ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು: ಪುರುಷರ ತಂಡವನ್ನೂ ನಾಚಿಸುವಂತೆ ವಿಶ್ವ ದಾಖಲೆ ಬರೆದ ಆಸಿಸ್ ವನಿತೆಯರ ತಂಡ

ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ವನಿತೆಯರ ತಂಡ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪುರುಷರ ತಂಡವನ್ನೂ ನಾಚಿಸುವಂತೆ ವಿಶ್ವ ದಾಖಲೆ ನಿರ್ಮಿಸಿದೆ.

Published: 04th April 2021 04:14 PM  |   Last Updated: 04th April 2021 04:14 PM   |  A+A-


Australia's women's Cricket team

ವಿಶ್ವ ದಾಖಲೆ ಬರೆದ ಆಸಿಸ್ ಮಹಿಳಾ ತಂಡ

Posted By : Srinivasamurthy VN
Source : Online Desk

ಬೇ ಓವಲ್: ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ವನಿತೆಯರ ತಂಡ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪುರುಷರ ತಂಡವನ್ನೂ ನಾಚಿಸುವಂತೆ ವಿಶ್ವ ದಾಖಲೆ ನಿರ್ಮಿಸಿದೆ.

ನಿನ್ನೆ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡ ನ್ಯೂಜಿಲೆಂಡ್ ವನಿತೆಯರ ತಂಡದ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ. ನಿನ್ನೆಯ ಜಯ ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ  ಐತಿಹಾಸಿಕ ಜಯವಾಗಿದ್ದು, ಏಕದಿನ ಮಾದರಿ ಕ್ರಿಕೆಟ್ ನಲ್ಲಿ ಆಸಿಸ್ ಗೆ ಸತತ 22ನೇ ಜಯವಾಗಿದೆ.

ಹೌದು.. ಆಸ್ಟ್ರೇಲಿಯಾ ವನಿತೆಯರ ತಂಡ ಕಳೆದ 22 ಪಂದ್ಯಗಳಿಂದ ಸೋಲನ್ನೇ ಕಂಡಿಲ್ಲ. ಕೊನೆಯ ಬಾರಿಗೆ ಆಸ್ಟ್ರೇಲಿಯಾ ತಂಡ ಸೋತಿದ್ದು, 2017ರ ಅಕ್ಟೋಬರ್ ನಲ್ಲಿ.. ಆ ಬಳಿಕ ನಡೆದ 22 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಜಯ ದಾಖಲಿಸಿದೆ. ಆಸಿಸ್ ವನಿತೆಯರ ಅಜೇಯ ಗೆಲುವಿನ ಓಟ 2018ರ  ಮಾರ್ಚ್ 12ರಂದು ಭಾರತದ ವಿರುದ್ಧ ಆರಂಭವಾಗಿತ್ತು. ಆಗ ಆಸಿಸ್ ಪಡೆ 3-0 ಅಂತರದಿಂದ ಸರಣಿ ಜಯಿಸಿತ್ತು. ಆ ನಂತರ ಪಾಕಿಸ್ತಾನ(3-0), ನ್ಯೂಜಿಲ್ಯಾಂಡ್(3-0), ಇಂಗ್ಲೆಂಡ್(3-0), ವೆಸ್ಟ್ ಇಂಡೀಸ್(3-0), ಶ್ರೀಲಂಕಾ(3-0), ನ್ಯೂಜಿಲೆಂಡ್(3-0) ಹಾಗೂ ಇದೀಗ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ 3  ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp