ದ್ರಾವಿಡ್ ಕೋಪಕ್ಕೆ ದಂಗಾದ ವಿರಾಟ್ ಕೊಹ್ಲಿ! ವಿಡಿಯೋ

ದಿ ವಾಲ್' ಖ್ಯಾತಿಯ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಅವರ ಕೋಪಕ್ಕೆ ಟೀಂ ಇಂಡಿಯಾ ಹಾಲಿ ನಾಯಕ ವಿರಾಟ್ ಕೊಹ್ಲಿ ದಂಗಾಗಿದ್ದಾರೆ.
ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್
ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್

ಮುಂಬೈ: ' ದಿ ವಾಲ್' ಖ್ಯಾತಿಯ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಅವರ ಕೋಪಕ್ಕೆ ಟೀಂ ಇಂಡಿಯಾ ಹಾಲಿ ನಾಯಕ ವಿರಾಟ್ ಕೊಹ್ಲಿ ದಂಗಾಗಿದ್ದಾರೆ. 

ತಮ್ಮ ಕ್ರಿಕೆಟ್ ಜೀವನದಲ್ಲಿ ಎಂದಿಗೂ ಕೋಪಗೊಳ್ಳದ, ಶಾಂತಚಿತ್ತದಿಂದ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದ ರಾಹುಲ್ ದ್ರಾವಿಡ್ ಅವರ ಹೊಸ ರೂಪ ಕಂಡು, ಅಭಿಮಾನಿಗಳಷ್ಟೇ ಅಲ್ಲದೇ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಆಶ್ಚರ್ಯಚಕಿತರಾಗಿದ್ದಾರೆ.  ರಾಹುಲ್ ದ್ರಾವಿಡ್ ಅವರ ಇಂತಹದೊಂದು ಮುಖವನ್ನು ಎಂದಿಗೂ ನೋಡಿಲ್ಲ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಅಸಲಿ ವಿಷಯ ಏನಂದ್ರೆ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಆನ್ ಲೈನ್  ಅಪ್ಲಿಕೇಷನ್ ಕ್ರೆಡ್ ಬಿಡುಗಡೆ ಮಾಡಿರುವ ಹೊಸ ಜಾಹೀರಾತು ಇದಾಗಿದೆ. ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಳ್ಳುವ ರಾಹುಲ್ ದ್ರಾವಿಡ್, ತನ್ನ ವಿಭಿನ್ನ ಹಾವ-ಭಾವಗಳ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com