ಐಪಿಎಲ್ 2021: ಔಟಾದ ಕೋಪದಲ್ಲಿ ಚೇರ್ ಗಳಿಗೆ ಹಾನಿ, ಆರ್ ಸಿಬಿ ನಾಯಕ ಕೊಹ್ಲಿ ನೀತಿ ಸಂಹಿತೆ ಉಲ್ಲಂಘನೆ!

ಐಪಿಎಲ್ 2021 ಆವೃತ್ತಿಯ ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಔಟಾದ ಕೋಪದಲ್ಲಿ ಚೇರ್ ಗಳಿಗೆ ಹಾನಿ ಮಾಡುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ,
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಚೆನ್ನೈ: ಐಪಿಎಲ್ 2021 ಆವೃತ್ತಿಯ ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಔಟಾದ ಕೋಪದಲ್ಲಿ ಚೇರ್ ಗಳಿಗೆ ಹಾನಿ ಮಾಡುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ,

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ನಡೆದ ಪಂದ್ಯದಲ್ಲಿ ಘಟನೆ ನಡೆದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಎಂದಿನಂತೆ  ಬ್ಯಾಟ್  ಬೀಸಲು ಸಾಧ್ಯವಾಗಿರಲಿಲ್ಲ. 29 ಎಸೆತಗಳನ್ನು ಎದುರಿಸಿದರೂ ಕೇವಲ 33 ರನ್‌ಗಳನ್ನಷ್ಟೇ ಗಳಿಸಿದ್ದರು. 

ಜೇಸನ್ ಹೋಲ್ಡರ್ ಎಸೆತದಲ್ಲಿ ವಿಜಯ್ ಶಂಕರ್‌ ಗೆ ಕ್ಯಾಚ್ ನೀಡಿ ಕೊಹ್ಲಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದರು. ಈ ಸಂದರ್ಭದಲ್ಲಿ ಸಂಯಮವನ್ನು ಕಳೆದುಕೊಂಡ ಕೊಹ್ಲಿ ಮೊದಲು ಬೌಂಡರಿ ಹಗ್ಗವನ್ನು ಇನ್ನು ಮುಂದಕ್ಕೆ ಸಾಗಿಸಿ ಡಗೌಟ್‌ನಲ್ಲಿದ್ದ ಕುರ್ಚಿಯನ್ನು ಬ್ಯಾಟ್‌ನಿಂದ ಹೊಡೆದುರುಳಿಸಿದರು. 

ಇದು ಇಂಡಿಯನ್ ಪ್ರೀಮಿಯರ್ ಲೀಗ್‌ನ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಕೊಹ್ಲಿಯ ಈ ನಡೆ ಲೆವೆಲ್ 1 ಅಪರಾಧ 2.2 ಸರಿಸಮಾನವಾಗಿದ್ದು, ಕೊಹ್ಲಿ ಕೂಡ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕೊಹ್ಲಿ ಐಪಿಎಲ್ ನ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.2 ಗೆ ಒಪ್ಪಿಕೊಂಡಿದ್ದಾರೆ. ನೀತಿ  ಸಂಹಿತೆಯ ಹಂತ 1 ಉಲ್ಲಂಘನೆಗಾಗಿ, ಪಂದ್ಯದ ತೀರ್ಪುಗಾರರ ನಿರ್ಧಾರವು ಅಂತಿಮವಾಗಲಿದೆ ಎಂದು ಐಪಿಎಲ್ ಹೇಳಿಕೆ ಬಿಡುಗಡೆ ಮಾಡಿದೆ. ಅಂತೆಯೇ ಕೊಹ್ಲಿ ನಡೆಯನ್ನು ಮ್ಯಾಚ್ ರೆಫರಿ ಖಂಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com