ಐಪಿಎಲ್ 2021: ಕಪ್ ಎತ್ತುವುದೇ ನಮ್ಮ ಗುರಿ- ರಿಷಭ್ ಪಂತ್ 

ನಾವು ಒಂದು ಬಾರಿಯೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಮತ್ತು ಈ ಬಾರಿ ಪ್ರಶಸ್ತಿಯನ್ನು ಗೆಲ್ಲಲು ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ ಎಂದು ದೆಹಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕ ರಿಷಭ್ ಪಂತ್ ಹೇಳಿದ್ದಾರೆ.

Published: 06th April 2021 07:54 PM  |   Last Updated: 06th April 2021 07:56 PM   |  A+A-


Rishab_Panth1

ರಿಷಭ್ ಪಂತ್

Posted By : Nagaraja AB
Source : UNI

ನವದೆಹಲಿ: ನಾವು ಒಂದು ಬಾರಿಯೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಮತ್ತು ಈ ಬಾರಿ ಪ್ರಶಸ್ತಿಯನ್ನು ಗೆಲ್ಲಲು ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ ಎಂದು ದೆಹಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕ ರಿಷಭ್ ಪಂತ್ ಹೇಳಿದ್ದಾರೆ.

ಎರಡು - ನಾವು ಮೂರು ವರ್ಷಗಳಿಂದ ತಂಡವಾಗಿ ಉತ್ತಮವಾಗಿ ಆಡುತ್ತಿದ್ದೇವೆ. ಒಂದು ಬಾರಿಯೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಮತ್ತು ಈ ಬಾರಿ ಪ್ರಶಸ್ತಿಯನ್ನು ಗೆಲ್ಲಲು ಅತ್ಯುತ್ತಮ ರೀತಿಯಲ್ಲಿ ಪ್ರಯತ್ನ ಪಡುವುದಾಗಿ ತಿಳಿಸಿದ್ದಾರೆ. 

ನಾಯಕತ್ವ ಸಿಕ್ಕಿದ್ದು ಸಾಕಷ್ಟು ರೋಮಾಂಚನಕಾರಿ ಆಗಿದ್ದು, ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆಯಲು ಬಯಸುತ್ತೇನೆ "ಈ ಅವಕಾಶವನ್ನು ನೀಡಿದ ನನ್ನ ಎಲ್ಲಾ ತರಬೇತುದಾರರು ಮತ್ತು ತಂಡದ ಮಾಲೀಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕಾಗಿದೆ ಎಂದಿದ್ದಾರೆ. 

ಈ ಬಾರಿ ನಮ್ಮ ಸಿದ್ಧತೆಗಳು ತುಂಬಾ ಉತ್ತಮವಾಗಿವೆ. ತಂಡದ ವಾತಾವರಣದಿಂದ ನನಗೆ ತುಂಬಾ ಸಂತೋಷವಾಗಿದೆ ಮತ್ತು ನಾಯಕ ಇದಕ್ಕಿಂತ ಹೆಚ್ಚೇನೂ ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. 

ತಂಡದ ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ಅವರ ಬಗ್ಗೆ ಕೇಳಿದಾಗ, "ಕಳೆದ ಎರಡು-ಮೂರು ವರ್ಷಗಳಲ್ಲಿ ರಿಕಿ ನಮಗೆ ಉತ್ತಮ ಸಲಹೆ ಸೂಚನೆ ನೀಡಿದ್ದಾರೆ. ಅವರು ತಂಡದೊಳಗೆ ಹೊಸ ಶಕ್ತಿಯನ್ನು ತರುತ್ತಾರೆ ಮತ್ತು ಅವರನ್ನು ನೋಡುವಾಗ ಆಟಗಾರನಾಗಿ ಅಂತಹ ವ್ಯಕ್ತಿಯಿಂದ ಬಹಳಷ್ಟು ಕಲಿಯಬಹುದು. ಈ ಸಮಯದಲ್ಲಿ ನಾವು ರಿಕಿ ಮತ್ತು ಇಡೀ ತಂಡದ ಸಹಾಯದಿಂದ ಕಪ್ ಗೆಲ್ಲ ಬಹುದೆಂದು ಭಾವಿಸುತ್ತೇನೆ'' ಎಂದು ಹೇಳಿದ್ದಾರೆ.
 

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp