು ವ್ಯಾನ್ ಡರ್ ಡಸೆ (123 ರನ್) ಶತಕದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 273 ರನ್ ಗಳಿಸಿತು. ಈ ಸವಾಲಿನ  ಮೊತ್ತವನ್ನು ಬೆನ್ನು ಹತ್ತಿದ ಪಾಕ್  ತಂಡವು ಬಾಬರ್ ಆಜಂ (103; 104 ಎಸೆತ) ಅವರ ಶತಕದ  ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 274 ರನ್ ಗಳಿಸಿ 3 ವಿಕೆಟ್ ಅಂತರದಲ್ಲಿ ಜಯಿಸಿತು. ಪ್ರಸ್ತುತ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು,  ನಾಳೆ 2ನೇ ಪಂದ್ಯ ನಡೆಯಲಿದೆ.
 

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp