ಮುಂಬೈನಲ್ಲಿ ಹೆಚ್ಚುತ್ತಿರುವ ಕೊರೊನಾ, ಆತಂಕದಲ್ಲಿ ಐಪಿಎಲ್; ಐಪಿಎಲ್ ಗೂ ಮುನ್ನ ಚೆನ್ನೈ, ದೆಹಲಿ ತಂಡಕ್ಕೆ ಆಘಾತ!

ಮುಂಬೈನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿಗಾ ವಹಿಸುತ್ತಿದ್ದು, ಐಪಿಎಲ್‌ನ 14 ನೇ ಆವೃತ್ತಿಯನ್ನು ಏಪ್ರಿಲ್ 9ರಿಂದ ನಡೆಸುವ ವಿಶ್ವಾಸ ಹೊಂದಿದೆ.

Published: 03rd April 2021 07:51 PM  |   Last Updated: 03rd April 2021 07:53 PM   |  A+A-


IPL 2021

ಐಪಿಎಲ್ 2021

Posted By : Vishwanath S
Source : UNI

ಮುಂಬೈ: ಮುಂಬೈನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿಗಾ ವಹಿಸುತ್ತಿದ್ದು, ಐಪಿಎಲ್‌ನ 14 ನೇ ಆವೃತ್ತಿಯನ್ನು ಏಪ್ರಿಲ್ 9ರಿಂದ ನಡೆಸುವ ವಿಶ್ವಾಸ ಹೊಂದಿದೆ.

ಆದಾಗ್ಯೂ, ಬಿಸಿಸಿಐ ಐಪಿಎಲ್ 2021 ಪಂದ್ಯಗಳನ್ನು ಗೊತ್ತುಪಡಿಸಿದ ಆರು ನಗರಗಳನ್ನು ಹೊರತು ಪಡಿಸಿ, ಹೈದರಾಬಾದ್ ಮತ್ತು ಇಂದೋರ್ ಅನ್ನು ಸಹ ಕಾಯ್ದಿರಿಸಿದ ಸ್ಥಳವಾಗಿ ಗುರುತಿಸಿದೆ.

ಮಾರ್ಚ್ ತಿಂಗಳಲ್ಲಿ ಮತ್ತೆ ದೇಶದಲ್ಲಿ ಕರೋನಾ ಪ್ರಕರಣಗಳು  ಹೆಚ್ಚಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಎಂದು ಒಪ್ಪಿಕೊಂಡಿದ್ದಾರೆ. ಇದು ಹಿಂದಿನದಕ್ಕಿಂತ ಗಂಭೀರವಾಗಿದ್ದು, ಮುಂಬೈಯಲ್ಲಿ ಲಾಕ್ ಡೌನ್ ಆಗುವ ಸಾಧ್ಯತೆಯಿದೆ.

ಐಪಿಎಲ್ ಆರಂಭಕ್ಕೂ ಮುನ್ನ ಚೆನ್ನೈ, ದೆಹಲಿ ತಂಡಕ್ಕೆ ಪೆಟ್ಟು
ಐಪಿಎಲ್‌ನ 14 ನೇ ಆವೃತ್ತಿ ಪ್ರಾರಂಭವಾಗಲು ಐದು ದಿನ ಬಾಕಿ ಇದ್ದು, ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ಈ ಸಮಯದಲ್ಲಿ ತೊಂದರೆಗೆ ಸಿಲುಕಿವೆ. ವಾಸ್ತವವಾಗಿ, ದೆಹಲಿ ಕ್ಯಾಪಿಟಲ್ಸ್ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ ಮತ್ತು ಸಿಎಸ್‌ಕೆ ಸಿಬ್ಬಂದಿ ಸದಸ್ಯ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. 

ಕೊರೊನಾ ಪರೀಕ್ಷಾ ವರದಿಯು ನಕಾರಾತ್ಮಕವಾಗಿ ಬಂದ ನಂತರ ಮಾರ್ಚ್ 28 ರಂದು ಅಕ್ಷರ್ ತಂಡವನ್ನು ಸೇರಿಕೊಂಡಿದ್ದರು, ಆದರೆ ಮತ್ತೆ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕಿಗೆ ಒಳಗಾಗಿದ್ದಾರೆ ಎಂದು ಕಂಡುಬಂದಿದೆ. ಪ್ರಸ್ತುತ ಅವರು ವೈದ್ಯಕೀಯ ಆರೈಕೆಯಲ್ಲಿದ್ದಾರೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp