ಐಪಿಎಲ್ 2021: ವಾಂಖೇಡೆ ಕ್ರೀಡಾಂಗಣದ 8 ಸಿಬ್ಬಂದಿಗೆ ಕೋವಿಡ್ ಸೋಂಕು, ಪರೀಕ್ಷೆ ತೀವ್ರಗೊಳಿಸಿದ ಫ್ರಾಂಚೈಸಿಗಳು

ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂದೇ ಕರೆಯಲಾಗುವ ಇಂಡಿಯನ್ ಪ್ರೀಮಿಯರ್ ಲೀಗ್ ನ 14ನೇ ಆವೃತ್ತಿಗೂ ಮುನ್ನವೇ ಆಘಾತ ಎದುರಾಗಿದ್ದು, ಮುಂದಿನ ಆವೃತ್ತಿಗೆ ಸಿದ್ಧತೆಗಳು ಭರದಿಂದ ಸಾಗಿರುವಂತೆಯೇ ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದ ಸಿಬ್ಬಂದಿಗಳಿಗೆ ಸೋಂಕು ಒಕ್ಕರಿಸಿದೆ.

Published: 03rd April 2021 11:15 AM  |   Last Updated: 03rd April 2021 03:13 PM   |  A+A-


wankhede Cricket Stadium

ಮುಂಬೈನ ವಾಂಖೆಡೆ ಕ್ರೀಡಾಂಗಣ (ಸಂಗ್ರಹ ಚಿತ್ರ)

Posted By : Srinivasamurthy VN
Source : ANI

ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂದೇ ಕರೆಯಲಾಗುವ ಇಂಡಿಯನ್ ಪ್ರೀಮಿಯರ್ ಲೀಗ್ ನ 14ನೇ ಆವೃತ್ತಿಗೂ ಮುನ್ನವೇ ಆಘಾತ ಎದುರಾಗಿದ್ದು, ಮುಂದಿನ ಆವೃತ್ತಿಗೆ ಸಿದ್ಧತೆಗಳು ಭರದಿಂದ ಸಾಗಿರುವಂತೆಯೇ ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದ ಸಿಬ್ಬಂದಿಗಳಿಗೆ ಸೋಂಕು ಒಕ್ಕರಿಸಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೆಲಸ ಮಾಡುವ ಒಟ್ಟು 8 ಮಂದಿ ಸಿಬ್ಬಂದಿಗಳು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆ ಎಲ್ಲ ಮೈದಾನದ ಸಿಬ್ಬಂದಿಗಳು ಕೋಚ್ ಗಳು ಮತ್ತು ಇತರೆ ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದ್ದು,  ಈ ಪೈಕಿ ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿಗಳನ್ನೂ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 8 ಮಂದಿ ಸಿಬ್ಬಂದಿಗಳಲ್ಲಿ ಸೋಂಕು ದೃಢಪಟ್ಟಿದೆ.

ವಾಂಖೆಡೆ ಸ್ಟೇಡಿಯಂನಲ್ಲಿರುವ ಎಲ್ಲಾ 19 ಸಿಬ್ಬಂದಿಗಳು ಕಳೆದ ವಾರ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಿದ್ದರು. ಮಾರ್ಚ್ 26ರಂದು ನಡೆಸಲಾದ ಪರೀಕ್ಷೆಯಲ್ಲಿ ಮೂವರಿಗೆ ಕೊರೊನಾ ಇರುವುದು ಕಂಡು ಬಂದಿತ್ತು. ಏಪ್ರಿಲ್ 1ರಂದು ಇನ್ನೂ 5 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಏಪ್ರಿಲ್ 9ರಿಂದ ಮೇ  30ರ ವರೆಗೆ 2021ರ ಐಪಿಎಲ್ ಟೂರ್ನಿ ನಡೆಯುವುದರಲ್ಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಏಪ್ರಿಲ್ 10ರಿಂದ ಏಪ್ರಿಲ್ 25ರ ವರೆಗೆ ಐಪಿಎಲ್ ಪಂದ್ಯಗಳು ನಡೆಯಲಿವೆ.

ಏಪ್ರಿಲ್ 9ರಂದು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದೆ. ಮುಂಬೈ ಮತ್ತು ಬೆಂಗಳೂರು ತಂಡಗಳು ಇದರಲ್ಲಿ ಕಾದಾಡಲಿವೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp