ಐಪಿಎಲ್ ಗೆ ಕೊರೋನಾ ಕರಿ ನೆರಳು: ವಾಂಖೆಡೆ ಸ್ಟೇಡಿಯಂನ ಮತ್ತೆ ಮೂವರು ಸಿಬ್ಬಂದಿಗೆ ಪಾಸಿಟಿವ್

ಐಪಿಎಲ್‌ನ 14ನೇ ಆವೃತ್ತಿಗೆ ಕೊರೋನಾ ಕರಿ ನೆರಳು ಆವರಿಸಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನ ಮತ್ತೆ ಮೂವರು ಸಿಬ್ಬಂದಿಗೆ ಮಂಗಳವಾರ ಪಾಸಿಟಿವ್ ದೃಢಪಟ್ಟಿದೆ.

Published: 06th April 2021 05:59 PM  |   Last Updated: 06th April 2021 05:59 PM   |  A+A-


No security threat to Wankhede stadium: Mumbai police

ವಾಂಖೆಡೆ ಸ್ಟೇಡಿಯಂ

Posted By : Lingaraj Badiger
Source : ANI

ಮುಂಬೈ: ಐಪಿಎಲ್‌ನ 14ನೇ ಆವೃತ್ತಿಗೆ ಕೊರೋನಾ ಕರಿ ನೆರಳು ಆವರಿಸಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನ ಮತ್ತೆ ಮೂವರು ಸಿಬ್ಬಂದಿಗೆ ಮಂಗಳವಾರ ಪಾಸಿಟಿವ್ ದೃಢಪಟ್ಟಿದೆ.

ಏಪ್ರಿಲ್ 9ರಿಂದ ಐಪಿಎಲ್ ಪಂದ್ಯಗಳು ಆರಂಭಗೊಳ್ಳಲಿವೆ. ಈ ನಡುವೆ ಐಪಿಎಲ್ ಪಂದ್ಯ ನಡೆಯುವ ವಾಂಖೆಡೆ ಕ್ರೀಡಾಂಗಣದಲ್ಲೂ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

ಈ ಮೊದಲು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಮೈದಾನದ ಸಿಬ್ಬಂದಿ ಮತ್ತು 5 ಮಂದಿ ಕಾರ್ಯಕ್ರಮ ನಿರ್ವಹಣಾ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈಗ ಇನ್ನೂ ಇಬ್ಬರು ಮೈದಾನ ಸಿಬ್ಬಂದಿ ಮತ್ತು ಓರ್ವ ಪ್ಲಂಬರ್‌ಗೆ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.

ಸ್ಟೇಡಿಯಂನ ಮತ್ತೆ ಮೂವರು ಸಿಬ್ಬಂದಿಗೆ ಕೊರೋನಾ ಬಂದಿರುವುದುನ್ನು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಮೂಲಗಳು ಖಚಿತಪಡಿಸಿದ್ದು, ಮೈದಾನದ ಸಿಬ್ಬಂದಿ ಕೂಡ ಎಲ್ಲಿಯೂ ಪ್ರಯಾಣಿಸದಂತೆ, ಮೈದಾನದೊಳಗೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp