ಐಪಿಎಲ್ 2021: ಏಳು ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ 

ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್  ಏಳು ವಿಕೆಟ್ ಗಳಿಂದ ಸೋಲಿಸಿದೆ. 

Published: 10th April 2021 11:40 PM  |   Last Updated: 10th April 2021 11:50 PM   |  A+A-


Prithvi_Shaw_Shikhar_Dhawan1

ಪೃಥ್ವಿ ಶಾ, ಶಿಖರ್ ಧವನ್

Posted By : Nagaraja AB
Source : Online Desk

ಮುಂಬೈ: ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್  ಏಳು ವಿಕೆಟ್ ಗಳಿಂದ ಸೋಲಿಸಿದೆ. 

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 189 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್  ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ 18.4 ಓವರ್ ಗಳಲ್ಲಿ 190 ರನ್ ಗಳಿಸುವ ಮೂಲಕ ವಿಜಯದ ನಗೆ ಬೀರಿತು.  

ಆರಂಭಿಕ ಆಟಗಾರರಾದ ಪೃಥ್ವಿ ಶಾ ಮತ್ತು ಶಿಖರ್ ಧವನ್, ಉತ್ತಮ ಪ್ರದರ್ಶದ ಮೂಲಕ ಪಂದ್ಯ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೃಥ್ವಿ ಶಾ 38 ಎಸೆತಗಳಲ್ಲಿ 9 ಬೌಂಡರಿ, ಮೂರು ಸಿಕ್ಸರ್ ಗಳೊಂದಿಗೆ  72 ರನ್ ಬಾರಿಸಿದರೆ, ಶಿಖರ್ ಧವನ್, 54 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಎಸೆತಗಳೊಂದಿಗೆ 85 ರನ್ ಕಲೆ ಹಾಕಿದರು. ಈ ಜೊತೆಯಾಟ ಮುರಿಯುವಲ್ಲಿ ಡ್ವೇನ್ ಬ್ರಾವೋ ಯಶಸ್ವಿಯಾದರು.

ನಂತರ ಬಂದ ಮಾರ್ಕಸ್ ಸ್ಟೊಯಿನಿಸ್ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ರಿಷಭ್ ಪಂತ್, ಎರಡು ಬೌಂಡರಿಗೆಲ ನೆರವಿನಿಂದ 15 ರನ್ ಗಳಿಸಿ ಔಟಾಗದೆ ಉಳಿದರು. ಚೆನ್ನೈ ಪರ ಶಾರ್ದೂಲ್ ಎರಡು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್  ಸುರೇಶ್ ರೈನ್ ಅವರ ಆಕರ್ಷಕ 54 ಮತ್ತು ಸ್ಯಾಮ್ ಕರನ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ನಾಯಕ ಧೋನಿ 
ಡಕ್ ಔಟ್ ಆದರೆ, ಮೊಯಿಲ್ ಅಲಿ 36, ರವೀಂದ್ರ ಜಡೇಜಾ 26, ಅಂಬಟಿ ರಾಯುಡು 23 ರನ್ ಗಳಿಸಿದರು.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp