ನಿತಿನ್ ಮೆನನ್ ನೀಡಿದ 40 ತೀರ್ಪಿನಲ್ಲಿ 35 ಸರಿ, ಐಸಿಸಿ ಎಲೈಟ್‌ ಪ್ಯಾನಲ್ ಗೆ ಭಾರತೀಯ ಅಂಪೈರ್ ಸೇರ್ಪಡೆ!

ಅತ್ಯುತ್ತಮ ಅಂಪೈರಿಂಗ್ ಪಟ್ಟಿಯಲ್ಲಿ ಇಷ್ಟು ದಿನ ವಿದೇಶಿಗರ ಕೇಳಿಬರುತ್ತಿತ್ತು. ಇದೀಗ ಭಾರತೀಯ ಅಂಪೈರ್ ಗಳ ತಮ್ಮ ಅತ್ಯುತ್ತಮ ಅಂಪೈರಿಂಗ್ ಮೂಲಕ ಐಸಿಸಿ ಎಲೈಟ್ ಪ್ಯಾನಲ್‌ಗೆ ಸೇರ್ಪಡೆಯಾಗುತ್ತಿದ್ದಾರೆ.

Published: 03rd April 2021 04:56 PM  |   Last Updated: 03rd April 2021 04:58 PM   |  A+A-


Nitin Menon

ನಿತಿನ್ ಮೆನನ್

Posted By : Vishwanath S
Source : Online Desk

ಅತ್ಯುತ್ತಮ ಅಂಪೈರಿಂಗ್ ಪಟ್ಟಿಯಲ್ಲಿ ಇಷ್ಟು ದಿನ ವಿದೇಶಿಗರ ಕೇಳಿಬರುತ್ತಿತ್ತು. ಇದೀಗ ಭಾರತೀಯ ಅಂಪೈರ್ ಗಳ ತಮ್ಮ ಅತ್ಯುತ್ತಮ ಅಂಪೈರಿಂಗ್ ಮೂಲಕ ಐಸಿಸಿ ಎಲೈಟ್ ಪ್ಯಾನಲ್‌ಗೆ ಸೇರ್ಪಡೆಯಾಗುತ್ತಿದ್ದಾರೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ, ಏಕದಿನ ಸರಣಿ ಮತ್ತು ಟೀಂ ಸರಣಿ ಪಂದ್ಯಗಳಲ್ಲಿ ನಿತಿನ್ ಮೆನನ್ ಅಂಪೈರಿಂಗ್ ಮಾಡಿದ್ದರು. ಅವರು ನೀಡಿದ 40 ತೀರ್ಪುಗಳ ಪೈಕಿ 35 ತೀರ್ಪು ಸರಿಯಾಗಿತ್ತು. ಹೀಗಾಗಿ ಅವರು ಐಸಿಸಿ ಅಂಪೈರ್ ಗಳ ಎಲೈಟ್ ಪ್ಯಾನೆಲ್ ಗೆ ಸೇರ್ಪಡೆಯಾಗಿದ್ದಾರೆ. 

ಈ ಬಗ್ಗೆ ಮಾತನಾಡಿದ ನಿತಿನ್ ಅವರು ಕಳೆದ ಎರಡು ತಿಂಗಳು ತುಂಬಾ ಉತ್ತಮವಾಗಿತ್ತು. ನಮ್ಮ ಒಳ್ಳೆಯ ಕೆಲಸವನ್ನು ಜನರು ನೋಡಿದಾಗ ಮತ್ತು ಪ್ರಶಂಸಿಸಿದಾಗ ಅದು ಬಹಳ ತೃಪ್ತಿಯನ್ನು ನೀಡುತ್ತದೆ. ಉಭಯ ತಂಡಗಳು ವಿಶ್ವಕಪ್ ಚಾಂಪಿಯನ್ ಶಿಪ್ ಫೈನಲ್ ಗೆ ಪ್ರವೇಶಿಸಲು ಹೆಣಗಾಡುತ್ತಿರುವ ಸರಣಿಯಲ್ಲಿ ಅಂಪೈರಿಂಗ್ ಮಾಡುವುದು ಸವಾಲಾಗಿತ್ತು ಎಂದರು. 

ಐಪಿಎಲ್ ಟೂರ್ನಿಯ ಅಂಪೈರಿಂಗ್ ನನಗೆ ಹೆಚ್ಚು ಸಹಾಯಕವಾಯಿತು. ನಿಖರ ತೀರ್ಪು ನೀಡುವ ಸಾಮರ್ಥ್ಯ ಅಲ್ಲಿಂದಲೇ ಬಂದಿದೆ. ಅಂಪೈರಿಂಗ್ ಮಾನಸಿಕ ಸಾಮರ್ಥ್ಯದ ಮೇಲೆ ನಿಂತಿದೆ ಎಂದು ನಾನು ನಂಬುತ್ತೇನೆ. ಒತ್ತಡ ಹೆಚ್ಚಿದಾಗ ಹೆಚ್ಚು ಗಮನ ನೀಡಬೇಕು ಎಂದರು. 

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp