ಕ್ರಿಕೆಟ್: ಭಾರತ ಎ ತಂಡದ ಇಂಗ್ಲೆಂಡ್ ಪ್ರವಾಸ ಮುಂದೂಡಿಕೆ

ಭಾರತ ಎ ತಂಡದ ಇಂಗ್ಲೆಂಡ್ ಪ್ರವಾಸವನ್ನು ಮುಂದೂಡಿಕೆ ಮಾಡಲು ಬಿಸಿಸಿಐ ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗಳು ಸಮ್ಮತಿ ಸೂಚಿಸಿವೆ.
ಭಾರತ ತಂಡ
ಭಾರತ ತಂಡ

ನವದೆಹಲಿ: ಭಾರತ ಎ ತಂಡದ ಇಂಗ್ಲೆಂಡ್ ಪ್ರವಾಸವನ್ನು ಮುಂದೂಡಿಕೆ ಮಾಡಲು ಬಿಸಿಸಿಐ ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗಳು ಸಮ್ಮತಿ ಸೂಚಿಸಿವೆ.

ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಗಾಗಿ ಸಿದ್ಧತೆ ಮಾಡಿಕೊಳ್ಳಲು ಭಾರತ ಎ ತಂಡ ಇಂಗ್ಲೆಂಡ್ ಪ್ರವಾಸಕ್ಕೆಲ ಅಣಿಯಾಗಿತ್ತು. ಭಾರತ ಎ ತಂಡ ಇಂಗ್ಲೆಂಡ್ ವಿರುದ್ಧ 4 ದಿನಗಳ 2 ಅನಧಿಕೃತ ಪಂದ್ಯಗಳನ್ನಾಡಬೇಕಿತ್ತು. ಬದಲಾದ ಸನ್ನಿವೇಶದಲ್ಲಿ ಭಾರತ ಎ ತಂಡದ ಇಂಗ್ಲೆಂಡ್ ಪ್ರವಾಸವನ್ನು  ಮುಂದೂಡಲಾಗಿದೆ. ಆದರೆ ಬದಲಾದ ವೇಳಪಟ್ಟಿಯಿಂದಾಗಿ ಭಾರತ ಎರಡು ಇಂಟ್ರಾ ಸ್ಕ್ವಾಡ್ ಪಂದ್ಯಗಳನ್ನಾಡಲಿದ್ದು, ಇಂಡಿಯಾ ಮೆನ್ ಮತ್ತು ಇಂಡಿಯಾ ಎ ನಡುವೆ 2 ನಾಲ್ಕು ದಿನಗಳ ಪಂದ್ಯಗಳು ಜುಲೈನಲ್ಲಿ ನಡೆಯಲಿದೆ. ಈ ಪಂದ್ಯಗಳು ನಡೆಯಲಿರುವ ಮೈದಾನಗಳನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ  ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನದ ಮಂಡಳಿಗಳೊಂದಿಗಿನ ಚರ್ಚೆಯ ಬಳಿಕ ಪ್ರಥಮ ದರ್ಜೆ ಕೌಂಟಿ ಪಂದ್ಯಗಳ ವಿರುದ್ಧ ತಮ್ಮ ನಿಗದಿತ ಪುರುಷರ ಪ್ರವಾಸ ಪಂದ್ಯಗಳನ್ನು ರದ್ದುಗೊಳಿಸಲು ಕ್ರಿಕೆಟ್ ಮಂಡಳಿಗಳು ಒಪ್ಪಿವೆ. ನ್ಯೂಜಿಲೆಂಡ್, ಶ್ರೀಲಂಕಾ, ಮತ್ತು ಪಾಕಿಸ್ತಾನದ ಪುರುಷರ ತಂಡಗಳು ಈ  ಬೇಸಿಗೆಯಲ್ಲಿ ತಮ್ಮ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸೂಕ್ತ ಸಿದ್ಧತೆ ನಡೆಸಲು ಇಂಟ್ರಾ-ಸ್ಕ್ವಾಡ್ ಪಂದ್ಯಗಳನ್ನು ಆಡಲಿವೆ. 

ಈ ಬಗ್ಗೆ ಮಾತನಾಡಿರುವ ಇಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಹ್ಯಾರಿಸನ್ ಅವರು, ಈ ಒಪ್ಪಂದಗಳು ಬೇಸಿಗೆಯಲ್ಲಿ ನಡೆಯಲಿರುವ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸುವತ್ತ ಗಮನಹರಿಸಲು ಇಸಿಬಿಗೆ ಅವಕಾಶ ನೀಡುತ್ತದೆ. ಅಂತೆಯೇ  ಅಭಿಮಾನಿಗಳು ಕ್ರೀಡಾಂಗಣಗಳಿಗೆ ಮರಳಲು ಸಜ್ಜಾಗುತ್ತಿದ್ದು, ಈ ಬೇಸಿಗೆಯಲ್ಲಿ ಪುರುಷರ ಮತ್ತು ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಅನ್ನು ಸ್ಮರಣೀಯವಾಗಿಸಲು ನಾವು ಎದುರು ನೋಡುತ್ತಿದ್ದೇವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸುರಕ್ಷಿತವಾದ ವಾತಾವರಣವನ್ನು ಖಾತರಿಪಡಿಸುವುದು ನಮ್ಮ ಮೊದಲ  ಆದ್ಯತೆಯಾಗಿದೆ ಮತ್ತು ನಮ್ಮ ಸಹ ಮಂಡಳಿಗಳ ತಿಳುವಳಿಕೆಯನ್ನು ನಾವು ಪ್ರಶಂಸಿಸುತ್ತೇವೆ ಎಂದು ಹೇಳಿದ್ದಾರೆ.

"ಈ ಬೇಸಿಗೆಯ ನಂತರದ ದಿನಗಳಲ್ಲಿ ಮತ್ತು ನಿರ್ಬಂಧಗಳು ಸಡಿಲಗೊಂಡಾಗ ಭಾರತ ಪುರುಷರ ತಂಡದ ಪ್ರವಾಸವನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ. ಇದು ಎರಡೂ ದೇಶಗಳ ಆಟಗಾರರಿಗೆ ಉತ್ತಮ ಗುಣಮಟ್ಟದ ಕ್ರಿಕೆಟ್ ಅನುಭವಿಸಲು ಮತ್ತು ನಮ್ಮ ಇಂಗ್ಲೆಂಡ್ ತಂಡದ ಪ್ರತಿಭೆಯನ್ನು  ಪ್ರದರ್ಶಿಸಲು ಒಂದು ಅಮೂಲ್ಯವಾದ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.

ಆಗಸ್ಟ್ 2021 ರಲ್ಲಿ ಪ್ರಾರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಇಂಗ್ಲೆಂಡ್‌ನೊಂದಿಗೆ ಸೆಣಸಲಿದೆ. ಈ ಪಂದ್ಯಗಳು ಆಗಸ್ಟ್ 4ರಿಂದ ಆರಂಭವಾಗಲಿದ್ದು. ಟ್ರೆಂಟ್ ಬ್ರಿಡ್ಜ್, ಲಾರ್ಡ್ಸ್, ಎಮರಾಲ್ಡ್ ಹೆಡಿಂಗ್ಲೆ, ಕಿಯಾ ಓವಲ್ ಮತ್ತು ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com