193 ರನ್ ಗಳಿಸಿದ್ದ ಪಾಕ್‌ನ ಫಖರ್ ರನ್ಔಟ್, ಡಿ ಕಾಕ್ ಮೋಸದಾಟಕ್ಕೆ ನೆಟ್ಟಿಗರು ತರಾಟೆ: ವಿಡಿಯೋ ವೈರಲ್

ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಅಪರೂಪದ ದಾಖಲೆ ಪಟ್ಟಿ ಸೇರುವುದರಲ್ಲಿದ್ದ ಪಾಕ್ ಕ್ರಿಕೆಟಿಗ ಫಖರ್ ಝಮಾನ್ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಮೋಸದಾಟಕ್ಕೆ ಬಲಿಯಾಗಿದ್ದರು.

Published: 05th April 2021 03:55 PM  |   Last Updated: 05th April 2021 03:55 PM   |  A+A-


Run Out Video Grab

ರನೌಟ್ ವಿಡಿಯೋ ದೃಶ್ಯ

Posted By : Vishwanath S
Source : Online Desk

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಅಪರೂಪದ ದಾಖಲೆ ಪಟ್ಟಿ ಸೇರುವುದರಲ್ಲಿದ್ದ ಪಾಕ್ ಕ್ರಿಕೆಟಿಗ ಫಖರ್ ಝಮಾನ್ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಮೋಸದಾಟಕ್ಕೆ ಬಲಿಯಾಗಿದ್ದರು. 

ದಕ್ಷಿಣ ಆಫ್ರಿಕಾ ನೀಡಿದ 342 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ 324 ರನ್ ಬಾರಿಸಿ 17 ರನ್ ಗಳಿಂದ ವಿರೋಚಿತ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಫಖರ್ ಝಮಾನ್ 155 ಎಸೆತಗಳಲ್ಲಿ 193 ರನ್ ಬಾರಿಸಿದ್ದರು. 49.1 ಓವರ್ ನಲ್ಲಿ ರನೌಟ್ ಆಗಿ ಫಖರ್ ಪೆವಿಲಿನಯ್ ಸೇರಿದ್ದರು. ಆದರೆ ಫಖರ್ ರನೌಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. 

ಆಫ್ರಿಕಾದ ಲುಂಗಿ ಎನ್‌ಜಿಡಿ ಬೌಲಿಂಗ್ ನಲ್ಲಿ ಫಖರ್ ನೇರವಾಗಿ ಬಾರಿಸಿದರು. ಎರಡು ರನ್ ತೆಗೆದುಕೊಳ್ಳುತ್ತಿದ್ದಾಗ ಫೀಲ್ಡಿಂಗ್ ಮಾಡುತ್ತಿದ್ದ ಐಡೆನ್ ಮಾರ್ಕ್ರಮ್ ಥ್ರೋ ಮಾಡಿದರು. ಈ ವೇಳೆ ಡಿ ಕಾಕ್ ಚೆಂಡು ನಾನ್ ಸ್ಟ್ರೈಕ್ ನತ್ತ ಎಸೆಯುವಂತೆ ಸನ್ಹೆ ಮಾಡಿದರು. ಇದನ್ನು ಗಮನಿಸಿದ ಫಖರ್ ಸ್ಟ್ರೈಕ್ ನತ್ತ ಓಡುವುದನ್ನು ನಿಧಾನ ಮಾಡಿದರು. ಈ ವೇಳೆ ನೇರವಾಗಿ ತಮ್ಮ ಕೈಗೆ ಬಂದ ಚೆಂಡನ್ನು ಹಿಡಿದ ಡಿಕಾಕ್ ರನೌಟ್ ಮಾಡಿದರು. 

ಇದರಿಂದಾಗಿ ದ್ವಿಶತಕದ ಹಂಚಿನಲ್ಲಿದ್ದ ಫಖರ್ ಝಮಾನ್ ನಿರಾಶರಾಗಿ ಪೆವಿಲಿಯನ್ ಸೇರಿದರು. ಈ ರನೌಟ್ ಕುರಿತಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಹಲವರು ಡಿಕಾಕ್ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನಿಯಮವೂ ಬದಲಾಗಬೇಕು ಎಂದು ಹೇಳಿದ್ದಾರೆ. 

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp