ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ಅವಮಾನ: ಅಭಿಮಾನಿಗಳ ಆಕ್ರೋಶಕ್ಕೆ ತತ್ತರಿಸಿದ ಸ್ವಿಗ್ಗಿ!

ಟೀಂ ಇಂಡಿಯಾ ಆಟಗಾರ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರ ತಿರುಚಿದ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಫುಡ್ ಡೆಲಿವರಿ ಅಪ್ಲಿಕೇಶನ್ ಸ್ವಿಗ್ಗಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. 
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಮುಂಬೈ: ಟೀಂ ಇಂಡಿಯಾ ಆಟಗಾರ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರ ತಿರುಚಿದ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಫುಡ್ ಡೆಲಿವರಿ ಅಪ್ಲಿಕೇಶನ್ ಸ್ವಿಗ್ಗಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. 

ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ವೇಳೆ ಸ್ವಿಗ್ಗಿ ರೋಹಿತ್ ಶರ್ಮಾರನ್ನು ಟ್ವೀಟರ್ ನಲ್ಲಿ ಟ್ರೋಲ್ ಮಾಡಿತ್ತು. ಇದರಿಂದ ಕೆರಳಿದ ಅಭಿಮಾನಿಗಳು ಬಾಯ್ ಕಾಟ್ ಸ್ವಿಗ್ಗಿ ಟ್ವೀಟರ್ ಟ್ರೆಂಡ್ ಆರಂಭಿಸಿದ್ದರು.

ರೋಹಿತ್ ಶರ್ಮಾ ವಡಾಪಾವ್ ಅಂಗಡಿ ಮುಂದೆ ನಿಂತಿರುವಂತೆ ಎಡಿಟ್ ಮಾಡಲಾಗಿದ್ದ ಫೋಟೋವನ್ನು ಸ್ವಿಗ್ಗಿ ಟ್ವೀಟ್ ಮಾಡಿತ್ತು. ಇದರ ವಿರುದ್ಧ ರೋಹಿತ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅಭಿಮಾನಿಗಳಿಂದ ತೀವ್ರ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದರಿಂದ ಎಚ್ಚೆತ್ತ ಸ್ವಿಗ್ಗಿ ತಾನು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದೆ. 

ನಂತರ ಮತ್ತೊಂದು ಟ್ವೀಟ್ ಮಾಡಿ, ಯಾರೋ ಅಭಿಮಾನಿ ಮಾಡಿದ್ದ ಫೋಟೋವನ್ನು ನಾವು ಟ್ವೀಟ್ ಮಾಡಿದ್ದೇವು ಅಷ್ಟೇ. ಅದರಿಂದ ಯಾರನ್ನೂ ಅವಮಾನಿಸುವ ಉದ್ದೇಶ ನಮ್ಮದಿರಲಿಲ್ಲ. ನಾವು ಯಾವಾಗಲೂ ರೋಹಿತ್ ಶರ್ಮಾ ಪರ ಇದ್ದೇವೆ ಎಂದು ಟ್ವೀಟ್ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com