ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಕ್ಷರ್ ಪಟೇಲ್ ಗೆ ಕೋವಿಡ್-19 ಪಾಸಿಟಿವ್

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ವಾಂಖೆಡೆ ಕ್ರೀಡಾಂಗಣದಲ್ಲಿ ಹೈ ವೋಲ್ಟೇಜ್ ಐಪಿಎಲ್ ಪಂದ್ಯಕ್ಕೆ ಏಳು ದಿನಗಳು ಬಾಕಿ ಇರುವಂತೆಯೇ, ಡೆಲ್ಲಿ ಮೂಲದ ಆಲ್ ರೌಂಡರ್ ಅಕ್ಷರ್ ಪಟೇಲ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

Published: 03rd April 2021 03:46 PM  |   Last Updated: 03rd April 2021 04:53 PM   |  A+A-


Indian_bowler_Axar_Patel1

ಆಲ್ ರೌಂಡರ್ ಅಕ್ಷರ್ ಪಟೇಲ್

Posted By : Nagaraja AB
Source : The New Indian Express

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ವಾಂಖೆಡೆ ಕ್ರೀಡಾಂಗಣದಲ್ಲಿ ಹೈ ವೋಲ್ಟೇಜ್ ಐಪಿಎಲ್ ಪಂದ್ಯಕ್ಕೆ ಏಳು ದಿನಗಳು ಬಾಕಿ ಇರುವಂತೆಯೇ, ಡೆಲ್ಲಿ ಮೂಲದ ಆಲ್ ರೌಂಡರ್ ಅಕ್ಷರ್ ಪಟೇಲ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಡೆಲ್ಲಿ ಕ್ಯಾಪಿಟಲ್ಸ್ ನ ತಂಡದ ಮೂಲಗಳು ಈ ವಿಷಯವನ್ನು ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ. ದುರಾದೃಷ್ಟವಶಾತ್ ಅಕ್ಷರ್ ಪಟೇಲ್ ಗೆ ಪಾಸಿಟಿವ್ ಆಗಿದೆ. ಅವರು ಐಸೋಲೇಷನ್ ನಲ್ಲಿದ್ದು, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವುದಾಗಿ ಮೂಲಗಳು ಹೇಳಿವೆ.

ಕೆಕೆಆರ್ ಬ್ಯಾಟ್ಸ್ ಮನ್ ನಿತಿಶ್ ರಾಣಾಗೆ ಕೊರೋನಾ ಸೋಂಕು ತಗುಲಿದ ಬಳಿಕ ಇದೀಗ ಅಕ್ಷರ್ ಪಟೇಲ್ ಗೆ ಪಾಸಿಟಿವ್ ಪತ್ತೆಯಾಗಿದೆ. ಆದಾಗ್ಯೂ, ರಾಣಾ ಅವರಿಗೆ ಗುರುವಾರ ನಡೆದ ಪರೀಕ್ಷೆ ವರದಿಯಲ್ಲಿ ನೆಗೆಟಿವ್ ಬಂದಿದೆ.

ಕೋವಿಡ್-19 ಪಾಸಿಟಿವ್ ಬಂದ ಆಟಗಾರರು ಜೀವ- ಸುರಕ್ಷತಾ ಪರಿಸರಹ ಹೊರಗಡೆ ಪ್ರದೇಶದಲ್ಲಿ ಕನಿಷ್ಠ 10 ದಿನಗಳ ಕಾಲ ಐಸೋಲೇಷನ್ ನಲ್ಲಿ ಇರಬೇಕಾಗುತ್ತದೆ. ತಂಡದ ವೈದ್ಯರು ನಿಯಮಿತವಾಗಿ ನಿಗಾ ವಹಿಸಬೇಕು, ಐಸೋಲೇಷನ್ ವೇಳೆಯಲ್ಲಿ ಸೋಂಕು ತೀವ್ರಗೊಂಡಾಗ ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಬಿಸಿಸಿಐ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp