ಆತ ಕ್ರಿಕೆಟಿಗರಲ್ಲದಿದ್ದರೆ ಇಸಿಸ್ ಸೇರುತ್ತಿದ್ದ: ಮೊಯಿನ್ ಅಲಿ ಕುರಿತು ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿಕೆಯಿಂದ ವಿವಾದ ಸೃಷ್ಟಿ

ಸದಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುವ ಬಾಂಗ್ಲಾದೇಶ ಲೇಖಕಿ ತಸ್ಲೀಮಾ ನಸ್ರೀನ್ ಇದೀಗ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಮೊಯಿನ್ ಅಲಿ ಬಗ್ಗೆ ಮಾತನಾಡಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

Published: 06th April 2021 07:55 PM  |   Last Updated: 07th April 2021 02:43 PM   |  A+A-


ಮೊಯಿನ್ ಅಲಿ, ತಸ್ಲೀಮಾ ನಸ್ರೀನ್

Posted By : Raghavendra Adiga
Source : Online Desk

ಢಾಕಾ: ಸದಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುವ ಬಾಂಗ್ಲಾದೇಶ ಲೇಖಕಿ ತಸ್ಲೀಮಾ ನಸ್ರೀನ್ ಇದೀಗ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಮೊಯಿನ್ ಅಲಿ ಬಗ್ಗೆ ಮಾತನಾಡಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ಮೊಯಿನ್ ಅಲಿ ಒಂದೊಮ್ಮೆ ಕ್ರಿಕೆಟ್ ನೊಂದಿಗೆ ಸಂಬಂಧ ಹೊಂದಿರದೆ ಹೋಗಿದ್ದರೆ ಸಿರಿಯಾಗೆ ತೆರಳಿ ಇಸಿಸ್ ಸೇರುತ್ತಿದ್ದರು ಎಂದು ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.

ಮೊಯಿನ್ ಅಲಿ ಅವರ ಬಗ್ಗೆ ಬರೆದ ತಸ್ಲೀಮಾ ಅವರ ಈ ಟ್ವೀಟ್ ವ್ಯಾಪಕ ಟೀಕೆಗೆ ಗುರಿಯಾಗಿದೆ.

ವಿಶ್ವಕಪ್ ಹೀರೋ ಮತ್ತು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರ ಟ್ವೀಟ್ ಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.

"ನೀವು ಆರಾಮವಾಗಿದ್ದೀರಾ? ನೀವು ಆರಾಮವಾಗಿದ್ದೀರೆಂದು ನಾನು ಭಾವಿಸುವುದಿಲ್ಲ" ಆರ್ಚರ್ ತಸ್ಲೀಮಾ ಟ್ವೀಟ್ ಗೆ ಪ್ರತಿಯಾಗಿ ಟ್ವೀಟ್ ಮಾಡಿದ್ದಾರೆ.

ಮೊಯಿನ್ ಅಲಿ ಪ್ರಸ್ತುತ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp