ಐಪಿಎಲ್ ಮೇಲೆ ಕೊರೋನಾ ಕರಿ ನೆರಳು: ಆರ್ಸಿಬಿಯ ಡೇನಿಯಲ್ ಸ್ಯಾಮ್ಸ್ ಗೆ ಪಾಸಿಟಿವ್, ಪಡಿಕ್ಕಲ್ ಚೇತರಿಕೆ
ಐಪಿಎಲ್ನ 14ನೇ ಆವೃತ್ತಿ ಮೇಲೆ ಕೊರೋನಾ ಕರಿ ನೆರಳು ಆವರಿಸಿದ್ದು, ಪಂದ್ಯಾವಳಿ ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಇರುವಂತೆ ಆರ್ ಸಿಬಿ ಆಟಗಾರ, ಆಸ್ಟ್ರೇಲಿಯಾ ಆಲ್ರೌಂಡರ್ ...
Published: 07th April 2021 02:51 PM | Last Updated: 07th April 2021 02:51 PM | A+A A-

ದೇವದತ್ ಪಡಿಕಲ್
ಮುಂಬೈ: ಐಪಿಎಲ್ನ 14ನೇ ಆವೃತ್ತಿ ಮೇಲೆ ಕೊರೋನಾ ಕರಿ ನೆರಳು ಆವರಿಸಿದ್ದು, ಪಂದ್ಯಾವಳಿ ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಇರುವಂತೆ ಆರ್ ಸಿಬಿ ಆಟಗಾರ, ಆಸ್ಟ್ರೇಲಿಯಾ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರಿಗೆ ಬುಧವಾರ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಈ ಮಧ್ಯೆ, ಆರ್ ಸಿಬಿ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರು ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದು, ಇತ್ತೀಚಿನ ಪರೀಕ್ಷೆಯಲ್ಲಿ ಅವರಿಗೆ ಕೊರೋನಾ ನೆಗಟಿವ್ ಬಂದಿದೆ.
28 ವರ್ಷದ ಆಲ್ರೌಂಡರ್ ಸ್ಯಾಮ್ಸ್ ಅವರು ಏಪ್ರಿಲ್ 3 ರಂದು ಭಾರತಕ್ಕೆ ಆಗಮಿಸಿದ್ದಾಗ ಅವರಿಗೆ ಕೊರೋನಾ ನೆಗಟಿವ್ ಬಂದಿತ್ತು. ಆದರೆ ಈಗ ಪಾಸಿಟಿವ್ ಬಂದಿದೆ ಎಂದು ಆರ್ಸಿಬಿ ಟ್ವೀಟ್ ಮಾಡಿದೆ.
"ಏಪ್ರಿಲ್ 7 ರಂದು ನಡೆದ 2ನೇ ಪರೀಕ್ಷೆಯಲ್ಲಿ ಅವರ (ಸ್ಯಾಮ್ಸ್) ಕೊರೋನಾ ವರದಿ ಪಾಸಿಟಿವ್ ಬಂದಿದೆ. ಸ್ಯಾಮ್ಸ್ ಪ್ರಸ್ತುತ ಲಕ್ಷಣರಹಿತರಾಗಿದ್ದು, ಪ್ರಸ್ತುತ ನಿಗದಿಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ಪ್ರತ್ಯೇಕವಾಗಿದ್ದಾರೆ" ಎಂದು ಆರ್ ಸಿಬಿ ತಿಳಿಸಿದೆ.
ಏಪ್ರಿಲ್ 9ರಿಂದ ಆರಂಭವಾಗುವ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಆರ್ಸಿಬಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಶುಕ್ರವಾರ ಎದುರಿಸಲಿದೆ.