ಮುನ್ನೆಚ್ಚರಿಕೆ ಕ್ರಮವಾಗಿ ಆಟಗಾರರಿಗೆ ಕೊರೋನಾ ವ್ಯಾಕ್ಸಿನೇಷನ್: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ಎರಡನೇ ಅಲೆ ಅಬ್ಬರಿಸುತ್ತಿರುವ ವೇಳೆ, ಐಪಿಎಲ್‌ ನಲ್ಲಿ ಪಾಲ್ಗೊಳ್ಳುವ ಆಟಗಾರರನ್ನು ರಕ್ಷಿಸಿಸಲು ವ್ಯಾಕ್ಸಿನೇಷನ್‌ ಒಂದೇ ಮಾರ್ಗ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅಭಿಪ್ರಾಯಪಟ್ಟಿದ್ದಾರೆ.

Published: 04th April 2021 08:31 PM  |   Last Updated: 04th April 2021 08:38 PM   |  A+A-


Rajeev Shukla

ಸಂಗ್ರಹ ಚಿತ್ರ

Posted By : Vishwanath S
Source : UNI

ಮುಂಬೈ: ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ಎರಡನೇ ಅಲೆ ಅಬ್ಬರಿಸುತ್ತಿರುವ ವೇಳೆ, ಐಪಿಎಲ್‌ ನಲ್ಲಿ ಪಾಲ್ಗೊಳ್ಳುವ ಆಟಗಾರರನ್ನು ರಕ್ಷಿಸಿಸಲು ವ್ಯಾಕ್ಸಿನೇಷನ್‌ ಒಂದೇ ಮಾರ್ಗ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅಭಿಪ್ರಾಯಪಟ್ಟಿದ್ದಾರೆ. 

ಆಟಗಾರರಿಗೆ ಕೋವಿಡ್‌ ಲಸಿಕೆ ಕಲ್ಪಿಸುವ ಬಗ್ಗೆ ಬಿಸಿಸಿಐ ಆಲೋಚಿಸುತ್ತಿರುವುದಾಗಿ, ಶೀಘ್ರದಲ್ಲೇ ಆರೋಗ್ಯ ಸಚಿವಾಲಯದೊಂದಿಗೆ ಸಮಾಲೋಚಿಸುವುದಾಗಿ ಅವರು ಹೇಳಿದ್ದಾರೆ. ಕೊರೋನಾ ಯಾವಾಗ  ಅಂತ್ಯಗೊಳ್ಳಲಿದೆ ಎಂದು ಯಾರಿಗೂ ತಿಳಿದಿಲ್ಲ, ಹಾಗಾಗಿ ಆಟಗಾರರ ಆರೋಗ್ಯ ಕಾಪಾಡಲು ವ್ಯಾಕ್ಸಿನೇಷನ್ ಅತ್ಯುತ್ತಮ ಮಾರ್ಗವೆಂದು ಭಾವಿಸಿರುವುದಾಗಿ ಹೇಳಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್‌ಗಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಘೋಷಿಸಿದಂತೆ ಆರು ಸ್ಥಳಗಳಲ್ಲಿ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಆ ದಿಶೆಯಲ್ಲಿ ಬಯೋ ಬಬುಲ್‌ ಸಹ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಖಾಲಿ ಕ್ರೀಡಾಂಗಣಗಳಲ್ಲಿ ಇಡೀ ಪಂದ್ಯಾವಳಿ  ನಡೆಯಲಿದೆ ಎಂದು ಸ್ಪಷ್ಟಪಡಿಸಿತ್ತು.   

ಏತನ್ಮಧ್ಯೆ, ಮೂವರು ಆಟಗಾರರು ಕೊರೋನಾ ಸೋಂಕಿಗೆ ಒಳಗಾಗಿದ್ದರಿಂದ ಆಟಗಾರರೊಂದಿಗೆ ಆಯಾ ತಂಡಗಳ ಮಾಲೀಕರು ಹಾಗೂ ಬಿಸಿಸಿಐ ಈಗಾಗಲೇ ತನ್ನ ಕಳವಳ ವ್ಯಕ್ತಪಡಿಸಿದೆ. ಆರಂಭದಲ್ಲಿ, ಕೆ ಕೆ ಆರ್ ಆಟಗಾರ ನಿತೀಶ್ ರಾಣಾಗೆ ಕೊರೋನಾ ಇರುವುದು ಪತ್ತೆಯಾಗಿತ್ತು. ನಂತರ ದೆಹಲಿ ಕ್ಯಾಪಿಟಲ್ಸ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಪಾಸಿಟಿವ್‌ ಆಗಿತ್ತು.   

ಇತ್ತೀಚೆಗೆ, ಆರ್‌ಸಿಬಿ ಯುವ ಆಟಗಾರ ದೇವದುತ್ ಪಡಿಕ್ಕಲ್ ಅವರನ್ನೂ ಕೊರೊನಾ ಅಮರಿಕೊಂಡಿದೆ. ಇದರಿಂದ ಆಯಾ ಫ್ರಾಂಚೈಸಿಗಳು, ಬಿಸಿಸಿಐ ಕೊರೋನಾ ತಡೆಗೆ ಮಾರ್ಗೋಪಾಯ ರೂಪಿಸುವ ಅನ್ವೇಷಣೆಯಲ್ಲಿ ನಿರತವಾಗಿದೆ. ಈ ಭಾಗವಾಗಿ ಆಟಗಾರರಿಗೆ ವ್ಯಾಕ್ಸಿನೇಷನ್ ಕಲ್ಪಿಸುವ ಪ್ರಸ್ತಾವನೆ ಮುಂದಿಡಲಾಗಿದೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp