ಸಿಕೆ ನಾಯ್ಡು ಪುತ್ರಿ, ಭಾರತದ ಮೊದಲ ಮಹಿಳಾ ಕ್ರಿಕೆಟ್ ಕಮೆಂಟರ್ ಚಂದ್ರಾ ನಾಯ್ಡು ವಿಧಿವಶ

ಭಾರತದ ಮೊದಲ ಟೆಸ್ಟ್ ನಾಯಕ ಸಿ.ಕೆ. ನಾಯ್ಡು  ಅವರ ಪುತ್ರಿ ಚಂದ್ರಾ ನಾಯ್ಡು ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾದರು. ಆಕೆಗೆ 88 ವರ್ಷ ವಯಸ್ಸಾಗಿತ್ತು.

Published: 04th April 2021 10:21 PM  |   Last Updated: 04th April 2021 10:21 PM   |  A+A-


ಚಂದ್ರಾ ನಾಯ್ಡು

Posted By : Raghavendra Adiga
Source : PTI

ಇಂದೋರ್: ಭಾರತದ ಮೊದಲ ಟೆಸ್ಟ್ ನಾಯಕ ಸಿ.ಕೆ. ನಾಯ್ಡು  ಅವರ ಪುತ್ರಿ ಚಂದ್ರಾ ನಾಯ್ಡು ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾದರು. ಆಕೆಗೆ 88 ವರ್ಷ ವಯಸ್ಸಾಗಿತ್ತು.

ಕ್ರಿಕೆಟ್ ಕಮೆಂಟರಿ ಮಾಡುವ ಮೂಲಕ ಹೆಸರು ಮಾಡಿದ ಚಂದ್ರಾ ಅವರು ಮನೋರಮಗಂಜ್ ಅವರ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಮಾಜಿ ದೇಶೀಯ ಕ್ರಿಕೆಟಿಗ ಮತ್ತು ಸೋದರಳಿಯ ವಿಜಯ್ ನಾಯ್ಡು ಪಿಟಿಐಗೆ ತಿಳಿಸಿದ್ದಾರೆ.

1977 ರಲ್ಲಿ ಇಂದೋರ್‌ನಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಬಾಂಬೆ (ಈಗಿನ ಮುಂಬೈ) ಮತ್ತು ಎಂಸಿಸಿ ನಡುವಿನ ಪಂದ್ಯದ ವೇಳೆ ಚಂದ್ರಾ ಅವರ ಮೊದಲ ಕಮೆಂಟರಿ ನೀಡಿದ್ದರು. ಇವರು 1982 ರಲ್ಲಿ ಸಾಂಪ್ರದಾಯಿಕ ಲಾರ್ಡ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಗೋಲ್ಡನ್ ಜುಬಿಲಿ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಿದ್ದರು ಮತ್ತು ಅಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಆದರೆ, ಅವರು ದೀರ್ಘಕಾಲ ಕಮೆಂಟರಿ ಮಾಡಲಿಲ್ಲ. ಬದಲಿಗೆ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾದರು.

ಅವರು 'ಸಿಕೆ ನಾಯ್ಡು: ಎ ಡಾಟರ್ ರಿಮೆಂಬರ್ಸ್' ಎಂಬ ಪುಸ್ತಕವನ್ನೂ ಬರೆದಿದ್ದರು. ಅವರ ನಿಧನಕ್ಕೆ ಬಿಸಿಸಿಐ ಮಾಜಿ ಕಾರ್ಯದರ್ಶಿ ಸಂಜಯ್ ಜಗದೇಲ್ ಸಂತಾಪ ಸೂಚಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp