ಕೋವಿಡ್-19: ಸಚಿನ್ ತೆಂಡೊಲ್ಕರ್ ಆಸ್ಪತ್ರೆಯಿಂದ ಡಿಸ್ಚಾರ್ಜ್, ಹೋಮ್ ಐಸೋಲೇಷನ್
ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮನೆಗೆ ವಾಪಸ್ಸಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿಗೆ ಅವರು ಧನ್ಯವಾದ ಸಲ್ಲಿಸಿದ್ದು, ಐಸೋಲೇಷನ್ ನಲ್ಲಿ ಇರುವುದಾಗಿ ತಿಳಿಸಿದ್ದಾರೆ.
Published: 08th April 2021 08:10 PM | Last Updated: 08th April 2021 08:12 PM | A+A A-

ಸಚಿನ್ ತೆಂಡೊಲ್ಕರ್
ಮುಂಬೈ: ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮನೆಗೆ ವಾಪಸ್ಸಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿಗೆ ಅವರು ಧನ್ಯವಾದ ಸಲ್ಲಿಸಿದ್ದು, ಐಸೋಲೇಷನ್ ನಲ್ಲಿ ಇರುವುದಾಗಿ ತಿಳಿಸಿದ್ದಾರೆ.
'ಆಸ್ಪತ್ರೆಯಿಂದ ಮನೆಗೆ ಬಂದಿದ್ದೇನೆ, ವಿಶ್ರಾಂತಿಯೊಂದಿಗೆ ಐಸೋಲೇಷನ್ ನಲ್ಲಿ ಇರುತ್ತೇನೆ. ತಮ್ಮ ಆರೋಗ್ಯ ಚೇತರಿಕೆಗಾಗಿ ಶುಭ ಕೋರಿದ್ದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅದನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ" ಎಂದು ಸಚಿನ್ ಟ್ವಿಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ.
ಇಂತಹ ಕಷ್ಟದ ಸಂದರ್ಭದಲ್ಲೂ ಒಂದು ವರ್ಷದಿಂದ ದಣಿವರಿಯದೆ ಕೆಲಸ ಮಾಡುತ್ತಿರುವ ಹಾಗೂ ನನಗೆ ಉತ್ತಮ ರೀತಿಯಲ್ಲಿ ಉಪಚರಿಸಿದ ವೈದ್ಯಕೀಯ ಸಿಬ್ಬಂದಿಗೆ ನಾನು ಎಂದಿಗೂ ಕೃತಜ್ಞನಾಗಿರುವುದಾಗಿ ಅವರು ಬರೆದುಕೊಂಡಿದ್ದಾರೆ.
— Sachin Tendulkar (@sachin_rt) April 8, 2021
ಮಾರ್ಚ್ 27 ರಂದು ಸಚಿನ್ ತೆಂಡೊಲ್ಕರ್ ಅವರಿಗೆ ಪಾಸಿಟಿವ್ ದೃಢಪಟ್ಟಿತ್ತು. ನಂತರ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೆಲವು ದಿನಗಳಲ್ಲಿ ಮನೆಗೆ ವಾಪಸ್ ಆಗಲಿದ್ದು, ಪ್ರತಿಯೊಬ್ಬರು ಸುರಕ್ಷಿತವಾಗಿ ಇರಿ ಎಂದು ಏಪ್ರಿಲ್ 2 ರಂದು ಅವರು ಹೇಳಿದ್ದರು.